ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣ ಪಂಚಾಯತಿ ಆವರಣದಲ್ಲಿ ಧರಣಿ ನಡೆಸಿ ಘೋಷಣೆ ಕೂಗಿ, ಅಧಿಕಾರಿಗಳ ಹಾಗೂ ಸಿಬ್ಬಂದಿ ದುರ್ವರ್ತನೆ, ಕೆಲಸಗಳ ವಿಳಂಬ ಮತ್ತು ಲಂಚ ಆರೋಪಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಆಗಮಿಸಿ ಸಾರ್ವಜನಿಕರ ಮನವಿ ಸ್ವೀಕರಿಸಿದರು. ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮನವಿ ಸ್ವೀಕರಿಸಿ ಮಾತನಾಡಿ, ಮುಧೋಳ ಮಾದರಿಯಲ್ಲಿಯೇ ಲೋಕಾಪುರದಲ್ಲಿಯೂ ೨೪/೭ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಈಗಾಗಲೇ 4 ಕಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಲಾಗಿದೆ. ಎಲ್ಲವನ್ನೂ ಸರ್ಕಾರವೇ ಮಾಡುವುದಕ್ಕಿಂತ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ ಎಂದರು.
ಇ-ಖಾತಾ ಸಮಸ್ಯೆಗೆ ಸಂಬಂದಿಸಿದಂತೆ ಲಂಚಮುಕ್ತ ವ್ಯವಸ್ಥೆಗಾಗಿ ಆನ್‌ಲೈನ್ ಪ್ರಕ್ರಿಯೆ ಜಾರಿಯಲ್ಲಿದ್ದು, ಹೊಸ ವ್ಯವಸ್ಥೆಗೆ ಜನರು ಹೊಂದಿಕೊಳ್ಳಬೇಕಿದೆ. ಪಟ್ಟಣ ಪಂಚಾಯತಿ ಸಿಬ್ಬಂದಿ ಕೊರತೆ ಇರುವುದನ್ನು ಒಪ್ಪಿಕೊಂಡು, ಅದನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಲೋಕಾಪುರ ಅಭಿವೃದ್ಧಿ ಯುವ ಸಮಿತಿಯ ಮುಖಂಡ ವಿಕ್ರಂ ನಂದಯ್ಯಗೋಳಮಠ ಮಾತನಾಡಿ, ಪಟ್ಟಣದ ಪ್ರಮುಖ ಸಮಸ್ಯೆಗಳಾದ ಪೇ ಆ್ಯಂಡ್ ಯೂಸ್ ಮಾದರಿಯಲ್ಲಿ ಸಾರ್ವಜನಿಕರ ಶೌಚಾಲಯಗಳ ನಿರ್ಮಾಣ, ಪಟ್ಟಣದ್ಯಂತ ಚರಂಡಿ ವ್ಯವಸ್ಥೆ, ಮುಖ್ಯ ರಸ್ತೆಗಳ ಡಿವೈಡರ್‌ಗಳ ಮೇಲೆ ಬೀದಿ ದೀಪಗಳ ಅಳವಡಿಕೆ, ಪಪಂ ಸಿಬ್ಬಂದಿ ಕೆಲಸ ವಿಳಂಬ ತಡೆಯಲು ಮತ್ತು ಮನೆ ಉತಾರ ಸಮಸ್ಯೆಗಳ ತ್ವರಿತ ಪರಿಹಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಲೋಕಾಪುರ ಅಭಿವೃದ್ಧಿ ಯುವ ಸಮಿತಿ ಮುಖಂಡ ಮಲ್ಲಪ್ಪ ಅಂಗಡಿ ಮಾತನಾಡಿ, ವಿದ್ಯುತ್ ಚಿತಾಗಾರ ಮತ್ತು ಮುಕ್ತಿ ವಾಹನ ವ್ಯವಸ್ಥೆ, ಸ್ಮಶಾನಗಳ ಅಭಿವೃದ್ಧಿಗೆ ಒತ್ತು, ಹಳ್ಳಗಳಲ್ಲಿ ಮಾಂಸ ಹಾಗೂ ತ್ಯಾಜ್ಯ ಹಾಕುವುದುನ್ನು ತಡೆಯಲು ಕಟ್ಟಿನಿಟ್ಟಿನ ಕ್ರಮ, ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಅಗತ್ಯ ಸೌಲಭ್ಯ ಒದಗಿಸುವುದು, ವಾಹನ ಪಾರ್ಕಿಂಗ್ ವ್ಯವಸ್ಥೆ, ವಾಹನ ಸಂಚಾರ ಸುಗಮಗೊಳಿಸಲು ಒತ್ತಾಯಿಸಿದರು. ಈ ವೇಳೆ ಮುಖಂಡರಾದ ಶಿವಾನಂದ ಉದಪುಡಿ, ಸದುಗೌಡ ಪಾಟೀಲ, ಗುರುರಾಜ ಉದಪುಡಿ, ಲೋಕಾಪುರ ಅಭಿವೃದ್ಧಿ ಯುವ ಸಮಿತಿ ಮುಖಂಡರಾದ ಮಲ್ಲಪ್ಪ ಅಂಗಡಿ, ನೀಲೇಶ ಬನ್ನೂರ, ವೀಕ್ರಂ ನಂದಯ್ಯಗೋಳಮಠ, ಗುಲಾಬಸಾಬ್ ಅತ್ತಾರ, ವಿಠ್ಠಲ ಕಾಳೆ, ವೆಂಕಟೇಶ ತುಳಸಿಗೇರಿ, ಗುರುರಾಜ ಪಂಚಕಟ್ಟಿಮಠ, ವಿಜಯ ಹೂಗಾರ, ಅನಿಲ ಹಂಚಾಟೆ, ಮಹೇಶ ಗಾಣಗೇರ, ಮಂಜುನಾಥ ಗಣಾಚಾರಿ, ಶ್ರೀಕಾಂತ ಅಮೋಜಿ, ನಾಗರಾಜ ಕುಲಕರ್ಣಿ, ಸದಾಶಿವ ನಾವ್ಹಿ, ತುಳಜಪ್ಪ ಮುದ್ದಾಪುರ, ಹಂಪಯ್ಯ ಹಂಚಿಕಿಮಠ, ಭೀಮಶಿ ಅವರಾದಿ, ಮೌನೇಶ ಬಡಿಗೇರ, ಪ್ರಶಾಂತ ಹೂಗಾರ, ಆನಂದ ಘೋರ್ಪಡೆ, ಕುಮಾರ ಗಸ್ತಿ, ರೇಖಾ ನರಹಟ್ಟಿ, ವಿಜಯಲಕ್ಷ್ಮೀ ಮುದ್ದಾಪುರ ಅನೇಕ ಮಹಿಳೆಯರು ಇದ್ದರು.