ಅನ್ಯಾಯ ಪ್ರಜಾಪ್ರಭುತ್ವ ರೀತಿಯಲ್ಲಿ ವಿರೋಧಿಸಬೇಕು: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Jan 18, 2026, 03:00 AM IST
ಶಿಗ್ಗಾಂವಿಯ ಬಸವರಾಜ ಬೊಮ್ಮಾಯಿ ನಿವಾಸದ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಮಾತನಾಡಿದರು. | Kannada Prabha

ಸಾರಾಂಶ

ಎಲ್ಲಿ ಅನ್ಯಾಯವಾಗುತ್ತದೆ ಅಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ವಿರೋಧ ಮಾಡಬೇಕಾಗತ್ತದೆ. ಇಲ್ಲವಾದರೆ ವಿರೋಧ ಪಕ್ಷವಾಗಿ ನಾವು ವಿಫಲವಾಗುತ್ತೇವೆ. ಎಲ್ಲೆಲ್ಲಿ ಜನರ ಬೇಡಿಕೆ ಇದೆ. ಅದರ ಪರವಾಗಿ ಹೋರಾಟ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ: ಎಲ್ಲಿ ಅನ್ಯಾಯವಾಗುತ್ತದೆ ಅಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ವಿರೋಧ ಮಾಡಬೇಕಾಗತ್ತದೆ. ಇಲ್ಲವಾದರೆ ವಿರೋಧ ಪಕ್ಷವಾಗಿ ನಾವು ವಿಫಲವಾಗುತ್ತೇವೆ. ಎಲ್ಲೆಲ್ಲಿ ಜನರ ಬೇಡಿಕೆ ಇದೆ. ಅದರ ಪರವಾಗಿ ಹೋರಾಟ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಬಸವರಾಜ ಬೊಮ್ಮಾಯಿರವರ ನಿವಾಸದ ಸಭಾಭವನದಲ್ಲಿ ಜ. 26ರಂದು ನಡೆಯಲಿರುವ ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿರವರ 92ನೇ ಜನ್ಮದಿನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ, ಸಂಘ ಸಂಸ್ಥೆಗಳಿಗೆ ಏರ್ಪಡಿಸಿದ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ನಿಮ್ಮ ಭವಿಷ್ಯ, ತಾಲೂಕಿನ ಭವಿಷ್ಯ ಹೇಗೆ ರೂಪಿಸಬೇಕು ಯಾರು ರೂಪಿಸಬೇಕು ಎನ್ನುವುದನ್ನು ತಾಲೂಕಿನ ಮಹಾಜನತೆ ತೀರ್ಮಾನ ಮಾಡುತ್ತಾರೆ. ಇನ್ನೊಂದು ಜನರಿಗೆ ಉಪಯೋಗ ಆಗುವ ಕೆಲಸ ಸಕಾರಾತ್ಮಕವಾಗಿ ಮಾಡುವ ಕೆಲಸ, ಜನರಿಗೆ ರೇಷನ್ ಕಾರ್ಡ್ ಕೊಡುತ್ತಿಲ್ಲ.ಆಯುಷ್ ಮಾನ್ ಕಾರ್ಡ್ ಕೊಡುತ್ತಿಲ್ಲ. ಕಾಗದ ಪತ್ರ ದುಡ್ಡಿಲ್ಲದೇ ಸಿಗುತ್ತಿಲ್ಲ. ಎಲ್ಲ ಪ್ರಕರಣಗಳಲ್ಲಿ ಜನರ ಪರವಾಗಿ ನಿಂತು ಕೆಲಸ ಮಾಡಬೇಕಿದೆ. ಅವರ ಪರವಾಗಿ ಕೆಲಸ ಮಾಡೋಣ ಎಂದು ಹೇಳಿದರು.

ಈಗಿನ ಸರ್ಕಾರ ನಾವು ಆದೇಶ ಮಾಡಿರುವ ಕೆಲಸಗಳನ್ನೇ ಮಾಡುತ್ತಿದ್ದಾರೆ. ದೊಡ್ಡ ಕೆಲಸಗಳನ್ನು ನಾವು ಮಾಡಿದ್ದೇವು ಕನಿಷ್ಠ ಸೌಜನ್ಯ ಅವರಲ್ಲಿ ಇಲ್ಲ. ನಾನು ಸತೀಶ್ ಜಾರಕಿಹೊಳಿ ಅವರಿಗೆ ಅಭಿನಂದನೆ ಹೇಳುತ್ತೇನೆ. ಐಬಿ ಉದ್ಘಾಟನೆ ಸಂದರ್ಭದಲ್ಲಿ ಇದನ್ನು ಬೊಮ್ಮಾಯಿಯವರು ಕಟ್ಟಿಸಿದ್ದಾರೆ ಎಂದು ಹೇಳಿದ್ದರು. ಡಿಪೋ ನಮ್ಮ ಅವಧಿಯಲ್ಲಿಯೇ ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಎಸ್‌ಐಆರ್: ನಾವೆಲ್ಲ ಸೇರಿದೀವಿ ಅತ್ಯಂತ ಸೂಕ್ಷ್ಮವಾಗಿ ಒಂದೆರಡು ವಿಚಾರ ಹೇಳುತ್ತೇನೆ. 16 ವರ್ಷದ ನಂತರ ಸರ್ಕಾರ ಮತ್ತು ಪ್ರತಿನಿಧಿ ಇಲ್ಲದಂತಹ ಪರಿಸ್ಥಿತಿ ಇದೆ. ವಿಧಾನಸಭೆಯ ಮರುಚುನಾವಣೆಯಲ್ಲಿ ಆಗಿದೆ. ಇದರ ಮಧ್ಯೆ ನಾವು ಎಲ್ಲಿ ಮೈಮರೆತಿದ್ದೇವೆ ಎಂದು ಆಲೋಚನೆ ಮಾಡಬೇಕು. ಇದಕ್ಕೆ ಹಲವಾರು ಕಾರಣಗಳಿವೆ. ಏನು ಎಸ್‌ಐಆರ್ ಆದಾಗ ಯಾವ ಯಾವ ವರ್ಷದಲ್ಲಿ ಎಷ್ಟೆಷ್ಟು ಮತಗಳು ನೈಜವಾಗಿ ಸೇರಿವೆ. ಯಾವಾಗ ಹೊರಗಡೆ ಮತಗಳು ಸೇರಿವೆ ಎನ್ನುವುದು ಎಸ್‌ಐಆ‌ರ್‌ದಿಂದ ಗೊತ್ತಾಗುತ್ತದೆ. ಅದಕ್ಕೆ ತಮ್ಮ ಪರಿಶ್ರಮ ಇದೆ. ತಮ್ಮ ಬೂತ್‌ನಲ್ಲಿ ಬಿಎಲ್‌ಒಗಳು ಏನು ಮಾಡಿದ್ದಾರೆ. ಒಂದೂವರೆ ಎರಡು ತಿಂಗಳಲ್ಲಿ ನಮ್ಮ ರಾಜ್ಯದಲ್ಲಿ ಎಸ್‌ಐಆರ್ ಪ್ರಾರಂಭವಾಗುತ್ತದೆ. ನಿಮ್ಮಬೂತ್ ನೀವು ಸರಿಯಾಗಿ ನೋಡಿಕೊಂಡು ಅಧಿಕೃತವಾಗಿ ಯಾರಿದ್ದಾರೆ. ಈ ಬೂತಿಗೆ ಸಂಬಂಧ ಇದ್ದವರು ನೋಡಿಕೊಳ್ಳಬೇಕು ಎಂದು ಹೇಳಿದರು.

ರೈತ ವಿರೋಧಿ ಸರ್ಕಾರ: ಈ ಸರ್ಕಾರ ರೈತ ವಿರೋಧಿ ಸರ್ಕಾರ ಇದೆ. ರೈತರಿಗೆ ಕೃಷಿ ಸನ್ಮಾನ ಯೋಜನೆಯಲ್ಲಿ 4000 ರು. ನಮ್ಮ ಸರ್ಕಾರ ಯಡಿಯೂರಪ್ಪ ಅವರ ಸರ್ಕಾರ ಕೊಟ್ಟಿತ್ತು. ಅದನ್ನು ಮುಂದುವರೆಸಿಲ್ಲ. ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ಈಗ ಮಾರ್ಕೆಟ್ ಇಂಟರ್ ವಿನ್ ಸ್ಕಿಮ್ ಅಂತ ಹೇಳುತ್ತಿದ್ದಾರೆ. ಒಂದು ತಿಂಗಳಲ್ಲಿ ರೈತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾನೆ. ಪ್ರತಿ ರೈತರಿಂದ 50 ಕ್ವಿಂಟಲ್‌ಗೆ ಒಂದು ತಿಂಗಳೊಳಗೆ ಖರೀದಿ ಮಾಡಬೇಕು. ರೈತರಿಗೆ ನಯಾ ಪೈಸೆ ಕೊಡಬಾರದು ಅಂತ ಸರ್ಕಾರ ತೀರ್ಮಾನ ಮಾಡಿದೆ. ಶೇ. 95ರಷ್ಟು ಕುಟುಂಬಗಳು ಸಣ್ಣ ಕುಟುಂಬಗಳಿವೆ. ಅವರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ವಿಶ್ವನಾಥ ಹರವಿ ಸೇರಿ ಪ್ರಮುಖರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಕ್ತಿ ಕಡಲಿನಲ್ಲಿ ಮಿಂದೆದ್ದ ಉಡುಪಿ ಕೃಷ್ಣನಗರಿ...
ದ್ವಿಭಾಷಾ ನೀತಿ ತುಳು ಕಲಿಕೆಗೆ ಅಡ್ಡಿಯಾಗದು: ತಾರಾನಾಥ ಗಟ್ಟಿ ಕಾಪಿಕಾಡ್‌