ಇಂದು ಅಂತರ್‌ ಜಿಲ್ಲಾ ಮಟ್ಟದ ಚೆಸ್‌ ಪಂದ್ಯಾವಳಿ

KannadaprabhaNewsNetwork | Published : Apr 28, 2025 11:48 PM

ಸಾರಾಂಶ

ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಉದ್ಘಾಟಿಸಲಿದ್ದಾರೆ. ಅಂಡರ್ 7, ಅಂಡರ್ 9, ಅಂಡರ್ 11, ಅಂಡರ್ 13, ಅಂಡರ್ 16 ವಯೋಮಿತಿ ವಿಭಾಗಗಳಲ್ಲಿ ಮುಕ್ತ ವಿಭಾಗದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಆಶ್ರಯದಲ್ಲಿ ಜಿಲ್ಲಾ ಚೆಸ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಅಂತರ್‌ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಏ.29ರಂದು ಬೆಳಗ್ಗೆ 8.30ರಿಂದ ಸಂಜೆ 5ರವ ರೆಗೆ ನಡೆಯಲಿದೆ ಎಂದು ಗ್ಯಾರೇಜ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಣಿಪಾಲ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಉದ್ಘಾಟಿಸಲಿದ್ದಾರೆ. ಅಂಡರ್ 7, ಅಂಡರ್ 9, ಅಂಡರ್ 11, ಅಂಡರ್ 13, ಅಂಡರ್ 16 ವಯೋಮಿತಿ ವಿಭಾಗಗಳಲ್ಲಿ ಮುಕ್ತ ವಿಭಾಗದಲ್ಲಿ ನಡೆಯಲಿದೆ. ಏ.27 ನೋಂದಣಿಗೆ ಅಂತಿಮ ದಿನವಾಗಿದೆ ಎಂದರು.ಮುಕ್ತ ವಿಭಾಗದಲ್ಲಿ ಪ್ರಥಮ 15 ಸ್ಥಾನಗಳಿಗೆ ಬಹುಮಾನಗಳನ್ನು ನೀಡಲಾಗುತ್ತಿದ್ದು, ಪ್ರಥಮ 5 ಸಾವಿರ ರು., ದ್ವಿತೀಯ 3 ಸಾವಿರ ರು., ತೃತೀಯ 2 ಸಾವಿರ ರೂ., 4 ರಿಂದ 10ನೇ ಸ್ಥಾನದವರೆಗೆ ತಲಾ 1,000 ರೂ.ನಗದು, ಪ್ರಮಾಣ ಪತ್ರ ಹಾಗೂ ಟ್ರೋಫಿ ನೀಡಲಾಗುತ್ತದೆ. ವಯೋಮಿತಿ ವಿಭಾಗಗಳಲ್ಲಿ ಹುಡುಗರಿಗೆ ಪ್ರಥಮ 10 ಸ್ಥಾನಗಳಿಗೆ ಟ್ರೋಫಿ ಮತ್ತು ಪ್ರಮಾಣ ಪತ್ರ, ಹುಡುಗಿಯರಿಗೆ ಪ್ರಥಮ 7 ಸ್ಥಾನಗಳಿಗೆ ಟ್ರೋಫಿ ಮತ್ತು ಪ್ರಮಾಣ ನೀಡಲಾಗುತ್ತದೆ. ಇಬ್ಬರು ಹಿರಿಯ ಆಟಗಾರರಿಗೆ ವಿಶೇಷ ಬಹುಮಾನ ನೀಡಲಾಗುವುದು. ಅತ್ಯುತ್ತಮ ಆಟಗಾರರಿಗೆ ಹಾಗೂ ಅತ್ಯುತ್ತಮ ಮಹಿಳಾ ಆಟಗಾರ್ತಿಗೆ ವಿಶೇಷ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 7019191835 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಉಮಾನಾಥ ಕಾಪು, ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ರೋಶನ್ ಕರ್ಕಡ, ಪ್ರಮುಖರಾದ ಪ್ರಭಾಕರ ಕೆ., ವಿನಯ ಕುಮಾರ್, ಮಧುಸೂದನ್ ಕನ್ನರ್ಪಾಡಿ, ಸಾಕ್ಷತ್, ಮಿಹಿರ್ ಮಣಿಪಾಲ ಸುದ್ದಿಗೋಷ್ಠಿಯಲ್ಲಿದ್ದರು.

Share this article