ಯಂತ್ರಗಳಿಗೆ ನೀಡುವ ಮಾಹಿತಿ ನಿಷ್ಪಕ್ಷಪಾತವಾಗಿರಲಿ: ಡಾ.ಡಿ.ಕೆ.ಡಾಂಗ್

KannadaprabhaNewsNetwork |  
Published : Dec 08, 2024, 01:18 AM IST
6ಕೆಎಂಎನ್ ಡಿ28 | Kannada Prabha

ಸಾರಾಂಶ

ಮರ್ಸಿಡಿಸ್ ಬೆಂಜ್‌ನ ಆರ್ಟ್ಸ್ ವಿಭಾಗದ ಡಿಸೈನ್ ಇಂಜಿನಿಯರ್ ಸಿ. ಭವಿತ್ ತಾಂತ್ರಿಕ ಸವಾಲುಗಳನ್ನು ನಿರ್ವಹಿಸುವ ಬಗ್ಗೆ ಮತ್ತು ಪ್ರೋಗ್ರಾಮ್ ನಲ್ಲಿ ನಿರ್ವಹಿಸುವ ಸವಾಲುಗಳ ಬಗ್ಗೆ ಪ್ರಾಯೋಗಿಕ ಉದಾಹರಣೆಗಳೊಡನೆ ಕಾರ್ಪೊರೇಟ್ ಪ್ರಪಂಚದಲ್ಲಿ ಎದುರಿಸಬೇಕಾದ ಸವಾಲುಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃತಕ ಬುದ್ಧಿಮತ್ತೆಯ ವಿಕಾಸ ಯುಗದಲ್ಲಿ ಯಂತ್ರಗಳಿಗೆ ನೀಡುವ ಮಾಹಿತಿಯಲ್ಲಿ ಪಕ್ಷಪಾತ, ತಪ್ಪು ಮಾಹಿತಿ ಹಾಗೂ ದುರುಪಯೋಗವಾಗದಂತೆ ವಿನ್ಯಾಸಗೊಳಿಸಬೇಕು ಎಂದು ಸೌತ್ ಕೊರಿಯಾ ವಿಶ್ವವಿದ್ಯಾಲಯದ ಡಾ.ಡಿ.ಕೆ.ಡಾಂಗ್ ಸಲಹೆ ನೀಡಿದರು.

ತಾಲೂಕಿನ ಸುಂಡಹಳ್ಳಿ ಸಮೀಪದ ಕಾವೇರಿ ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಆನ್‌ಲೈನ್ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕೃತಕ ಬುದ್ಧಿಮತ್ತೆಯ ವಿಕಾಸದ ಯುಗದಲ್ಲಿ ಕ್ಲಿಷ್ಟಕರವಾದ ಜಿಪಿಟಿ ಮತ್ತು ಎನ್‌ಎಲ್‌ಪಿ ಸ್ವಾಭಾವಿಕ ಭಾಷೆಯ ವಿಶ್ಲೇಷಣಾ ಮತ್ತು ಮಾಡೆಲ್‌ಗಳನ್ನು ಸಂಸ್ಕರಣೆ ಮಾಡಿ ಕಂಪ್ಯೂಟರ್ ಭಾಷೆಯ ಕ್ಲಿಷ್ಟತೆಯನ್ನು ಯಂತ್ರಗಳಿಗೆ ತರಬೇತಿಗೊಳಿಸಲಾಗುತ್ತದೆ. ಆದರೆ ಈ ವೇಳೆ ತಪ್ಪು ಮಾಹಿತಿಯನ್ನು ಯಂತ್ರಕ್ಕೆ ತುಂಬದಂತೆ ಎಚ್ಚರ ವಹಿಸಬೇಕು ಎಂದರು.

ಎಲ್‌ಎಲ್‌ಎಮ್‌ಗಳನ್ನು ಟ್ರಾನ್ಸ್‌ಫಾರ್ಮರ್ ಭಾಷೆಯ ಅನುವಾದ ಮತ್ತು ವೀಕ್ಷಣೆಯ ಸಹಾಯದಿಂದ ಎಲ್ಎಲ್ಎಮ್ ಗಳು ಮತ್ತು ನ್ಯೂರಲ್ ನೆಟ್ವರ್ಕ್‌ಗಳನ್ನು ವಿನ್ಯಾಸಗೊಳಿಸಿ ಲಿಪಿಯನ್ನು ಸೃಜಿಸುವುದನ್ನು ತಿಳಿಸಿಕೊಟ್ಟರು.

ನೈತಿಕತೆಯ ವಿಷಯಗಳು ಬಹಳ ಪ್ರಾಮುಖ್ಯತೆ ಪಡೆಯುತ್ತವೆ. ಪಾರದರ್ಶಕತೆ ಮತ್ತು ಪ್ರಾಮಾಣಿಕ ಮಾಹಿತಿಯೊಂದಿಗೆ ಕೃತಕ ಬುದ್ಧಿಮತ್ತೆ ಯಂತ್ರವನ್ನು ತರಬೇತಿಗೊಳಿಸುವುದು ಮತ್ತು ಅದರ ಗುಣಮಟ್ಟದ ಸಾಮರ್ಥ್ಯವನ್ನು ಬಿಂಬಿಸುವುದರ ಬಗ್ಗೆ ವಿವರಣೆ ನೀಡಿದರು.

ಮುಖ್ಯವಾಗಿ ಸಂಶೋಧಕರು ನೈತಿಕ ತಜ್ಞರು ಮತ್ತು ಕೈಗಾರಿಕಾ ಪ್ರಮುಖರ ನಡುವೆ ಉತ್ತಮ ಸಂಮೋಹನ ಮಾಡುವುದರಿಂದ ಗುಣಮಟ್ಟದ ಎಲ್ ಎಲ್ ಎಮ್ ಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಅಭಿಪ್ರಾಯಪಟ್ಟರು .

ಮರ್ಸಿಡಿಸ್ ಬೆಂಜ್‌ನ ಆರ್ಟ್ಸ್ ವಿಭಾಗದ ಡಿಸೈನ್ ಇಂಜಿನಿಯರ್ ಸಿ. ಭವಿತ್ ಮಾತನಾಡಿ, ವಿದ್ಯಾರ್ಥಿಗಳಿಗೆ ಐಟಿ ಇನ್‌ಫರ್ಮೇಷನ್ ಕಾರ್ಪೊರೇಟ್ ಸೆಕ್ಟರ್‌ನಲ್ಲಿ ಬಳಕೆಯಲ್ಲಿರುವ ತಾಂತ್ರಿಕ ಕ್ಷೇತ್ರದಲ್ಲಿನ ಬೆಳವಣಿಗೆಗಳಾದ ಉತ್ಪನ್ನ ಆಧಾರಿತ ಮತ್ತು ಸೇವೆ ಆಧಾರಿತ ಕಂಪನಿಗಳಲ್ಲಿ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.

ತಾಂತ್ರಿಕ ಸವಾಲುಗಳನ್ನು ನಿರ್ವಹಿಸುವ ಬಗ್ಗೆ ಮತ್ತು ಪ್ರೋಗ್ರಾಮ್ ನಲ್ಲಿ ನಿರ್ವಹಿಸುವ ಸವಾಲುಗಳ ಬಗ್ಗೆ ಪ್ರಾಯೋಗಿಕ ಉದಾಹರಣೆಗಳೊಡನೆ ಕಾರ್ಪೊರೇಟ್ ಪ್ರಪಂಚದಲ್ಲಿ ಎದುರಿಸಬೇಕಾದ ಸವಾಲುಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಈ ವೇಳೆ ಕಾವೇರಿ ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಚ್.ಪಿ.ರಾಜು, ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ, ಪ್ರಾಂಶುಪಾಲ ಪ್ರೊ. ಎ.ಎಸ್. ಶ್ರೀಕಂಠಪ್ಪ, ಉಪ ಪ್ರಾಂಶುಪಾಲ ಮಂಜುನಾಥ್, ಡಾ.ಬಿ.ಟಿ.ಪರಮೇಶಾಚಾರಿ, ಡಾ.ಬಿ.ಸವಿತಾ, ಪ್ರೊ.ಎನ್.ಜ್ಯೋತ್ಸಾ, ಪ್ರೊ.ಎ.ಅರ್ಪಿತ, ಪ್ರೊ.ಅಕ್ಷತಾ, ಎಲ್.ಸೌಜನ್ಯ, ಪ್ರೊ.ಪಾಲೋಕ್ರಿಪ್ಟಾ, ಡಾ.ಕಿಯೋಹೋಯ್ ಇತರರು ಇದ್ದರು.

PREV

Recommended Stories

ದರ್ಶನ್ ಈಗ ವಿಚಾರಣಾಧೀನ ಕೈದಿ 7314
ಧರ್ಮಸ್ಥಳ ಗ್ರಾಮ: ಇಂದು ಮತ್ತೆ ಉತ್ಖನನ?