ಉಪ್ಪಿನಂಗಡಿ : ಇಲ್ಲಿನ ಪೊಲೀಸ್ ಠಾಣಾ ಸಿಬ್ಬಂದಿಗೆ ಒದಗಿಸಲಾದ ೩೪ ನೆಕ್ಕಿಲಾಡಿಯ ಬೇರಿಕೆಯಲ್ಲಿರುವ ಪೊಲೀಸ್ ವಸತಿ ಗೃಹ ಕಟ್ಟಡಕ್ಕೆ ಕಾಯಕಲ್ಪ ನೀಡಲಾಗುತ್ತಿದ್ದು ಹಂಚಿನ ಛಾವಣಿಯ ಪೊಲೀಸ್ ವಸತಿ ಗೃಹವನ್ನು ಕೆಡವಿ ನೂತನ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ನಿಗದಿತ ಸಮಯಕ್ಕೆ ಕಾಮಗಾರಿ ಮುಗಿದರೆ ವರ್ಷದೊಳಗೆ ೨೪ ಮನೆಗಳು ಪೊಲೀಸರ ಕೈ ಸೇರಲಿವೆ.ಬೇರಿಕೆಯಲ್ಲಿ ಮೂರು ಮಹಡಿಗಳ ಎರಡು ಕಟ್ಟಡಗಳಿದ್ದು, ಇವುಗಳಲ್ಲಿ ಒಟ್ಟು ೧೨ ಮನೆಗಳಿವೆ. ಒಂದು ಮನೆಯಲ್ಲಿ ಒಂದು ಹಾಲ್, ಒಂದು ರೂಂ, ಒಂದು ಅಡುಗೆ ಕೋಣೆ ಹಾಗೂ ಶೌಚಾಲಯ ಹಾಗೂ ಸ್ನಾನಗೃಹ ಹಾಗೂ ಸಣ್ಣ ವರಾಂಡದ ಸೌಲಭ್ಯಗಳಿವೆ. ಇದು ಉಪ್ಪಿನಂಗಡಿ ಪೊಲೀಸ್ ಠಾಣೆಯಿಂದ ಸುಮಾರು ಮೂರುವರೆ ಕಿ.ಮೀ. ದೂರದಲ್ಲಿದ್ದು, ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿಯಿಂದ ಸುಮಾರು ೩೦೦ ಮೀ.ನಷ್ಟು ದೂರದಲ್ಲಿದ್ದರೂ ಗುಡ್ಡ ಪ್ರದೇಶದಲ್ಲಿದೆ.
೩೪ ನೆಕ್ಕಿಲಾಡಿ ಜಂಕ್ಷನ್‌ನ ಬಳಿಯಲ್ಲಿರುವ ಹಳೇಯ ವಸತಿ ಗೃಹದ ಸ್ಥಳದಲ್ಲಿಯೇ ನೂತನ ಆರ್‌ಸಿಸಿ ಕಟ್ಟಡ ನಿರ್ಮಿಸಲಾಗುತ್ತಿದೆ. ಇಲ್ಲಿ ಕೂಡಾ ಎರಡು ಕಟ್ಟಡಗಳಲ್ಲಿ ಒಟ್ಟು ೧೨ ಮನೆಗಳಿವೆ. ಗುತ್ತಿಗೆದಾರರ ಪ್ರಕಾರ ಮುಂಬರುವ ಏಪ್ರಿಲ್- ಮೇಯೊಳಗೆ ಇದರ ಕೆಲಸ ಪೂರ್ಣಗೊಳ್ಳಲಿದೆ. ಇದು ಉಪ್ಪಿನಂಗಡಿ ಪೊಲೀಸ್ ಠಾಣೆಯಿಂದ ಸುಮಾರು ೧ ಕಿ.ಮೀ. ದೂರದಲ್ಲಿದೆ. .ನೆಕ್ಕಿಲಾಡಿ ಪೇಟೆಯ ಹೃದಯಭಾಗದಲ್ಲೇ ಇರುವುದರಿಂದ ಬೇರಿಕೆಯ ವಸತಿ ಗೃಹಕ್ಕಿಂತಲೂ ಈ ವಸತಿ ಗೃಹಕ್ಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಬೇರಿಕೆ: ಬೇರಿಕೆಯಲ್ಲಿ ಕಾಯಕಲ್ಪಗೊಳ್ಳುತ್ತಿರುವ ಪೊಲೀಸ್ ವಸತಿಗೃಹನೆಕ್ಕಿಲಾಡಿ: ೩೪ ನೆಕ್ಕಿಲಾಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪೊಲೀಸ್ ವಸತಿಗೃಹ ============================================================