ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕು ಕಚೇರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರಸಭೆ ಆಡಳಿತದ ಮೇಲೆ ಸಾರ್ವಜನಿಕರ ನಿರಂತರ ಆರೋಪದ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿ ವಿವಿಧ ವಿಭಾಗಗಳ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು.
ನಗರಸಭೆಯ ಆದಾಯವೂ ಸೇರಿದಂತೆ ಎಲ್ಲಾ ವಿಚಾರದಲ್ಲೂ ಹಿನ್ನಡೆಯಾಗಿದೆ. ವಿಶೇಷವಾಗಿ ಸಾರ್ವಜನಿಕರಿಗೆ ವಿತರಣೆಯಾಗುವ ಇ-ಸ್ವತ್ತು ಸೇರಿದಂತೆ ಅನೇಕ ದಾಖಲಾತಿಗಳನ್ನು ನೀಡದೆ ಜನರು ಕಚೇರಿಗೆ ಅಲೆದಾಡುವ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾರ್ವಜನಿಕರ ಅಭಿಪ್ರಾಯದಂತೆ ಯಾವ ಅಧಿಕಾರಿಯೂ ಕಚೇರಿಯಲ್ಲಿ ಕುಳಿತು ಕೆಲಸ ಮಾಡದೆ ಕಾಲವ್ಯಯ ಮಾಡುತ್ತಾರೆಂಬ ಆರೋಪವಿದೆ. ಇವುಗಳನ್ನು ಸರಿಪಡಿಸಿಕೊಂಡು ನಗರಸಭೆ ಆಡಳಿತವನ್ನು ಸುಧಾರಣೆ ತರುವ ಜವಾಬ್ದಾರಿ ಪೌರಾಯುಕ್ತರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲಿದೆ ಎಂದು ತಿಳಿಸಿದರು.ಸಭೆಯಲ್ಲಿ ನಗರ ವ್ಯಾಪ್ತಿಯಲ್ಲಿ ಒಟ್ಟು 16775 ಮನೆಗಳಿದ್ದು, ಕಂದಾಯ ವಸೂಲಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ನಿಗದಿಪಡಿಸಿದ ಕಂದಾಯವನ್ನು ವಸೂಲಿ ಮಾಡುವಲ್ಲಿ ವಿಫಲರಾಗಿದ್ದಾರೆ. ಕೂಡಲೇ ಕಂದಾಯ ವಸೂಲಾತಿಯನ್ನು ಹೆಚ್ಚಿಸಬೇಕು. ನಗರಸಭೆ ಅಭಿವೃದ್ದಿಗೆ ಕಂದಾಯವಸೂಲಿಯಾದರೆ ಮಾತ್ರ ಸಾಧ್ಯವಾಗುತ್ತದೆ. ಈ ಬಗ್ಗೆ ಕಂದಾಯಾಧಿಕಾರಿಗಳು ಹಾಗೂ ವಸೂಲಿಗಾರರು ಗಮನ ಹರಿಸಬೇಕೆಂದರು.
ನಗರಸಭೆ ವ್ಯಾಪ್ತಿಯಲ್ಲಿ ಪ್ರತಿಮನೆಗೆ ವಾರ್ಷಿಕ 2300 ನೀರಿನ ಕಂದಾಯ, ವಾಣಿಜ್ಯಮಳಿಗೆಗೆ 9200 ಕಂದಾಯವಿದ್ದು ವಸೂಲಿಗಾರರು ಕಂದಾಯ ವಸೂಲಾತಿಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ನಿರ್ದೇಶನ ನೀಡಿದ್ದು, ಗಮನಹರಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು.
ನಗರದಲ್ಲಿ ರಸ್ತೆಗಳ ತುರ್ತು ರಿಪೇರಿಯಾಗಿ 5 ಕೋಟಿ ರು. ಬಿಡುಗಡೆಯಾಗಿದೆ. ರಸ್ತೆಮಾಡುವ ಸಂದರ್ಭದಲ್ಲಿ ಯುಜಿಡಿ ಕಾಮಗಾರಿ ಹಾದುಹೋಗುವ ಮಾರ್ಗವನ್ನು ಪರಿಶೀಲಿಸಿ ರಸ್ತೆನಿರ್ಮಿಸಿ ಅವಶ್ಯಕತೆ ಇದ್ದರೆ ಸ್ಲಾಬ್‌ಹಾಕಿ ಅನಗತ್ಯವಾಗಿ ಹಣವನ್ನು ಅಪವ್ಯಯವಾಗದಂತೆ ಎಂಜಿನಿಯರ್ ಜಾಗೃತೆ ವಹಿಸಬೇಕೆಂದರು. ನಗರದಲ್ಲಿ ಈಗಾಗಲೇ 6 ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳಿದ್ದು 2 ಸಾವಿರ ಕಂಬಗಳಿಗೆ ಲೈಟ್ ಇಲ್ಲ ಸರಿಪಡಿಸುವಂತೆ ಸೂಚಿಸಿದರು. ರಾಷ್ಟ್ರೀಯ ಹೆದ್ಧಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಅಂಗಡಿಮಾಲೀಕರು ನಗರದ ಬೆಳವಣಿಗೆ ಹಿತದೃಷ್ಠಿಯಿಂದ ಅವಕಾಶ ಮಾಡಿಕೊಡುವಂತೆ ಸೂಚಿಸಿದರು. ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 113 ಪಾರ್ಕಗಳಿದ್ದು, ಅವುಗಳ ಸದುಪಯೋಗಪಡಿಸಿಕೊಳ್ಳುವನಿಟ್ಟಿನಲ್ಲಿ ಅವಶ್ಯವಿರುವ ಮೂಲಭೂತ ಸೌಕರ್ಯವನ್ನು ಕೂಡಲೇ ಕಲ್ಪಿಸುವಂತೆ ಸೂಚಿಸಿದರು.