ಮಾದರಿ ಕ್ಷೇತ್ರವನ್ನಾಗಿ ಮಾಡಲು ಕಾರ್ಯಪ್ರವೃತ್ತ: ಜಗದೀಶ ಶೆಟ್ಟರ್‌

KannadaprabhaNewsNetwork |  
Published : Aug 23, 2024, 01:09 AM IST
ಸಂಸದ ಜಗದೀಶ ಶೆಟ್ಟರ ಅವರನ್ನು ಗೋಕಾಕ ನಗರದ ಬಿ.ಎನ್. ಮಟ್ಟಿಕಲ್ಲಿ ಕಲ್ಯಾಣ ಮಂಟಪದಲ್ಲಿ ಶಂಕರಲಿಂಗ ಸಂಸ್ಥೆ ಹಾಗೂ ಸಹ ಸಂಸ್ಥೆಗಳ ಆಶ್ರಯದಲ್ಲಿ ಸತ್ಕರಿಸಿಲಾಯಿತು. | Kannada Prabha

ಸಾರಾಂಶ

ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಮಾದರಿ ಕ್ಷೇತ್ರವನ್ನಾಗಿ ಮಾಡಲು ಕಾರ್ಯಪ್ರವೃತ್ತನಾಗಿದ್ದೇನೆ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಮಾದರಿ ಕ್ಷೇತ್ರವನ್ನಾಗಿ ಮಾಡಲು ಕಾರ್ಯಪ್ರವೃತ್ತನಾಗಿದ್ದೇನೆ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಗುರುವಾರ ನಗರದ ಬಿ.ಎನ್. ಮಟ್ಟಿಕಲ್ಲಿ ಕಲ್ಯಾಣ ಮಂಟಪದಲ್ಲಿ ಶಂಕರಲಿಂಗ ಸಂಸ್ಥೆ ಹಾಗೂ ಸಹ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ದಿ.ಸುರೇಶ ಅಂಗಡಿಯವರ ಪ್ರಾರಂಭಿಸಿದ ಯೋಜನೆಗಳನ್ನು ಪೂರ್ಣಗೊಳಿಸಿ ಹೊಸ ಯೋಜನೆ ಅನುಷ್ಠಾನ, ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಅಭಿವೃದ್ಧಿ, ಕೈಗಾರಿಕೆ ಅಭಿವೃದ್ಧಿ ಸೇರಿ ಗೋಕಾಕ ತಾಲೂಕಿನಲ್ಲಿ ಶಾಸಕರು ಸಹಕಾರದೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಕಾರ್ಯಪ್ರವೃತ್ತನಾಗಿದ್ದೇನೆಎಂದರು.

ಹುಬ್ಬಳ್ಳಿಯ ಸುರೇಶ ಚನ್ನಿ, ಅನೀಲ ಕವಿಶೆಟ್ಟಿ, ನಗರದ ಜಿ.ಎಂ.ಅಂದಾನಿ, ಬಿ.ಎಂ. ಕುಬಸದ, ಶೀಲಾ ಬಿಳ್ಳೂರ, ಶಿವಲೀಲಾ ಆಲತಗಿ, ಡಾ.ಆರ್.ಎಸ್. ಗುಣಕಿ, ಬಿ.ಎಂ. ಹಿಂಡಿಹೊಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯ ಸೇರುವ ಬಗ್ಗೆ ವಿಷ್ಣುಗೆ ಇತ್ತು ಗೊಂದಲ!
ಫುಡ್‌ಸ್ಟ್ರೀಟ್‌ ಆದ ಮಾರುತಿ ಮಂದಿರ ಬಸ್‌ ನಿಲ್ದಾಣ