ದುಗ್ಗಳ ಸದಾನಂದ
ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆ ಆಟದ ಮೈದಾನದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಯ ಬುಧವಾರದ ಪಂದ್ಯಗಳಲ್ಲಿ ಬೇತು, ಯವಕಪಾಡಿ, ಪುಲಿಕೋಟು (ಗ್ರೀನ್ಸ್) ಮತ್ತು ಮರಂದೋಡ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದವು.
ಬೇತು ಮತ್ತು ನೆಲಜಿ ತಂಡಗಳ ನಡುವಿನ ಪಂದ್ಯವನ್ನು ಕಾಫಿ ಬೆಳೆಗಾರ ಚಂಗೇಟಿರ ಅಚ್ಚಯ್ಯ, ಮುಖ್ಯ ಶಿಕ್ಷಕ ಸಿ.ಎಸ್ ಸುರೇಶ್,ಮತ್ತು ಕಾಫಿ ಬೆಳೆಗಾರ ಬಡಕಡ ಸುರೇಶ್ ಬೆಳ್ಯಪ್ಪ ಉದ್ಘಾಟಿಸಿದರು.ಬೇತು ತಂಡ ನೆಲಜಿ ವಿರುದ್ಧ 2-1 ರಲ್ಲಿ ರೋಚಕ ಜಯ ಗಳಿಸಿತು. ಬೇತು ತಂಡದ ಆಟಗಾರ 10 ಮತ್ತು 26 ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಂಡದ ಜಯಕ್ಕೆ ಕಾರಣರಾದರು. ನೆಲಜಿ ತಂಡದ ಪರವಾಗಿ ಕರುಂಬಯ್ಯ ಒಂದು ಗೋಲು ಗಳಿಸಿದರು.
ಮುಂದಿನ ಪಂದ್ಯದಲ್ಲಿ ಪುಲಿಕೋಟು (ಗ್ರೀನ್ಸ್) ತಂಡ ಕೊಳಕೇರಿ ವಿರುದ್ಧ 2-1 ಅಂತರದ ಜಯಗಳಿಸಿತು. ಪುಲಿಕೋಟು ತಂಡದ ಆಟಗಾರ ಮುತ್ತಪ್ಪ 2 ಗೋಲು ಗಳಿಸಿದರೆ ಕೊಳಕೇರಿ ತಂಡದ ಚಿಣ್ಣಪ್ಪ ಒಂದು ಗೋಲು ಗಳಿಸಿದರು.
ದಿನದ ಕೊನೆಯ ಪಂದ್ಯ ಪೇರೂರು ಎ ಮತ್ತು ಮರಂದೋಡ ತಂಡಗಳ ನಡುವೆ ನಡೆಯಿತು. ಮರಂದೊಡ ತಂಡಕ್ಕೆ 11 ಪೆನಾಲ್ಟಿ ಕಾರ್ನರ್ ಅವಕಾಶ ದೊರೆತು 6-0 ಅಂತರದ ಭರ್ಜರಿ ಜಯ ಸಾಧಿಸಿತು. ತಂಡದಲ್ಲಿ ಮಹಿಳಾ ಆಟಗಾರ್ತಿ ಬಾರಿಕೆ ಜೀವಿತ ಬಿರುಸಿನ ಆಟದಿಂದ ಗಮನ ಸೆಳೆದರು. ತಂಡದ ಆಟಗಾರ ಮುದ್ದಪ್ಪ 3, ಪೊನ್ನಣ್ಣ 1, ಸುಬ್ರಮಣಿ 1, ರಾಯಲ್ ಅಯ್ಯಣ್ಣ 1 ಗೋಲು ಗಳಿಸಿದರು.ಹಗ್ಗ ಜಗ್ಗಾಟ:
ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಏಳು ತಂಡಗಳು ಪಾಲ್ಗೊಂಡಿದ್ದವು. ಬಲ್ಲಮಾವಟಿ ಬಿ ಮತ್ತು ನಾಪೋಕ್ಲು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪೋಕ್ಲು ತಂಡ ಜಯ ಗಳಿಸಿತು. ನೆಲಜಿ ಎ ಮತ್ತು ಮರಂದೋಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮರಂದೋಡ ತಂಡ ಜಯ ಗಳಿಸಿತು. ಪೇರೂರು ಮತ್ತು ಬೇತು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೇರೂರು ತಂಡ ಜಯಗಳಿಸಿದರೆ ಕೊಳಕೇರಿ ತಂಡ ವಾಕ್ ಓವರ್ ಗಳಿಸಿತು..............
ಇಂದಿನ ಕ್ವಾರ್ಟರ್ ಫೈನಲ್ ಪಂದ್ಯಗಳು9 ಗಂಟೆಗೆ: ಮರಂದೋಡ-ಕುಂಜಿಲ10 ಗಂಟೆಗೆ: ಪುಲಿಕೋಟು (ಗ್ರೀನ್)-ಬೇತು
11 ಗಂಟೆಗೆ: ಬಲ್ಲಮಾವಟಿ (ವೈಟ್)-ನಾಲಡಿ1 ಗಂಟೆಗೆ: ಯವಕಪಾಡಿ- ಪೇರೂರು ಬಿ
.................ಹಗ್ಗಜಗ್ಗಾಟ ಸ್ಪರ್ಧೆನಾಲಡಿ-ನಾಪೋಕ್ಲು
ಕೊಳಕೇರಿ-ಬಲ್ಲಮಾವಟಿಮಧ್ಯಾಹ್ನ 2 ಗಂಟೆಗೆ ಪ್ರೌಢಶಾಲಾ ವಿಭಾಗದ ಹಾಕಿ ಪಂದ್ಯಾಟ
ಅಂಕುರ್ -ಕಕ್ಕಬ್ಬೆ ಪ್ರೌಢಶಾಲೆ