ಭಾರತದ ಭವ್ಯ ಹಂದರ ಶ್ರೀರಾಮ ಮಂದಿರ: ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್

KannadaprabhaNewsNetwork |  
Published : Jan 23, 2024, 01:52 AM IST
22ಕೆಕೆಆರ್1:ಶ್ರೀ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಕುಕನೂರಿನ ಬಜಾರ್ ಮಾರುತಿ ದೇವಸ್ಥಾನದಿಂದ ಜೋಡು ಮಾರುತೇಶ್ವರ ದೇವಸ್ಥಾನ ಹಾಗು ಮಹಾಮಾಯಾ ದೇವಸ್ಥಾನದವರೆಗೆ ಪಾದಯಾತ್ರೆ ಜರುಗಿತು. ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಹಾಗು ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗೌರಾ ಬಸವರಾಜ ಇತರರಿದ್ದರು.  | Kannada Prabha

ಸಾರಾಂಶ

ಶ್ರೀರಾಮ ಮಂದಿರ ಉದ್ಘಾಟನೆ ಆಗಿರುವುದು ಭಾರತದ ಭವ್ಯತೆಯ ಪ್ರತೀಕವಾಗಿದೆ. ಕೋಟಿ ಕೋಟಿ ಭಾರತೀಯರ ಹೃದಯಾಳದಿಂದ ಮಂದಿರ ಮೂಡಿದೆ. ಇದು ಭಾರತದ ದಿವ್ಯ ಹಂದರವಾಗಿದೆ.

ಕುಕನೂರು: ಶ್ರೀರಾಮ ಮಂದಿರ ಉದ್ಘಾಟನೆ ಆಗಿರುವುದು ಭಾರತದ ಭವ್ಯತೆಯ ಪ್ರತೀಕವಾಗಿದೆ. ಕೋಟಿ ಕೋಟಿ ಭಾರತೀಯರ ಹೃದಯಾಳದಿಂದ ಮಂದಿರ ಮೂಡಿದೆ. ಇದು ಭಾರತದ ದಿವ್ಯ ಹಂದರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಹೇಳಿದರು.

ಮಂದಿರ ಉದ್ಘಾಟನೆ ಪ್ರಯುಕ್ತ ಪಟ್ಟಣದ ಬಜಾರ್ ಮಾರುತಿ ದೇವಸ್ಥಾನದಲ್ಲಿ ಶ್ರೀರಾಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಪಟ್ಟಣದ ಜೋಡು ಮಾರುತೇಶ್ವರ ದೇವಸ್ಥಾನ ಹಾಗೂ ಮಹಾಮಾಯಾ ದೇವಸ್ಥಾನದವರೆಗೆ ಜರುಗಿದ ಪಾದಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕರಸೇವಕರ, ಹಿರಿಯರ ಭವ್ಯ ಕನಸು ನನಸಾಗಿದೆ. ಹೋರಾಟದ ಹಾದಿ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಆಗಿದ್ದಾರೆ. ಹಿಂದೆ ರಾಮಾಯಣದಲ್ಲಿ ಶ್ರೀರಾಮ ವನವಾಸಕ್ಕೆ ತೆರಳಿ, ಕಷ್ಟಗಳನ್ನು ಅನುಭವಿಸಿದ. ತಂದೆಯ ಮಾತಿನಂತೆ ಕಾಡಿಗೆ ತೆರಳಿದ. ನಂತರ ಅಯೋಧ್ಯೆಗೆ ಮರಳಿದ ಸಂದರ್ಭದಲ್ಲಿ ಪ್ರಜೆಗಳು ಆತನಿಗೆ ನೀಡಿದ ಪ್ರೀತಿ ಅಪಾರ. ರಾಮನನ್ನು ಕಂಡು ಪ್ರಜೆಗಳು ಹರ್ಷರಾಗಿದ್ದರು. ಅಂದಿನ ಹರ್ಷೋದ್ಘಾರ ಮತ್ತೆ ನಮಗೆ ಮರಳಿದೆ. ರಾಮನು ಮಂದಿರದಲ್ಲಿ ಸ್ಥಾಪನೆಯಾಗಿರುವುದು ಭಾರತೀಯರಲ್ಲಿ ಹರ್ಷವನ್ನು ಇಮ್ಮಡಿಗೊಳಿಸಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಯಜಮಾನತ್ವದಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡಿರುವುದು ಹೆಮ್ಮೆಯ ಸಂಗತಿ. ಇದೊಂದು ಭಾರತದ ಅಭೂತಪೂರ್ವ ಸಮಯವೂ ಹೌದು. ಭಾರತೀಯರ ನೂರಾರು ವರ್ಷಗಳ ಹೋರಾಟದ ಫಲ ಸಿಕ್ಕಿದೆ. ಶ್ರೀರಾಮ ಮಂದಿರ ಇಡೀ ವಿಶ್ವಕ್ಕೆ ಭವ್ಯ ಮಂದಿರ ಆಗಲಿದೆ. ಭಾರತದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಶ್ರೀರಾಮನ ಗುಣ, ಆತನ ಜನರ ಪ್ರೀತಿ, ಸ್ವಭಾಗಳನ್ನು ನಾವು ಪಾಲಿಸಬೇಕು. ಅಂತಹ ದಿವ್ಯ ಚೇತನನಿಗೆ ಮಂದಿರ ನಿರ್ಮಿಸಲು ಕಾರಣೀಭೂತರಾದ ರಾಷ್ಟ್ರದ ಪ್ರತಿಯೊಬ್ಬ ಜನತೆಯ ಸಹಕಾರ ಅತ್ಯಂತ ಶ್ರೇಷ್ಠ ಆದದ್ದು ಎಂದರು.ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌರಾ ಬಸವರಾಜ ಮಾತನಾಡಿ, ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನೂರಾರು ವರ್ಷಗಳಿಂದ ಸಾವಿರಾರು ಜನರು ಹೋರಾಟ ಮಾಡುತ್ತಾ ಬಂದಿದ್ದಾರೆ. ಆ ಹೋರಾಟದ ಫಲ ಮಂದಿರ ನಿರ್ಮಾಣವಾಗಿದೆ. ಭಾರತೀಯರ ಅಭಿಲಾಷೆ ಈಡೇರಿದೆ. ಮಂದಿರ ನಿರ್ಮಾಣಕ್ಕೆ ಶತಕಗಳೇ ಉರುಳಿವೆ. ಮಂದಿರ ಉದ್ಘಾಟನೆಯಿಂದ ಶತಮಾನಗಳ ಕನಸು ನೆರವೇರಿದೆ ಎಂದರು.ಮಾಹಾಮಾಯಾ ದೇವಸ್ಥಾನದಲ್ಲಿ ನವೀನ ಗುಳಗಣ್ಣನವರ್ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರನ್ನು ಬ್ರಾಹ್ಮಣ ಸಮಾಜದಿಂದ ಸನ್ಮಾನಿಸಲಾಯಿತು.ಪ್ರಮುಖರಾದ ಶಿವಕುಮಾರ ನಾಗಲಾಪುರಮಠ, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಶಂಭು ಜೋಳದ, ಪ್ರಕಾಶ ಬೋರಣ್ಣನವರ್, ವೀರೇಶ ಸಬರದ, ಶಿವರಾಜಗೌಡ ಯಲ್ಲಪ್ಪಗೌಡ್ರು, ಮಾರುತಿ ಗಾವರಾಳ, ಕರಬಸಯ್ಯ ಬಿನ್ನಾಳ, ರಾಜು ದ್ಯಾಂಪೂರ, ಮಹಾಂತೇಶ ಹೂಗಾರ, ಬಸವರಾಜ ಹಾಳಕೇರಿ, ರವಿ ಜಕ್ಕಾ, ಮಂಜುನಾಥ ಮಾಲಗಿತ್ತಿ, ಬಸವರಾಜ ಉಮಚಗಿ, ಮಂಜುನಾಥ, ಶಶಿ ಭಜಂತ್ರಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ