14 ಜನ ರೈತರಿಗೆ ವಿಮಾ ಚೆಕ್‌ ವಿತರಣೆ

KannadaprabhaNewsNetwork |  
Published : May 13, 2025, 01:48 AM IST
ಫೋಟೋ 12ಪಿವಿಡಿ1ತಾಲೂಕಿನ ಓಬಳಾಪುರ ಹಾಲು ಡೈರಿ ಕಚೇರಿಯ ಕಟ್ಟಡ ನಿರ್ಮಾಣಕ್ಕೆ 2.50ಲಕ್ಷ ರುಗಳ ಕಾಮಗಾರಿಯ ಅಂತಿಮ ಹಂತದ ಚೆಕ್‌ನ್ನು ಡೈರಿ ಅಧ್ಯಕ್ಷ ಸತ್ಯನಾರಾಯಣರೆಡ್ಡಿ ಹಾಗೂ ಕಾರ್ಯದರ್ಶಿ ಸಿದ್ದೇಶಪ್ಪರಿಗೆ ವಿತರಿಸಿದರು.ಫೋಟೋ 12ಪಿವಿಡಿ2ಮರಣ ಹೊಂದಿದ ರಾಸುಗಳಿಗೆ ಸಂಬಂಧಪಟ್ಟಂತೆ ತಾಲೂಕಿನ 14ಮಂದಿ ರೈತರಿಗೆ ತಲಾ 40ರಿಂದ 60ರುಗಳಂತೆ ಓಟ್ಟು 9ಲಕ್ಷ ರುಗಳ ಚೆಕ್‌ಗಳನ್ನು ಶಾಸಕ ಎಚ್‌.ವಿ.ವೆಂಕಟೇಶ್‌ ಹಾಗೂ ತುಮುಲ್‌ ನಿರ್ದೇಶಕ ಚಂದ್ರಶೇಖರರೆಡ್ಡಿ ವಿತರಿಸಿದರು.  | Kannada Prabha

ಸಾರಾಂಶ

ತಾಲೂಕಿನ 14ಮಂದಿ ರೈತರಿಗೆ ರಾಸು ಮರಣದ ವಿಮಾ ಚೆಕ್ ಗಳು ಸೇರಿ ಒಟ್ಟು 12ಲಕ್ಷ ರುಗಳ ಚೆಕ್‌ಗಳನ್ನು ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ವಿತರಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಓಬಳಾಪುರ ಗ್ರಾಮದ ಹಾಲು ಡೈರಿ ಕಟ್ಟಡ ನಿರ್ಮಾಣಕ್ಕೆ 2.50ಲಕ್ಷ ಹಾಗೂ ತಲಾ 40ರಿಂದ 60ಸಾವಿರ ರುಗಳಂತೆ ತಾಲೂಕಿನ 14ಮಂದಿ ರೈತರಿಗೆ ರಾಸು ಮರಣದ ವಿಮಾ ಚೆಕ್ ಗಳು ಸೇರಿ ಒಟ್ಟು 12ಲಕ್ಷ ರುಗಳ ಚೆಕ್‌ಗಳನ್ನು ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ವಿತರಿಸಿದರು.

ಇಲ್ಲಿನ ತುಮುಲ್‌ ನಿರ್ದೇಶಕ ಸಿ.ರೆಡ್ಡಿ ಅಧ್ಯಕ್ಷತೆಯಲ್ಲಿ ಸೋಮವಾರ ಪಟ್ಟಣದ ಹಾಲು ಉತ್ಪಾದಕ ಸಂಘಗಳ ಒಕ್ಕೂಟದ ಉಪ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಮಾತನಾಡಿದ ಅವರು, ತುಮುಲ್‌ ನಿರ್ದೇಶಕರಾದ ಮೇಲೆ ಡೈರಿಗಳಿಗೆ ಹಾಲು ಹಾಕುವ ರೈತರ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿದೆ. ಈಗಾಗಲೇ ತುಮುಲ್‌ನ ವಿವಿಧ ಯೋಜನೆ ಅಡಿಯಲ್ಲಿ ರೈತರಿಗೆ ಸೌಲಭ್ಯ ಹಾಗೂ ಸೀಮೆ ಹಸು ಎಮ್ಮೆ ಇತರೆ ಜಾನುವಾರುಗಳ ಸಾಕಾಣಿಕೆಗೆ ರೈತರಿಗೆ ಆದ್ಯತೆ ನೀಡಿ ಸರ್ಕಾರದ ಸೌಲಭ್ಯ ಒದಗಿಸಲಾಗುತ್ತಿದೆ. ಸದ್ಭಳಿಕೆ ಮಾಡಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು.

ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟದ ನಿರ್ದೇಶಕ ಚಂದ್ರಶೇಖರರೆಡ್ಡಿ ಮಾತನಾಡಿ, ಹಸು ಎಮ್ಮೆ ಸಾಕಾಣಿಕೆಯಿಂದ ಸಣ್ಣ ರೈತರ ಪ್ರಗತಿಗೆ ಹೆಚ್ಚು ಅನುಕೂಲವಿದೆ. ಸ್ಥಳೀಯ ಡೈರಿಗಳಿಗೆ ಹಾಲು ಹಾಕುವ ರೈತರಿಗೆ ಒಕ್ಕೂಟದಿಂದ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಡೈರಿಯ ಕಟ್ಟಡ ನಿರ್ಮಾಣ ಹಾಗೂ ಮರಣ ಹೊಂದಿದ ರಾಸುಗಳಿಗೆ ಚೆಕ್‌ ವಿತರಿಸಿದ ಶಾಸಕರಿಗೆ ರೈತರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಈ ವೇಳೆ,ಪುರಸಭಾ ಮಾಜಿ ಅಧ್ಯಕ್ಷರಾದ ಪಿ.ಎಚ್‌.ರಾಜೇಶ್,ಪುರಸಭೆ ಸದಸ್ಯ ತೆಂಗಿನಕಾಯಿ ರವಿ, ಹಾಲು ಒಕ್ಕೂಟದ ಉಪ ಕಚೇರಿಯ ವಿಸ್ತಾರಣಾಧಿಕಾರಿ ಸುನಿತ ಹಾಗೂ ಓಬಳಾಪುರ ಹಾಲು ಡೈರಿಯ ಅಧ್ಯಕ್ಷ ಸತ್ಯನಾರಾಯಣರೆಡ್ಡಿ, ಕಾರ್ಯದರ್ಶಿ ಸಿದ್ದೇಶಪ್ಪ ಇತರೆ ಅನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ