ಬಿ.ಆರ್.ರಾಮಚಂದ್ರಗೆ ಅವಹೇಳನ: ಎಸ್‌ಪಿಗೆ ದೂರು

KannadaprabhaNewsNetwork |  
Published : Jul 22, 2026, 01:30 AM IST
೨೧ಕೆಎಂಎನ್‌ಡಿ-೧ | Kannada Prabha

ಸಾರಾಂಶ

ಮಹೇಶ್ ಗಣಿಗ ಎಂಬುವವರು (ಹಾಲಿವಾಸ ಬೆಂಗಳೂರು ಪೋನ್ ನಂಬರ್: ೯೦೦೮೦೪೧೬೯೯) ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ಮತ್ತು ಅವರ ಸಹೋದರರ ವಿರುದ್ಧ ಅವಹೇಳನಕಾರಿ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಇವರಿಗೆ ಚಪ್ಪಲಿಯಿಂದ ಹೊಡೆಯುತ್ತೇವೆ ಎಂದು ಸಹ ಪ್ರಾಣ ಬೆದರಿಕೆ ಹಾಕಿರುತ್ತಾನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವ ಮಹೇಶ್ ಗಣಿಗ ಎಂಬುವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೆಡಿಎಸ್ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಮಹೇಶ್ ಗಣಿಗ ಎಂಬುವವರು (ಹಾಲಿವಾಸ ಬೆಂಗಳೂರು ಪೋನ್ ನಂಬರ್: ೯೦೦೮೦೪೧೬೯೯) ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ಮತ್ತು ಅವರ ಸಹೋದರರ ವಿರುದ್ಧ ಅವಹೇಳನಕಾರಿ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಇವರಿಗೆ ಚಪ್ಪಲಿಯಿಂದ ಹೊಡೆಯುತ್ತೇವೆ ಎಂದು ಸಹ ಪ್ರಾಣ ಬೆದರಿಕೆ ಹಾಕಿರುತ್ತಾನೆ. ಜೆಡಿಎಸ್ ಪಕ್ಷದ ಬಗ್ಗೆಯೂ ತುಚ್ಛವಾಗಿ ಮಾತನಾಡಿದ್ದಾರೆ. ಇದರಿಂದ ಪಕ್ಷದ ನಾಯಕರು ಮತ್ತು ಬಿ.ಆರ್.ರಾಮಚಂದ್ರ ಗೌರವಕ್ಕೆ ಧಕ್ಕೆ ಬರುವಂತೆ ತೇಜೋವಧೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಮಹೇಶ್‌ ಗಣಿಗ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ನಾಗೇಶ್, ಜೆಡಿಎಸ್ ಮುಖಂಡರಾದ ಬಿ.ಆರ್.ಸುರೇಶ್, ಮಹೇಶ್, ಭಾನು ಪ್ರಕಾಶ್, ಇತರರಿದ್ದರು.

ಜು.26ರಂದು ರಾಜ್ಯಮಟ್ಟದ ರಂಗೋಲಿ, ಗಾಳಿಪಟ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಮಂಡ್ಯಪಾಂಡವಪುರ ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಗ್ರಾಮದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ರಾಜ್ಯ ಮಟ್ಟದ ರಂಗೋಲಿ, ಗುಂಡು ಎತ್ತುವ ಮತ್ತು ಗಾಳಿಪಟ ಸ್ಪರ್ಧೆಯನ್ನು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿ ಆಯೋಜಿಸಲಾಗಿದೆ ಎಂದು ಗ್ರಾಮದ ಮುಖಂಡ ಸಂತೋಷ್ ಹೇಳಿದರು.

ದೊಡ್ಡ ಬ್ಯಾಡರ ಹಳ್ಳಿ ಗಾಳಿಪಟ ಸ್ಪರ್ಧೆಯ ತವರೂರು. ಇಲ್ಲಿ ಆಯೋಜನೆಗೊಂಡಿದ್ದ ಗಾಳಿಪಟ ಸ್ಪರ್ಧೆಯನ್ನು ನೋಡಿಕೊಂಡು ಜಾನಪದ ಪರಿಷತ್ ಅಧ್ಯಕ್ಷರಾಗಿದ್ದ ಎಚ್.ಎಲ್.ನಾಗೇಗೌಡರು ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆ ಆಯೋಜಿಸಿದ್ದರು. ನಂತರ ಅದು ನೆರೆ ರಾಜ್ಯಗಳೂ ಆಯೋಜಿಸಿದ್ದವು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಗಾಳಿಪಟ ಸ್ಪರ್ಧೆಯಲ್ಲಿ ದೊಡ್ಡ, ಮಧ್ಯಮ, ಚಿಕ್ಕ ಎಂಬ ಮೂರು ವಿಭಾಗಗಳಿವೆ. ಮೂರಕ್ಕೂ ಪ್ರತ್ಯೇಕ ನಗದುಬಹುಮಾನವಿದೆ. ನೂರು ಕೆಜಿ ಗುಂಡು ಎತ್ತುವ ಸ್ಪರ್ಧೆ ಇದ್ದು, ಈ ಗುಂಡನ್ನು ಗ್ರಾಮದ ರಾಜಣ್ಣ ಎಂಬುವರು ೯ ಬಾರಿ ಎತ್ತಿದ್ದಾರೆ. ಈ ವರ್ಷ ಅವರು ಸ್ಪರ್ಧೆಯಿಂದ ದೂರ ಉಳಿದು ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಇನ್ನು ರಂಗೋಲಿ ಸ್ಪರ್ಧೆ ಗ್ರಾಮದ ಕಲ್ಯಾಣಮಂದಿರದಲ್ಲಿ ನಡೆಯಲಿದೆ. ರಾತ್ರಿ ರಾಜಸುಯೋಧನ ನಾಟಕವನ್ನು ಏರ್ಪಡಿಸಲಾಗಿದೆ. ಜೊತೆಗೆ ಜೀವಧಾರೆ ಟ್ರಸ್ಟ್‌ನಿಂದ ರಕ್ತದಾನ ಕಾರ್ಯಕ್ರಮವನ್ನು ಏರ್ಪಡಿಸಿರುವುದಾಗಿ ಹೇಳಿದರು.ಗೋಷ್ಠಿಯಲ್ಲಿ ಆನಂದ್, ಮನೋಜ್, ರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಮನೆಗೆ ತೆರಳಿ ಎಸ್‌ಐಆರ್ ಅಭಿಯಾನ: ಶಾಸಕ ಎಚ್. ಕೆ. ಸುರೇಶ್
ಮಾಸಾಶನ ಸ್ಥಗಿತ ಸರಿಯಲ್ಲ: ಮಾಡಾಳು ಮಲ್ಲಿಕಾರ್ಜುನ್