ನೇ ಬಾರಿಗೂ ಶೇ.100 ರ ಫಲಿತಾಂಶ: ಕೆ.ಎಸ್.ಸುರೇಶ್ ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಬಾಲೇನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆ ಶೇ.100 ಫಲಿತಾಂಶ ದಾಖಲಿಸಿದ್ದಲ್ಲದೆ, ಸರ್ಕಾರಿ ಶಾಲೆಗಳಲ್ಲಿ ತಾಲೂಕಿನಲ್ಲಿ ಮೊದಲ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಕಳೆದ 2017-18ರಲ್ಲಿ ಆರಂಭವಾದ ಈ ಶಾಲೆ ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂರು ಬಾರಿ ಶೇ.100 ರಷ್ಟು ಫಲಿತಾಂಶ ದಾಖಲಿಸಿದ್ದು 4ನೇ ಬಾರಿಗೂ ಶೇ.100 ರ ಫಲಿತಾಂಶ ದಾಖಲಿಸುವ ಮೂಲಕ ಶಿಕ್ಷಣ ಇಲಾಖೆಯ ಗೌರವವನ್ನು ಹೆಚ್ಚಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದ್ದಾರೆ.ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸಲು ಹಲವಾರು ರೀತಿಯ ಪರಿಶ್ರಮವಹಿಸಲಾಗಿತ್ತು. ಆದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಏರಿಕೆಯಾಗದಿದ್ದರೂ ಬಾಲೇನಹಳ್ಳಿಯ ಇಂದಿರಾಗಾಂಧಿ ಶಾಲೆ ಶೇ.100 ಫಲಿತಾಂಶ ದಾಖಲಿಸುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿರುವ ಶಿಕ್ಷಣದ ಕಾಳಜಿಯನ್ನು ತೋರಿಸಿದೆ.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ದಿವಾಕರ್ ಮಾತನಾಡಿ, ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಶಾಲೆಗೆ ನಿರಂತರ ಭೇಟಿ ನೀಡಿ ಮಾರ್ಗದರ್ಶನ ಮಾಡಿದ್ದು ಶಾಲೆಯ ಎಲ್ಲಾ ಬೋಧಕ ವರ್ಗ ಮಕ್ಕಳಿಗೆ ಶಿಸ್ತು ಮತ್ತು ಸಂಯಮದೊಂದಿಗೆ ಬೋಧನೆ ಮಾಡಿದ್ದು, ಶೇ.100 ರಷ್ಟು ಫಲಿತಾಂಶ ದಾಖಲಿಸಲು ಕಾರಣವಾಗಿದೆ ಎಂದು ಶಾಲೆಯ ಪ್ರಾಂಶುಪಾಲ ನಾಗರಾಜ ಗೋಪಾಲಪುರ ತಿಳಿಸಿದ್ದಾರೆ.ಒಟ್ಟು 49 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಆ ಪೈಕಿ 13 ಅತ್ಯುನ್ನತ್ತ ಶ್ರೇಣಿ, 32 ಪ್ರಥಮ ಶ್ರೇಣಿ, 4 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆರ್.ದುರ್ಗಶ್ರೀ-579, ಪಿ.ಮಧು-572, ಎಸ್.ಪೂರ್ಣಿಮಾ-571, ಕೆ.ಎನ್.ಹೇಮಂತ್-569, ಬಿ.ದೀಕ್ಷಿತಾ-567, ಎಂ.ದೇವೀರಮ್ಮ-560, ಆರ್.ಹೇಮಂತ್-558, ಕೆ.ಬೊಮ್ಮಲಿಂಗ-550, ಎಚ್.ಕುಸುಮ-546, ಎ.ಅಭಿಷೇಕ್-545, ಓ.ಬೋರಮ್ಮ-541, ಆರ್.ಅನುಷ-537, ಎಸ್.ಎಂ.ಧಾರಮದಲಿಂಗ ನಾಯಕ-532 ಪಡೆದು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ. ಶಾಲೆಯ ಬೋಧಕ ವರ್ಗ ಬಿ.ಕೇಶವಮೂರ್ತಿ, ಎಚ್.ಆಶಾ, ಎನ್.ಎಂ.ಉಷಾ, ಟಿ.ವಿನೋಧಮ್ಮ, ವಸಂತಕುಮಾರಿ, ಬಿ.ನಿಂಗಣ್ಣ, ಸೋಮು ಚೌವ್ಹಾಣ, ಆರ್.ಮೇಘನಾ, ರುದ್ರಮುನಿ ಉತ್ತಮ ಬೋಧನೆ ಫಲಿತಾಂಶ ದಾಖಲಿಸಲು ಸಹಕಾರಿಯಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.