ವಿಕಸಿತ ಕೃಷಿ ಸಂಕಲ್ಪ ಅಭಿಯಾನ ರೈತರಿಗೆ ಮಾಹಿತಿ

KannadaprabhaNewsNetwork |  
Published : Jun 02, 2025, 11:57 PM ISTUpdated : Jun 02, 2025, 11:58 PM IST
53 | Kannada Prabha

ಸಾರಾಂಶ

ಸುತ್ತೂರು: ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜಿಲ್ಲೆಯ ಕೃಷಿ ಸಂಬಂಧಿತ ಆಧಿಕಾರಿಗಳೊಂದಿಗೆ ಹಾಗೂ ವಿವಿಧ ಕೃಷಿ ಸಂಶೋಧನಾ ವಿಜ್ಞಾನಿಗಳೊಂದಿಗೆ ಮೂರು ತಂಡಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಸುತ್ತೂರು: ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜಿಲ್ಲೆಯ ಕೃಷಿ ಸಂಬಂಧಿತ ಆಧಿಕಾರಿಗಳೊಂದಿಗೆ ಹಾಗೂ ವಿವಿಧ ಕೃಷಿ ಸಂಶೋಧನಾ ವಿಜ್ಞಾನಿಗಳೊಂದಿಗೆ ಮೂರು ತಂಡಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ತಾಲೂಕಿನ ಗುಂಗ್ರಾಲ್‌ ಛತ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಡಾ.ಜಿ.ಎಂ. ವಿನಯ್ ಅವರು ಮುಂಗಾರಿನಲ್ಲಿ ಕೃಷಿ ಭೂಮಿ ಸಿದ್ಧತೆ, ಹಸಿರೆಲೆ ಗೊಬ್ಬರಗಳ ಬಳಕೆ ಮತ್ತು ಉಪಯೋಗಗಳು, ಮುಂಗಾರಿನ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು.

ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋದ ಡಾ.ಬಿ. ಗುಂಡಪ್ಪ ಅವರು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋದ ಕಾರ್ಯ ಚಟುವಟಿಕೆಗಳ ಬಗ್ಗೆ ಅಲ್ಲಿನ ರೈತರಿಗೋಸ್ಕರ ನಡೆಯುತ್ತಿರುವ ಸಂಶೋಧನೆ ಕಾರ್ಯಗಳ ಬಗ್ಗೆ ರೈತರಿಗೆ ತಿಳಿಸಿದರು.

ಮುಖ್ಯ ಬೆಳೆಯಾದ ಮುಸುಕಿನ ಜೋಳಕ್ಕೆ ಹೆಚ್ಚಾಗಿ ಬರುವ ಸೈನಿಕ ಹುಳುವಿನ ಬಾಧೆ, ಅದರ ಲಕ್ಷಣಗಳು ಹಾಗೂ ಅವುಗಳ ಜೈವಿಕ ನಿಯಂತ್ರಣ ಕುರಿತು ರೈತರಿಗೆ ಮಾಹಿತಿ ನೀಡಿದರು. ತೆಂಗಿನಲ್ಲಿ ಬರುವ ಕೀಟಗಳ ನಿಯಂತ್ರಣದ ಬಗ್ಗೆ ವಿವರಿಸಿದರು. ಮೈಸೂರಿನ ತೋಟಗಾರಿಕಾ ಕಾಲೇಜಿನ ಡಾ. ಸಿದ್ದಪ್ಪ ಅವರು ತೊಟ್ಟಪಟ್ಟಿ ಬೆಳೆಗಳಲ್ಲಿ ಬರುವ ಸಮಸ್ಸೆಗಳನ್ನು ತಿಳಿಸಿ ಅವುಗಳ ಜೈವಿಕ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ತೆಂಗಿನಲ್ಲಿ ಪೋಷಕಾಂಶಗಳ ನಿರ್ವಹಣೆ, ಹೊಸ ತಳಿಗಳ ಬಳಕೆ ಕುರಿತು ರೈತರಿಗೆ ಅರಿವು ಮೂಡಿಸಿದರು. ತೋಟಗಾರಿಕಾ ಕಾಲೇಜಿನ ಡಾ. ಶಿವಕುಮಾರ್ ಅವರು ಮಣ್ಣಿನ ಪರೀಕ್ಷೆ, ಮಣ್ಣು ಸಂರಕ್ಷಣೆ ಹಾಗೂ ಮುಂಗಾರಿನಲ್ಲಿ ಮಣ್ಣಿನ ಆರೋಗ್ಯ ಕಾಪಾಡುವ ಪದ್ಧತಿ ಹಾಗೂ ಮಣ್ಣಿನಲ್ಲಿ ಸಾವಯುವ ಅಂಶವನ್ನು ಹೆಚ್ಚಿಸುವ ಕ್ರಮಗಳ ಕುರಿತು ಹಾಗೂ ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯ ಲಕ್ಷಣಗಳು ಹಾಗೂ ಅವುಗಳ ನಿರ್ವಹಣೆ ಕುರಿತು ರೈತರಿಗೆ ಅರಿವು ಮೂಡಿಸಿದರು.

ಡಾ ತನ್ವೀರ್‌ ಅವರು ರೈತರಿಗೆ ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟದಿಂದ ದೊರೆಯುವ ಹೊಸ ತಂತ್ರಜ್ಞಾನಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಇಲವಾಲದ ತೋಟಗಾರಿಕಾ ಕಾಲೇಜಿನ ರೈತ ಸೇವಾ ಕೇಂದ್ರದಿಂದ ರೈತರಿಗೆ ದೊರೆಯುವ ಸಾವಯವ ಪರಿಕರಗಳ ಕುರಿತು ಮಾಹಿತಿ ನೀಡಿದರು.

ತೋಟಗಾರಿಕಾ ಅಧಿಕಾರಿ ವೆಂಕಟೇಶ್ ಮೂರ್ತಿ ಅವರು ತೋಟಗಾರಿಕಾ ಇಲಾಖೆಯ ಸವಲತ್ತುಗಳು ಹಾಗೂ ಅವುಗಳ ಸದುಪಯೋಗ, ಮುಖ್ಯವಾಗಿ ಹನಿ ನೀರಾವರಿ, ಮೈಸೂರಿನ ಭೋಗೋಳಿಕ ಬೆಳೆಗಳಿಗೆ (ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ) ಇರುವ ಸವಲತ್ತುಗಳು, ಉದ್ಯೋಗಖಾತ್ರಿ ಯೋಜನೆ ಇತರೆ ತೋಟಗಾರಿಕೆಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ನೀಡಿದರು.

ರೈತ ಮತ್ತು ವಿಜ್ಞಾನಿಗಳ ಸಂವಾದ ನಡೆಸಲಾಯಿತು. ತರಬೇತಿಯಲ್ಲಿ 75ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಭಾಗಹಿಸಿದ್ದರು.

ಎಚ್.ಡಿ. ಕೋಟೆ ತಾಲೂಕಿನ ಕೆಜಿ ಹಳ್ಳಿ, ಬೀಚನಹಳಿ, ಚಾಕಳ್ಳಿ, ಜಯಪುರ ಗ್ರಾಮಗಳಿಗೆ ಭೇಟಿ ನೀಡಿ, ಮೆಕ್ಕೆಜೋಳ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ, ಮುಸುಕಿನ ಜೋಳದ ಹೆಚ್ಚಾಗಿ ಬರುವ ಸೈನಿಕ ಹುಳುವಿನ ಬಾಧೆ, ಅದರ ಲಕ್ಷಣಗಳು ಹಾಗೂ ಅವುಗಳ ಜೈವಿಕ ನಿಯಂತ್ರಣ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

ಶುಂಠಿಯಲ್ಲಿ ಕೊಳೆ ರೋಗ ನಿರ್ವಹಣೆ, ಮಣ್ಣಿನ ಪರೀಕ್ಷೆಗೆ ಮಣ್ಣಿನ ಮಾದರಿ ಸಂಗ್ರಹಿಸುವ ವಿಧಾನಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ದೊರಕುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಬೇಸಾಯ, ತೋಟಗಾರಿಕೆ, ಪಶುಪಾಲನೆ, ಎರೆಗೊಬ್ಬರ ಉತ್ಪಾದನೆ, ನಿಖರ ಕೃಷಿ ಬೇಸಾಯ ಮುಂದಾದ ವಿಷಯಗಳನ್ನು ತಿಳಿದುಕೊಳ್ಳಲು ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಲು ಹಿರಿಯ ವಿಜ್ಞಾನಿ ಮತ್ತು ಮುಖಸ್ಥ ಡಾ. ಬಿ.ಎನ್. ಜ್ಞಾನೇಶ್‌ಅವರು ರೈತರಿಗೆ ಕರೆ ನೀಡಿದರು.

ರೈತರ ಸಭೆಯಲ್ಲಿ ಕೆವಿಕೆಯ ಡಾ. ಶಾಮರಾಜ್‌, ಬೆಂಗಳೂರಿನ ಐಸಿಎಆರ್-ಎನ್ಬಿಎಐಆರ್‌ನ ಡಾ.ಎಂ. ಸಂಪತ್‌ಕುಮಾರ್, ಐಐಎಚ್‌ಆರ್ ಸಂಸ್ಥೆಯ ಡಾ. ಪಿ. ಪ್ರೀತಿ ಪಾಲ್ಗೊಂಡಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ