ಕಾರವಾರ:
ಬನವಾಸಿಗೆ ಬುಧವಾರ ಭೇಟಿ ನೀಡಿ, ಗುಡ್ನಾಪುರದಲ್ಲಿನ ರಾಣಿ ಮನೆಯ ಸ್ಥಳ ವೀಕ್ಷಿಸಿ ಮಾತನಾಡಿದರು. ಕದಂಬ ವಂಶದ ಮಹಾರಾಜರು ವಸಂತ ಕಾಲದಲ್ಲಿ ತಮ್ಮ ಕುಟುಂಬ ಸಮಿತ್ರಾಹಿ ಇಲ್ಲಿಗೆ ಆಗಮಿಸಿ ತಂಗುತ್ತಿದ್ದ ಈ ಸ್ಥಳವು ಐತಿಹಾಸಿಕ ಹಿನ್ನಲೆ ಹೊಂದಿದೆ. ಪ್ರಸ್ತುತ ಇಲ್ಲಿರುವ ಅವಶೇಷಗಳು ರಾಣಿಮನೆಯ ವೈಭವಕ್ಕೆ ಸಾಕ್ಷಿಯಾಗಿವೆ. ಈ ಸ್ಥಳದ ಇತಿಹಾಸವನ್ನು ಸಾರ್ವಜನಿಕರಿಗೆ ತಿಳಿಸುವುದು ಅತ್ಯಂತ ಅಗತ್ಯವಿದೆ ಎಂದರು.ಪ್ರಸ್ತುತ ಇಲ್ಲಿರುವ ರಾಣಿ ಮನೆಯ ಅವಶೇಷಗಳಿಗೆ ಯಾವುದೇ ಹಾನಿಯಾಗದಂತೆ ಅತ್ಯಂತ ಸೂಕ್ಷ್ಮ ಮತ್ತು ಎಚ್ಚರಿಕೆಯಿಂದ ಈ ಸ್ಥಳದಲ್ಲಿನ ಪುರಾತನ ಆವರಣ ಗೋಡೆಗಳ ದುರಸ್ತಿ, ಆವರಣದಲ್ಲಿನ ಗಿಡಗಂಟೆ ತೆಗೆದು ಸ್ವಚ್ಛಗೊಳಿಸುವಂತೆ ನಿರ್ದೇಶನ ನೀಡಿದ ಡಿಸಿ, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕು. ಈ ಸ್ಥಳದ ಐತಿಹಾಸಿಕ ಹಿನ್ನೆಲೆ ಕುರಿತಂತೆ ಪ್ರವೇಶದ್ವಾರದಲ್ಲಿ ವಿವರವಾದ ಮಾಹಿತಿ ಫಲಕ ಅಳವಡಿಸಿ, ಶಿಲಾ ಶಾಸನಗಳನ್ನು ಸೂಕ್ತ ಸ್ಥಳದಲ್ಲಿ ಸಂರಕ್ಷಣೆ ಮಾಡುವಂತೆ ಹಾಗೂ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಈ ಬಾರಿಯ ಕದಂಬೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವಂತೆ ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪ ವಿಭಾಗಾಧಿಕಾರಿ ಅಪರ್ಣಾ ರಮೇಶ್, ತಹಸೀಲ್ದಾರ್ ಶ್ರೀಧರ, ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆಯ ಅಧಿಕಾರಿಗಳು ಇದ್ದರು.