ತೆರಿಗೆ ಪಾವತಿಸಿದ್ರೆ ಮಾತ್ರ ಮೂಲಸೌಲಭ್ಯ ಲಭ್ಯ

KannadaprabhaNewsNetwork |  
Published : Dec 08, 2024, 01:16 AM IST
ಪುರಸಭೆಗೆ ತೆರಿಗೆ ಪಾವತಿಸಿ ಅಭಿವೃದ್ಧಿ ಕೆಲಸಗಳಿಗೆ ನೆರವಾಗಲು ಮುಖ್ಯಾಧಿಕಾರಿ, ಸಿಬ್ಬಂದಿ ವರ್ಗ ಜಾಗೃತಿ ಜಾಥಾ ನಡೆಸಿದರು. | Kannada Prabha

ಸಾರಾಂಶ

ಸಾರ್ವಜನಿಕರು ಪುರಸಭೆಗೆ ಸಂದಾಯ ಮಾಡಬೇಕಾಗಿರುವ ತೆರಿಗೆ ಹಣವನ್ನು ಸಕಾಲಕ್ಕೆ ಪಾವತಿಸುವಂತೆ ಶನಿವಾರ ಪುರಸಭೆ ಮುಖ್ಯಾಧಿಕಾರಿ ಸಿಬ್ಬಂದಿ ಹಾಗೂ ಕಾರ್ಮಿಕರು ಪಟ್ಟಣದಲ್ಲಿ ಜನ ಜಾಗೃತಿ ಜಾಥಾ ನಡೆಸಿದರು

ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)

ಸಾರ್ವಜನಿಕರು ತೆರಿಗೆ ಹಣ ಪಾವತಿಸಿದಾಗ ಮಾತ್ರ ಪುರಸಭೆ ವತಿಯಿಂದ ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯ. ಆಸ್ತಿ ತೆರಿಗೆ, ನೀರಿನ ಕರ, ಲೈಸೆನ್ಸ್ ನವೀಕರಣ ಕಡ್ಡಾಯವಾಗಿ ಮಾಡಿಕೊಳ್ಳಬೇಕು ಎಂದು ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ತಿಳಿಸಿದರು.

ಸಾರ್ವಜನಿಕರು ಪುರಸಭೆಗೆ ಸಂದಾಯ ಮಾಡಬೇಕಾಗಿರುವ ತೆರಿಗೆ ಹಣವನ್ನು ಸಕಾಲಕ್ಕೆ ಪಾವತಿಸುವಂತೆ ಶನಿವಾರ ಪುರಸಭೆ ಮುಖ್ಯಾಧಿಕಾರಿ ಸಿಬ್ಬಂದಿ ಹಾಗೂ ಕಾರ್ಮಿಕರು ಪಟ್ಟಣದಲ್ಲಿ ಜನ ಜಾಗೃತಿ ಜಾಥಾ ನಡೆಸಿದರು. ಪುರಸಭೆಯಿಂದ ಪ್ರಾರಂಭಗೊಂಡ ಜಾಥಾ, ಜಾಮೀಯಾ ಮಸಜೀದ, ವಿಶೇಷ ತಹಸೀಲ್ದಾರ್ ಕಚೇರಿ, ಸರ್ಕಾರಿ ಚಾವಡಿ, ಕನ್ನಡ ಶಾಲೆ, ಜವಳಿ ಬಜಾರ, ಸಿದ್ದೇಶ್ವರ ಗಲ್ಲಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ಅವರು, ಕಟ್ಟಡ ಪರವಾನಗಿ ತಗೆದುಕೊಳ್ಳದೆ ಹಲವರು ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಂತಹವರು ತಾವಾಗಿಯೇ ಬಂದು ಕಟ್ಟಡ ಅನುಮತಿ ಪಡೆದುಕೊಳ್ಳಬೇಕು. ಇಲ್ಲದಿದ್ರೆ ಯಾವುದೇ ಮುಲಾಜು ಇಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ತೆರಿಗೆ ಹಣ ಬಾಕಿ ಉಳಿಸಿಕೊಂಡವರಿಗೆ ಈಗಾಗಲೇ ನೋಟಿಸ್ ನೀಡಲಾಗುತ್ತಿದೆ. ತಕ್ಷಣವೇ ಬಾಕಿ ಹಣ ಪಾವತಿಸಬೇಕು. ಅನಧಿಕೃತ ನಳ ಜೋಡಣೆ ಹೊಂದಿದವರು ಅಧಿಕೃತವಾಗಿ ಮಾಡಿಕೊಳ್ಳಬೇಕೆಂದು ಸೂಚಿಸಿದರು. ಸಾರ್ವಜನಿಕರು ತೆರಿಗೆ ಹಣ ಪಾವತಿಸುವ ಮೂಲಕ ಪುರಸಭೆಗೆ ಸಹಕಾರ ನೀಡಿದಾಗ ಮಾತ್ರ ಸೌಲಭ್ಯ ಒದಗಿಸಲು ಸಾಧ್ಯ ಆಗುತ್ತದೆ. ಎಲ್ಲವನ್ನು ಸರ್ಕಾರದ ಅನುದಾನದಲ್ಲಿಯೇ ಮಾಡಲು ಸಾಧ್ಯ ಇಲ್ಲ ಎಂದರು. ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಕಂದಾಯ ಅಧಿಕಾರಿ ಎಫ್.ಬಿ. ಗಿಡ್ಡಿ ಸೇರಿದಂತೆ ಸಿಬ್ಬಂದಿ, ಪೌರ ಕಾರ್ಮಿಕರು ಜಾಥಾದಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು
ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ