ವರದಾ ಬೇಡ್ತಿ ನದಿ ಜೋಡಣೆಗೆ ಡಿಪಿಆರಗೆ ಸೂಚನೆ: ಸಚಿವ ಶಿವಾನಂದ ಪಾಟೀಲ

KannadaprabhaNewsNetwork |  
Published : Jul 17, 2025, 12:31 AM IST
ಹಾವೇರಿಯ ದೇವಗಿರಿ- ಯಲ್ಲಾಪುರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ರೈತರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

, ರೈತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ನಬಾರ್ಡ್ ನೀಡುತ್ತಿದ್ದ ನೆರವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದಿಂದ ಕೃಷಿ ಸಾಲ ವಿತರಣೆಗೆ ಸಮಸ್ಯೆಯಾಗಿದೆ.

ಹಾವೇರಿ: ವರದಾ- ಬೇಡ್ತಿ ನದಿ ಜೋಡಣೆ ಯೋಜನೆ ಕುರಿತು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದು, ವಿಸ್ತೃತ ಯೋಜನಾ ವರದಿ ತಯಾರಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ನಗರದ ದೇವಗಿರಿ- ಯಲ್ಲಾಪುರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ರೈತರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅಹವಾಲುಗಳನ್ನು ಆಲಿಸಿದ ಅವರು, ರೈತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ನಬಾರ್ಡ್ ನೀಡುತ್ತಿದ್ದ ನೆರವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದಿಂದ ಕೃಷಿ ಸಾಲ ವಿತರಣೆಗೆ ಸಮಸ್ಯೆಯಾಗಿದೆ. ಆರ್ಥಿಕವಾಗಿ ಸದೃಢವಾಗಿರುವ ಡಿಸಿಸಿ ಬ್ಯಾಂಕ್‌ಗಳು ಸಾಲ ವಿತರಣೆ ಮಾಡುತ್ತಿವೆ. ಆದರೆ ನಷ್ಟದಲ್ಲಿರುವ ಡಿಸಿಸಿ ಬ್ಯಾಂಕುಗಳಿಗೆ ಕೃಷಿ ಸಾಲ ವಿತರಣೆ ಸಮಸ್ಯೆಯಾಗಿದೆ. ನಬಾರ್ಡ್ ನೆರವು ಕಡಿತ ಮಾಡಿದಾಗ ಕೇಂದ್ರ ವಿತ್ತ ಸಚಿವರೊಂದಿಗೆ ಮಾತನಾಡಿ ಎಂದು ನಾನೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ನಬಾರ್ಡ್ ನೆರವು ಕಡಿತವನ್ನು ಪ್ರಶ್ನೆ ಮಾಡಿದ ಏಕೈಕ ರಾಜ್ಯ ಕರ್ನಾಟಕ. ಇತರ ಯಾವ ರಾಜ್ಯ ಸರ್ಕಾರಗಳೂ ನಬಾರ್ಡ್ ನೆರವು ಕಡಿತವನ್ನು ಪ್ರಶ್ನೆ ಮಾಡಲಿಲ್ಲ ಎಂದರು. ನಬಾರ್ಡ್ ನೆರವು ವರ್ಷಕ್ಕೆ ₹8 ಸಾವಿರ ಕೋಟಿ ಕಡಿಮೆಯಾಗಿದ್ದು, ಯಾವ ಕಾರಣಕ್ಕೆ ಕೃಷಿ ಸಾಲ ಸಮಸ್ಯೆಯಾಗಯತ್ತಿದೆ ಎಂಬುದನ್ನು ರೈತರು ಇದನ್ನು ಅಂದಾಜು ಮಾಡಬೇಕಾಗಿದೆ. ಸಾಲ ವಿತರಣೆ ವೇಳೆ ತೀರುವಳಿ ಸಾಮರ್ಥ್ಯವನ್ನೂ ಪರಿಗಣಿಸುವುದು ಸಹಜ. ಜಿಲ್ಲೆಯ ಎಲ್ಲ ರೈತರಿಗೂ ಕೃಷಿ ಸಾಲ ಲಭ್ಯವಾಗುವಂತೆ ಪ್ರಯತ್ನಿಸುತ್ತೇನೆ. ನಬಾರ್ಡ್ ಈ ಮೊದಲು ಶೇ. 40ರಷ್ಟು ನೆರವು ನೀಡುತ್ತಿದ್ದು, ಈ ಪ್ರಮಾಣವನ್ನು ಶೇ. 10ಕ್ಕೆ ಇಳಿಸಿದೆ. ಇದು ಕೃಷಿ ಸಾಲ ವಿತರಣೆಗೆ ಸಮಸ್ಯೆಯಾಗಿದ್ದು, ಕೃಷಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ನೀಡಿದೆ ಎಂದರು.ಕೃಷಿ ಸಾಲ ವಿತರಣೆಗೆ ಡಿಸಿಸಿ ಬ್ಯಾಂಕುಗಳು ಸಿಬಿಲ್ ಸ್ಕೋರ್ ಪರಿಗಣಿಸುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಮಾತ್ರ ಸಿಬಿಲ್ ಸ್ಕೋರ್ ಆಧರಿಸಿ ಕೃಷಿ ಸಾಲ ನೀಡುತ್ತಿವೆ. ಈ ಬಗ್ಗೆ ಲೋಕಸಭಾ ಸದಸ್ಯರೊಂದಿಗೆ ಚರ್ಚೆ ಮಾಡುತ್ತೇನೆ. ರೈತ ಮುಖಂಡರೂ ಈ ಬಗ್ಗೆ ಸಂಸದರ ಮೇಲೆ ಒತ್ತಡ ತರಬೇಕು ಎಂದರು.ಬೆಳೆಹಾನಿ, ಸಾಲ ವಿತರಣೆ ಸೇರಿದಂತೆ ಇದುವರೆಗೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾಹಿತಿ ನೀಡಿ, ರೈತರ ಆತ್ಮಹತ್ಯೆಯ ಹಳೆಯ ಪ್ರಕರಣಗಳಲ್ಲಿ ಪರಿಹಾರ ವಿತರಣೆಗೆ ಆರ್ಥಿಕ ಇಲಾಖೆ ವಿವರಣೆ ಕೇಳಿದ್ದು, ಶೀಘ್ರದಲ್ಲಿ ಸಲ್ಲಿಸಲಾಗುವುದು. ಬೆಳೆವಿಮೆ ವಿತರಣೆಯಲ್ಲಿ ರಾಜ್ಯದಲ್ಲೇ ಹಾವೇರಿ ಜಿಲ್ಲೆ ಅತ್ಯತ್ತಮ ಸಾಧನೆ ಮಾಡಿದ್ದು, ಈ ಕಾರಣಕ್ಕೆ ಜಿಲ್ಲೆಗೆ ಪ್ರಶಸ್ತಿ ಲಭಿಸಿದೆ ಎಂದರು.ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಅವರು ನದಿ ಜೋಡಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚೆಳ್ಳೇರ, ಎಸ್‌ಪಿ ಯಶೋದಾ ವಂಟಿಗೋಡಿ, ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ ಇತರರು ಇದ್ದರು. ವಿಶೇಷ ಪ್ರಕರಣ ಎಂದು ಪರಿಗಣನೆಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಈ ಹಿಂದಿನ ವರ್ಷಕ್ಕೆ ಸಂಬಂಧಿಸಿದಂತೆ ಯಾವುದೋ ಕಾರಣದಿಂದ ಪರಿಹಾರ ವಿತರಣೆ ಮಾಡಿಲ್ಲ ಎಂಬುದು ಗಮನಕ್ಕೆ ಬಂದಿದೆ. ಹಾವೇರಿ ಜಿಲ್ಲೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಹಳೆಯ ಆತ್ಮಹತ್ಯೆ ಪ್ರಕರಣಗಳಲ್ಲೂ ಪರಿಹಾರ ವಿತರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿವೆ. ಕಾರಣ ಕಂಡುಕೊಳ್ಳಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಶಾಲ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚನೆ ಮಾಡಿದೆ. ಜಿಲ್ಲೆಯ ರೈತ ಮುಖಂಡರೊಂದಿಗೆ ಸಭೆ ಮಾಡಿ ಎಂದು ವಿಶಾಲ್ ಅವರಿಗೆ ನಿರ್ದೇಶನ ನೀಡಿದ್ದೇನೆ. ಆತ್ಮಹತ್ಯೆ ತಡೆಗೆ ರೈತ ಮುಖಂಡರು ಸಮಿತಿಗೆ ಸಲಹೆ ನೀಡಬೇಕು ಎಂದು ಮನವಿ ಮಾಡಿದರು.

PREV

Latest Stories

ರೈತರು ಜನಸಾಮಾನ್ಯರೊಂದಿಗೆ ಸ್ಪಂದಿಸಿ ಸರ್ವೇ ಕಾರ್ಯ ನಡೆಸಲು ಮನವಿ
ವೈಜ್ಞಾನಿಕ ಪ್ರಕಟಣೆಗಳಲ್ಲಿ ಭಾರತ ಯುಕೆ, ಜಪಾನಿಗಿಂತ ಮುಂದು
ಕುಮಾರಸ್ವಾಮಿ ಬಡಾವಣೆಯದ್ದು ಸೇಲ್‌ ಡೀಡ್‌ದ್ದೇ ಸಮಸ್ಯೆ