ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ನಿಲುವಾಗಿಲು,ಅರುವನಹಳ್ಳಿ, ಚುಂಚಗಹಳ್ಳಿ, ಗೇಟ್, ವೈದ್ಯನಾಥಪುರ, ಕರಟಗೆರೆ, ಮುಡಿನಹಳ್ಳಿ, ನೀಲಕಂಠನಹಳ್ಳಿ ಗ್ರಾಮಗಳಲ್ಲಿ ಬಸ್ ಪ್ರಯಾಣಿಕರ ತಂಗುದಾಣ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.p
ಪ್ರತಿ ಬಸ್ ತಂಗುದಾಣವನ್ನು ತಲಾ 11.1 ಲಕ್ಷ ರು. ವೆಚ್ಚದಲ್ಲಿ ಸಿಆರ್‌ಎಸ್ ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯ ಮುಟ್ಟನಹಳ್ಳಿ, ವೈದ್ಯನಾಥಪುರ, ಸುಣ್ಣದ ದೊಡ್ಡಿ, ಚಾಮನಹಳ್ಳಿ, ಹರಕನಹಳ್ಳಿ, ಶಿವಪುರ, ದೊಡ್ಡ ಅಂಕನಹಳ್ಳಿ ಹಾಗೂ ಮದ್ದೂರಿನ 23ನೇ ವಾರ್ಡ್‌ನಲ್ಲಿ ತಲಾ 5.50 ಲಕ್ಷದಲ್ಲಿ ಹೈಮಾಸ್ಟ್ ದೀಪದ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದರು.ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಸಿಆರ್‌ಎಸ್ ಅನುದಾನದಲ್ಲಿ 32.5 ಲಕ್ಷ ರು.ವೆಚ್ಚದಲ್ಲಿ ಎರಡು ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದರು.
ಈ ವೇಳೆ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮಯ್ಯ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಕೂಳಗೆರೆ ಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ, ಸೇರಿದಂತೆ ಹಲವು ಗ್ರಾಮಗಳ ಮುಖಂಡರು ಇದ್ದರು.