- ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತ್ತು ಮೇಲ್ವಿಚಾರಕರಿಗೆ ನಿರ್ದೇಶನ । ಎಸ್‌ಐಆರ್ ಮ್ಯಾಪಿಂಗ್ ಕುರಿತು ಪ್ರಗತಿ ಪರಿಶೀಲನಾ ಸಭೆ
ನಗರದಲ್ಲಿ ಅತಿ ಕಡಿಮೆ ಮ್ಯಾಪಿಂಗ್ ಆಗಿರುವ ಬೂತ್‌ಗಳಲ್ಲಿ ಆದ್ಯತೆ ಮೇರೆಗೆ ಶಿಬಿರ ನಡೆಸಿ ಮ್ಯಾಪಿಂಗ್ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಶಿಬಿರ ಆಯೋಜನೆ ಬಗ್ಗೆ ತ್ಯಾಜ್ಯ ಸಂಗ್ರಹಿಸುವ ಆಟೋಗಳಲ್ಲಿ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ವೇಳೆ ವ್ಯಾಪಕ ಪ್ರಚಾರ ನಡೆಸಬೇಕು. ಮತದಾರರು ಲಭ್ಯವಿಲ್ಲದ ಮನೆಗೆ ಮ್ಯಾಪಿಂಗ್ ಶಿಬಿರ ಆಯೋಜನೆ ಸ್ಥಳ ಮತ್ತು ದಿನಾಂಕದ ಬಗ್ಗೆ ಚೀಟಿ ನೀಡುವ ಕಾರ್ಯ ಮಾಡುವಂತೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತ್ತು ಮೇಲ್ವಿಚಾರಕರಿಗೆ ನಿರ್ದೇಶಿಸಲಾಗಿದೆ.
ಮಂಗಳವಾರ ಚಿಕ್ಕಮಗಳೂರು ನಗರ ಸಭೆ ವ್ಯಾಪ್ತಿಯ ಎಸ್‌ಐಆರ್ ಮ್ಯಾಪಿಂಗ್ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಮೇಲ್ವಿಚಾರಕರ ಸಮಸ್ಯೆ ಆಲಿಸಿ, ಸೂಕ್ತ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಲಾಯಿತು.ಶಿಬಿರಗಳನ್ನು ಆಯೋಜಿಸುವ ಮೂಲಕ ಮ್ಯಾಪಿಂಗ್ ಆಗದಿರುವವರ ಮಾಹಿತಿ ಸಂಗ್ರಹಿಸಿ ಮ್ಯಾಪಿಂಗ್ ಮಾಡಬೇಕು. ಮೇ 29 ಹಾಗೂ 30 ರಂದು ನಗರದ ವಿವಿಧ ಬೂತ್ ಮಟ್ಟದಲ್ಲಿ ಮ್ಯಾಪಿಂಗ್ ಶಿಬಿರ ಆಯೋಜಿಸಲಾಗಿದೆ. ಈ ಬಗ್ಗೆ ಆಯಾ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಿಸುವ ಆಟೋಗಳಲ್ಲಿ ಪ್ರಚಾರ ಮಾಡಿಸುವುದಕ್ಕೂ ಸೂಚಿಸಲಾಯಿತು.
ಮತಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯ ಮ್ಯಾಪಿಂಗ್ ಪ್ರಕ್ರಿಯೆ ಬಗ್ಗೆ ಸಾಕಷ್ಟು ಸುದ್ದಿಯನ್ನು ಪತ್ರಿಕೆ ಮತ್ತು ಟಿವಿಗಳನ್ನು ಗಮನಿ ಸುತ್ತಿದ್ದೇರಿ ಮುಂದಿನ ದಿನಗಳಲ್ಲಿ ನೆಮ್ಮದಿಂದ ಇರಬೇಕಾದರೆ ಸಣ್ಣ ಸಣ್ಣ ಕಾರಣಕ್ಕೆ ಮ್ಯಾಪಿಂಗ್ ಪ್ರಕ್ರಿಯೆ ಬಾಕಿ ಉಳಿಸಿ ಕೊಂಡವರು ಕೂಡಲೇ ಪೂರ್ಣಗೊಳಿಸಿ ಎಂದು ಬೂತ್‌ಮಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರು.
ತಪ್ಪು ಕಾರಣಕ್ಕೆ ಯಾವುದೇ ಒಬ್ಬ ಮತದಾರರ ಹೆಸರು ಡಿಲೀಟ್ ಆಗಬಾರದು. ಯಾರು ಅನರ್ಹರು ಇದ್ದಾರೆ ಅವರ ಹೆಸರು ಪಟ್ಟಿಯಿಂದ ತೆಗೆದು ಹಾಕಬೇಕು. ಕೆಲಸಕ್ಕೆ ಹೋಗುತ್ತಿದ್ದಾರೆ. ಲಭ್ಯವಾಗುತ್ತಿಲ್ಲ. ಮಾಹಿತಿ ನೀಡುತ್ತಿಲ್ಲ ಎಂಬ ಕಾರಣ ಬೇಡ, ಅವರಿಗೆ ಎಸ್‌ಐಆರ್ ಮ್ಯಾಪಿಂಗ್ ಬಗ್ಗೆ ಜಾಗೃತಿ ಮೂಡಿಸಿ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವ ಜವಾಬ್ದಾರಿ ಬಿಎಲ್‌ಒ ಮತ್ತು ಮೇಲ್ವಿಚಾರಕರ ಮೇಲಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ಮಾತನಾಡಿ, ಮೇಲ್ವಿಚಾರಕರು, ಬಿಎಲ್‌ಒಗಳೊಂದಿಗೆ ಚರ್ಚೆ ನಡೆಸಿ ಪೂರ್ವ ಸಿದ್ಧತೆ ಮಾಡಿಕೊಂಡು ಶಾಲಾ ಆರಂಭಗೊಳ್ಳುವ ಮುನ್ನಾ ಮ್ಯಾಪಿಂಗ್ ಕಾರ್ಯ ಪೂರ್ಣಗೊಳಿಸಬೇಕು. ಪ್ರತಿ ದಿನ ಬಿಎಲ್‌ಒ ಮತ್ತು ಮೇಲ್ವಿಚಾರಕರು ಮಾಡುವ ಕಾರ್ಯದ ಬಗ್ಗೆ ವಾಟ್ಸಾಪ್ ಗ್ರೂಪ್ ರಚನೆ ಮಾಡಿಕೊಂಡು ಅದರಲ್ಲಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ನಗರ ಸಭೆ ಆಯುಕ್ತ ಬಸವರಾಜ್, ಚುನಾವಣೆ ಶಾಖೆ ಕಾಂತರಾಜ್ ಸೇರಿದಂತೆ ಮೊದಲಾದವರಿದ್ದರು.
ಯಾವುದೇ ಅರ್ಹ ವ್ಯಕ್ತಿ ಮತದಾರ ಪಟ್ಟಿಯಿಂದ ಬಿಟ್ಟು ಹೋಗಬಾರದು. ಅನರ್ಹ ವ್ಯಕ್ತಿ ಮತದಾರ ಪಟ್ಟಿಯಲ್ಲಿ ಇರಬಾರದು’ ಎಂಬ ಚುನಾವಣೆ ಆಯೋಗವು ಘೋಷವಾಖ್ಯವನ್ನು ಮಂತ್ರದ ರೀತಿ ನೆನಪಿಟ್ಟುಕೊಳ್ಳಬೇಕು. 10 ದಿನ ಬಾಕಿ ಇದ್ದು, ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಅನಾಥ ವ್ಯಕ್ತಿಗಳ ಮತದಾರ ಪಟ್ಟಿ ಮ್ಯಾಪಿಂಗ್ ಮಾಡುವುದಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಆ ವ್ಯಕ್ತಿಗೆ ತಂದೆ, ತಾಯಿ, ಸಂಬಂಧಿ ಕರ ಮಾಹಿತಿ ಇಲ್ಲ. ಅಂತಹ ಮತದಾರರ ಮ್ಯಾಪಿಂಗ್ ಸಾಧ್ಯವಾಗುತ್ತಿಲ್ಲ ಎಂದು ಬೂತ್ ಮಟ್ಟದ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದರು.--ಬಾಕ್ಸ್ --
ಮತಪಟ್ಟಿಯಲ್ಲಿ ಒಂದು ಹೆಸರು, ಎಪಿಕ್ ನಂಬರ್‌ನಲ್ಲಿ ಮತ್ತೊಂದು ಹೆಸರುಕೆಲವು ಪ್ರಕರಣದಲ್ಲಿ ಮತದಾರ ಪಟ್ಟಿಯಲ್ಲಿ ಒಬ್ಬ ವ್ಯಕ್ತಿಯ ಹೆಸರು ಇದೆ. ಆದರೆ, ಎಪಿಕ್ ಕಾರ್ಡ್ ನಂಬರ್‌ಅನ್ನು ಆಯೋಗದ ವೆಬ್‌ಸೈಟ್‌ಗೆ ಹಾಕಿದಾಗ ಬೇರೆ ವ್ಯಕ್ತಿಯ ಹೆಸರು ಬರುತ್ತಿದೆ. ಈ ರೀತಿ ಪ್ರಕರಣದಲ್ಲಿ ಏನು ಮಾಡಬೇಕೆಂದು ಬೂತ್ ಮಟ್ಟದ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.