ಇಂದಿರಾಗಾಂಧಿ ದೇಶ ಕಂಡ ಪ್ರಭಾವಿ ಮಹಿಳೆ

KannadaprabhaNewsNetwork |  
Published : Oct 11, 2025, 12:02 AM IST
10ಕೆಪಿಎಲ್21 ಕೊಪ್ಪಳ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ  ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಅಂಗವಾಗಿ ಜಾಗೃತಿ ವಾಹನಕ್ಕೆ ಚಾಲನೆ | Kannada Prabha

ಸಾರಾಂಶ

ಕಾರ್ಖಾನೆಗಳಿಂದ ದೊಡ್ಡ ಪ್ರಮಾಣದ ಮಾಲಿನ್ಯ ಉಂಟಾಗುತ್ತಿದ್ದು, ಸ್ಥಳಿಯವಾಗಿ ಕಾರ್ಖಾನೆಗಳು ಹೆಚ್ಚು ತೊಂದರೆ ಉಂಟು ಮಾಡುತ್ತಿವೆ

ಕೊಪ್ಪಳ: ದೇಶದ ಇತಿಹಾಸದಲ್ಲಿ ಇಂದಿರಾ ಗಾಂಧಿ ಅತ್ಯಂತ ಪ್ರಭಾವಿ ಮತ್ತು ಶಕ್ತಿಶಾಲಿ ಮಹಿಳೆ, ಆಕೆಯನ್ನು ಸ್ವಂತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಇಂದಿರಾ ಸಿಂಹಿಣಿ ಎಂದು ಲೋಕಸಭೆಯಲ್ಲಿಯೇ ಹೊಗಳಿದ್ದು ಅದಕ್ಕೆ ಸಾಕ್ಷಿ ಎಂದು ಗ್ಯಾರಂಟಿ ಯೋಜನೆ ಸದಸ್ಯೆ ಜ್ಯೋತಿ ಎಂ.ಗೊಂಡಬಾಳ ನೆನಪಿಸಿಕೊಂಡರು.

ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಮತ್ತು ಅ.೩೧ ರಂದು ನಡೆಯುವ ಇಂದಿರಾ ಗಾಂಧಿ ಜನ್ಮ ದಿನದ ಪ್ರಯುಕ್ತ ಮಂಡಳಿ ಮೂಲಕ ಹಮ್ಮಿಕೊಂಡ ಜಾಗೃತಿ ಮಾಹಿತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಖಾನೆಗಳಿಂದ ದೊಡ್ಡ ಪ್ರಮಾಣದ ಮಾಲಿನ್ಯ ಉಂಟಾಗುತ್ತಿದ್ದು, ಸ್ಥಳಿಯವಾಗಿ ಕಾರ್ಖಾನೆಗಳು ಹೆಚ್ಚು ತೊಂದರೆ ಉಂಟು ಮಾಡುತ್ತಿವೆ, ಅದಕ್ಕೆ ಹೊಸ ಕಾರ್ಖಾನೆ ಮತ್ತು ಕಾರ್ಖಾನೆಗಳ ವಿಸ್ತೀರ್ಣ ವಿರೋಧಿಸಿ ಹೋರಾಟ ನಡೆದಿದ್ದು , ಸರ್ಕಾರ ಅದರ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಮಾರ್ಗದರ್ಶನದಲ್ಲಿ ರಾಜ್ಯದ ೩೧ಜಿಲ್ಲೆಗಳಲ್ಲಿ ಎಲ್.ಇ.ಡಿ.ಡಿಸ್ಪೆ ವಾಲ್ ಹೊಂದಿರುವ ವಾಹನ ಕಳುಹಿಸಿದ್ದು, ಅದರ ಮಾಲಿನ್ಯ ನಿಯಂತ್ರಣ ಮತ್ತು ದೇಶದ ಪ್ರಗತಿಗೆ ಇಂದಿರಾ ಕೊಡುಗೆ ಕುರಿತು ವಿಡಿಯೋ ಪ್ರದರ್ಶನ ಮಾಡಿ ಜನರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಾಹನ ಜಿಲ್ಲೆಯಾದ್ಯಂತ ಸಂಚರಿಸಿ ಮೂರು ದಿನ ಮಾಹಿತಿ ನೀಡಲಿದೆ.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ.ಗೊಂಡಬಾಳ, ಕಿಮ್ಸ್ ಆಡಳಿತ ಮಂಡಳಿ ನಾಮನಿರ್ದೇಶಿತ ಸದಸ್ಯ ಸಲೀಂ ಅಳವಂಡಿ, ನಗರಸಭೆ ಸದಸ್ಯರಾದ ಬಸಯ್ಯಸ್ವಾಮಿ ಹಿರೇಮಠ ಮತ್ತು ಅಕ್ಬರ್ ಪಾಶಾ ಪಲ್ಟನ್, ಜಿಲ್ಲಾ ರಾಜೀವಗಾಂಧಿ ಪಂಚಾಯತ್‌ರಾಜ್ ಸೆಲ್ ಅಧ್ಯಕ್ಷ ಸುರೇಶ ದಾಸರಡ್ಡಿ, ಜಿಲ್ಲಾ ಡಿಸಿಸಿ ಕಾರ್ಯದರ್ಶಿ ಪದ್ಮಾ ಕಂಬಳಿ, ಜಾಫರ್ ಸಂಗಟಿ, ಭೀಮಣ್ಣ ಹಿರೇಮನಿ, ಜಿಲಾನ್ ತಟಗಾರ ಅನೇಕರಿದ್ದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ