ಶಾಲೆ ಮುಂಭಾಗ ಅಪಘಾತ ತಡೆಗೆ ಹಂಪ್‌ ಅಳವಡಿಕೆ

KannadaprabhaNewsNetwork |  
Published : Feb 02, 2026, 01:45 AM IST
1ಎಚ್ಎಸ್ಎನ್14 :  | Kannada Prabha

ಸಾರಾಂಶ

ಎಸ್ ಇಎಸ್ ಹಾಗೂ ಪೂರ್ಣಪ್ರಜ್ಞ ಶಾಲೆ ಮುಂಭಾಗದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ರಸ್ತೆಯ ಮಧ್ಯೆ ಅಪಘಾತ ತಪ್ಪಿಸಲು ಹಂಪ್ ಹಾಕಲಾಗುತ್ತಿದ್ದು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೈಗೊಂಡ ಕ್ರಮಕ್ಕೆ ಕೆಡಿಪಿ ಸದಸ್ಯೆ ಸೌಮ್ಯ ಆನಂದ್ ಅವರು ಶ್ಲಾಘನೆ ವ್ಯಕ್ತಪಡಿಸಿದರು. ಅಪಘಾತ ತಡೆಯುವುದು ಆಡಳಿತದ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಹೌದು ಎಂದು ತಿಳಿಸಿದ ಸೌಮ್ಯ ಆನಂದ್, ವಾಹನ ಸವಾರರು ವೇಗ ನಿಯಂತ್ರಣ ಪಾಲಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಎಸ್ ಇಎಸ್ ಹಾಗೂ ಪೂರ್ಣಪ್ರಜ್ಞ ಶಾಲೆ ಮುಂಭಾಗದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ರಸ್ತೆಯ ಮಧ್ಯೆ ಅಪಘಾತ ತಪ್ಪಿಸಲು ಹಂಪ್ ಹಾಕಲಾಗುತ್ತಿದ್ದು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೈಗೊಂಡ ಕ್ರಮಕ್ಕೆ ಕೆಡಿಪಿ ಸದಸ್ಯೆ ಸೌಮ್ಯ ಆನಂದ್ ಅವರು ಶ್ಲಾಘನೆ ವ್ಯಕ್ತಪಡಿಸಿದರು.ಈ ಕುರಿತು ಮಾತನಾಡಿದ ಅವರು, “ಈ ರಸ್ತೆ ಭಾಗದಲ್ಲಿ ವಾಹನಗಳ ಅತಿವೇಗ ಸಂಚಾರದಿಂದ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದು, ಶಾಲೆ–ಕಾಲೇಜು ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳ ಸುರಕ್ಷತೆ ಗಂಭೀರವಾಗಿ ಹಾನಿಗೊಳಗಾಗುತ್ತಿತ್ತು. ಇದರ ಬಗ್ಗೆ ನಾನು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿ ಇಲ್ಲಿಯ ಸ್ಥಿತಿ ಪರಿಣಾಮ ಬಗ್ಗೆ ಅವರಿಗೆ ತಿಳಿಸಿದ್ದೆ ನಮ್ಮ ಮನವಿಗೆ ಸ್ಪಂದಿಸಿ ತ್ವರಿತವಾಗಿ ಸ್ಪೀಡ್ ಬ್ರೇಕರ್‌ಗಳು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಕೇವಲ ಹಂಪ್ಸ್ ಅಳವಡಿಕೆ ಮಾತ್ರವಲ್ಲದೆ, ಮುನ್ನೆಚ್ಚರಿಕಾ ಸೂಚನಾ ಫಲಕಗಳು, ರಸ್ತೆ ಗುರುತುಗಳು ಹಾಗೂ ರಾತ್ರಿ ವೇಳೆಗೆ ಅಗತ್ಯ ಬೆಳಕು ವ್ಯವಸ್ಥೆ ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ. ಇಂತಹ ಕ್ರಮಗಳಿಂದ ಭವಿಷ್ಯದಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಅಪಘಾತ ತಡೆಯುವುದು ಆಡಳಿತದ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಹೌದು ಎಂದು ತಿಳಿಸಿದ ಸೌಮ್ಯ ಆನಂದ್, ವಾಹನ ಸವಾರರು ವೇಗ ನಿಯಂತ್ರಣ ಪಾಲಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ಮನವಿ ಮಾಡಿದರು.ಸ್ಥಳೀಯ ನಿವಾಸಿಗಳು ಮತ್ತು ಪೋಷಕರು ಆಡಳಿತದ ಕ್ರಮಕ್ಕೆ ಹಾಗೂ ಕೆಡಿಪಿ ಸದಸ್ಯರ ಸಕ್ರಿಯ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ