ಕನ್ನಡಪ್ರಭ ವಾರ್ತೆ, ತರೀಕೆರೆ
ಕೃಷಿ ಮಾಹಿತಿ ಕೇಂದ್ರದಲ್ಲಿ ಅಳವಡಿಸಿರುವ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿ, ರೈತರಿಗೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಗಳ ಬಗ್ಗೆ ಹೆಚ್ಚು ಮಾಹಿತಿ ಅವಶ್ಯಕತೆ ಇದೆ, ಅದರಲ್ಲಿಯೂ ಅಡಕೆ ಬೆಳೆಗಾರರಿಗೆ ಬಹಳ ಉಪಯೋಗ ವಾಗುವಂತಹ ಡ್ರೋನ್ ತಂತ್ರಜ್ಞಾನ ಮತ್ತು ಹಲವಾರು ಮೊಬೈಲ್ ಆಪ್ಸ್ ಗಳ ಬಗ್ಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ಅಡಕೆ ಬೆಳೆಗಾರರು ಸುಳಿ ಭಾಗದಲ್ಲಿ ಔಷದ ಸಿಂಪಡಣೆ ಮಾಡಲು ಬಹಳ ಸಮಸ್ಯೆಯಾಗುವುದನ್ನು ಗಮನಿಸಿ ಅದಕ್ಕೆ ಸೂಕ್ತವಾದ ತಂತ್ರಜ್ಞಾನವೆಂದರೆ ಡ್ರೋನ್ ತಂತ್ರಜ್ಞಾನ ಡ್ರೋನ್ ಗಳನ್ನು ಬಳಸಿ ಔಷಧಗಳನ್ನು ನೇರವಾಗಿ ಮರಗಳ ಸುಳಿಯ ಭಾಗಕ್ಕೆ ಸಿಂಪಡಣೆ ಮಾಡುವುದರಿಂದ ಬಹಳ ಪರಿಣಾಮಕಾರಿಯಾಗಿರುತ್ತದೆ, ರೈತರಿಗೆ ವಿಶ್ವವಿದ್ಯಾಲಯದ ಕಡೆಯಿಂದ ಡ್ರೋನ್ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲು ಅವಕಾಶವಿದ್ದು ಗ್ರಾಮದಿಂದ ಆಸಕ್ತ ರೈತರು ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಬೇಕೆಂದು ಹೇಳಿದರು.22ಕೆಟಿಆರ್.ಕೆ.3ಃ
ತರೀಕೆರೆ ತಾಲೂಕು ಲಕ್ಕವಳ್ಳಿ ನೇಗಿಲನಾದ ಕೃಷಿ ಮಾಹಿತಿ ಕೇಂದ್ರಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್‌ಸಿ ಜಗದೀಶ್ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಗ್ರಾಮದ ರೈತರೊಡನೆ ಸಂವಾದ ನಡೆಸಿದರು.