ಕೋರಮಂಗಲ-ಹಾರೋಹಳ್ಳಿಗೆ ಸಂಪರ್ಕ ಕಲ್ಪಿಸುವ ಸಿಮೆಂಟ್ ರಸ್ತೆ ಕಾಮಗಾರಿ ವೀಕ್ಷಣೆ

KannadaprabhaNewsNetwork |  
Published : Oct 16, 2026, 01:45 AM IST
ವಿಜೆಪಿ೧೫ವಿಜಯಪುರ ಹೋಬಳಿ ಕೋರಮಂಗಲದಿಂದ- ಹಾರೋಹಳ್ಳಿ ಕಡೆಗೆ ಸಂಚರಿಸುವ ಸಂಪರ್ಕ ರಸ್ತೆಗೆ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಕಾಂಗ್ರೆಸ್ ಮುಖಂಡರು ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ವಿಜಯಪುರ: ಹೋಬಳಿಯ ಕೋರಮಂಗಲ-ಹಾರೋಹಳ್ಳಿ ಸಂಪರ್ಕ ರಸ್ತೆಗೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ೨೭ ಲಕ್ಷ ವೆಚ್ಚದ ೪೨೦ ಮೀಟರ್ ಸಿಸಿ ರಸ್ತೆ ಕಾಮಗಾರಿಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್ ಹಾಗು ಕಾಂಗ್ರೆಸ್ ಮುಖಂಡರು ವೀಕ್ಷಿಸಿದರು

ವಿಜಯಪುರ: ಹೋಬಳಿಯ ಕೋರಮಂಗಲ-ಹಾರೋಹಳ್ಳಿ ಸಂಪರ್ಕ ರಸ್ತೆಗೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ೨೭ ಲಕ್ಷ ವೆಚ್ಚದ ೪೨೦ ಮೀಟರ್ ಸಿಸಿ ರಸ್ತೆ ಕಾಮಗಾರಿಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್ ಹಾಗು ಕಾಂಗ್ರೆಸ್ ಮುಖಂಡರು ವೀಕ್ಷಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕ್ಷೇತ್ರದಲ್ಲಿ, ಮುಖ್ಯರಸ್ತೆಗಳೂ ಸೇರಿದಂತೆ ಸಂಪರ್ಕ ರಸ್ತೆಗಳನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ. ಬಹಳಷ್ಟು ರಸ್ತೆಗಳು ಡಾಂಬರೀಕರಣಗೊಂಡಿವೆ. ಸಾರ್ವಜನಿಕರು ತಮ್ಮ ಹಳ್ಳಿಗಳಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ಗಮನಹರಿಸಬೇಕು. ಲೋಪ ಕಂಡುಬಂದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಬೇಕು. ಗುಣಮಟ್ಟದ ಕಾಮಗಾರಿಗಳಿಗೆ ಎಲ್ಲರೂ ಸಹಕರಿಸಬೇಕು ಎಂದರು.

ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ ಮಾತನಾಡಿ, ಸುಮಾರು ೧೫ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಪರ್ಕ ರಸ್ತೆ, ಇದೀಗ ಕಾಂಕ್ರೀಟ್ ರಸ್ತೆ ಆಗುತ್ತಿರುವುದು ಈ ಭಾಗದಲ್ಲಿನ ರೈತರು ಸೇರಿದಂತೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ. ಸಾರ್ವಜನಿಕರು ಕೂಡಾ ರಸ್ತೆಗೆ ಹಾನಿ ಮಾಡದಂತೆ ಸುದುಪಯೋಗ ಮಾಡಿಕೊಳ್ಳಬೇಕು ಎಂದರು.

ಕೋರಮಂಗಲ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಈ ರಸ್ತೆ ಮೂಲಕವೇ ಕೋರಮಂಗಲ, ಗುಡುವನಹಳ್ಳಿ, ಆವತಿ ಮೂಲಕ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ತಲುಪಲು ಅವಕಾಶವಿದೆ. ಹಲವು ವರ್ಷಗಳ ಬೇಡಿಕೆ ಇದೀಗ ಫಲಿಸಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಬಿ- ಜಿ ರಾಮ್ ಜಿ ಯೋಜನೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಈ ವೇಳೆ ಮುಖಂಡರಾದ ಚಂದ್ರಪ್ಪ, ಮುನಿರಾಜು, ಚೌಡಪ್ಪ, ಜನಾರ್ದನ, ತಮ್ಮೇಗೌಡ, ರಾಮಚಂದ್ರೇಗೌಡ, ಮುಂತಾದವರು ಹಾಜರಿದ್ದರು.

(ಫೋಟೋ ಕ್ಯಾಪ್ಷನ್‌)

ವಿಜಯಪುರ ಹೋಬಳಿ ಕೋರಮಂಗಲ-ಹಾರೋಹಳ್ಳಿ ಸಂಪರ್ಕ ಕಲ್ಪಿಸುವ ಸಿಮೆಂಟ್‌ ರಸ್ತೆ ಕಾಮಗಾರಿಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್ ಹಾಗು ಕಾಂಗ್ರೆಸ್ ಮುಖಂಡರು ವೀಕ್ಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್ ಆಪರೇಷನ್ ಸಿಎಂ ಮಾಡಿಸಿದ್ದಾರೆ ಎಂಬ ಎಚ್ಡಿಕೆ ಹೇಳಿಕೆಯಲ್ಲಿ ಆಧಾರವಿಲ್ಲ: ಕೆ.ಎಂ.ಉದಯ್
ಅಭಿವೃದ್ಧಿಯಲ್ಲಿ ನಿರೀಕ್ಷಿತ ಪ್ರಗತಿ ಕಾಣದ ದೊಡ್ಡಅರಸಿನಕೆರೆ ಗ್ರಾಮ: ಶಾಸಕ ಉದಯ್