ಶರಣರ ಸಂಗದಿಂದ ಅಂತರಂಗ ವಿಕಾಸ: ನಾಡೋಜ ಪಟ್ಟದ್ದೇವರು

KannadaprabhaNewsNetwork | Published : Oct 24, 2024 12:42 AM

ಸಾರಾಂಶ

ಭಾಲ್ಕಿ ಪುರಸಭೆ ಅಧ್ಯಕ್ಷರಾದ ಶಶಿಕಲಾ ಅಶೋಕ, ಉಪಾಧ್ಯಕ್ಷರಾದ ವಿಜಯಕುಮಾರ ರಾಜಭವನ, ಬಸವ ಮೂಲಗೆ, ರಾಜಶೇಖರ ಕಲ್ಲಪ್ಪ ಇವರನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಶರಣರ ಸಂಗದಿಂದ ನಮ್ಮ ಅಂತರಂಗ ವಿಕಾಸವಾಗುತ್ತದೆ. ನಮ್ಮ ಜೀವನ ನೆಮ್ಮದಿಯಿಂದ ಇರಬೇಕಾದರೆ ಭೌತಿಕ ಬೆಳವಣಿಗೆಯ ಜೊತೆಗೆ ಅಂತರಂಗದ ಬೆಳವಣಿಗೆಯು ಅಷ್ಟೇ ಮುಖ್ಯವಾದದ್ದು ಎಂದು ನಾಡೋಜ ಡಾ.ಬಸವಲಿಂಗ ಪಟ್ಟದೇವರು ನುಡಿದರು.ಅವರು ಪಟ್ಟಣದ ಚನ್ನಬಸವಾಶ್ರಮದಲ್ಲಿ 304 ನೆಯ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಅಂತರಂಗದ ವಿಕಾಸದಿಂದ ನಮ್ಮ ಮನಸ್ಸು ವಿಶಾಲವಾಗುತ್ತದೆ. ನಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಇರುತ್ತವೆ. ನಮ್ಮ ನಡೆ ನುಡಿಯಿಂದ ಸರ್ವರ ಹಿತವನ್ನು ಬಯಸಬೇಕು. ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು ಎಂದು ಹೇಳಿದರು.ಶರಣರ ಸಂಗವೆಂದರೆ, ಅವರ ವಚನಗಳ ಅಧ್ಯಯನ ಮಾಡುವುದು. ನಿರಂತರ ವಚನ ಓದುವುದರಿಂದ ನಾವು ಶರಣರ ಜೊತೆ ಇರಲು ಸಾಧ್ಯವಿದೆ. ಶರಣರ ವಚನಗಳ ಅಧ್ಯಯನ ನಮ್ಮ ಅಂತರಂಗವನ್ನು ಬೆಳೆಗಿಸುತ್ತವೆ. ನಮ್ಮ ಜೀವನ ಪಾವನ ಮಾಡುತ್ತದೆ. ಅದಕ್ಕಾಗಿ ತಿಂಗಳಿಗೊಮ್ಮೆ ಶರಣ ಸಂಗಮದಲ್ಲಿ ಭಾಗಿ ಯಾಗುವ ಮೂಲಕ ನಮ್ಮ ಜೀವನ ಪಾವನ ಮಾಡಿಕೊಳ್ಳಬೇಕೆಂದು ಪೂಜ್ಯರು ಆಶೀರ್ವಚನ ನೀಡಿದರು. ಸಮ್ಮುಖ ವಹಿಸಿದ್ದ ಗುರುಬಸವ ಪಟ್ಟದೇವರು ಮಾತನಾಡಿ, ಬಸವಣ್ಣನವರು ಈ ಜಗತ್ತಿನ ಬೆಳಕಾಗಿದ್ದಾರೆ. ಇಂದು ಜಗತ್ತೆ ಬಸವಣ್ಣನವರ ಕಡೆ ನೋಡುತ್ತಿದೆ. ನಮ್ಮ ದೇಶದ ಸಂಸತ್ತಿನಲ್ಲಿ ಸರ್ವೋಚ್ಛ ನ್ಯಾಯಲದಲ್ಲಿ ಬಸವಣ್ಣನವರ ಚಿಂತನೆ ಆಲೋಚನೆ ನಡೆಯುತ್ತಿದೆ. ಬಸವಣ್ಣನವರ ಕಟ್ಟಿದ ಕಲ್ಯಾಣ ರಾಜ್ಯ ಮತ್ತೊಮ್ಮೆ ನಿರ್ಮಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.ಮಹಾದೇವ ಫುಲಾರಿ ಅಧ್ಯಕ್ಷತೆ ವಹಿಸಿದ್ದರು. ಸುಭಾಷ ಪಾಟೀಲ ಅವರಿಂದ ಬಸವಗುರು ಪೂಜೆ ನಡೆಯಿತು. ಪುರಸಭೆ ಅಧ್ಯಕ್ಷರಾದ ಶಶಿಕಲಾ ಅಶೋಕ, ಉಪಾಧ್ಯಕ್ಷರಾದ ವಿಜಯಕುಮಾರ ರಾಜಭವನ, ಬಸವ ಮೂಲಗೆ, ರಾಜಶೇಖರ ಕಲ್ಲಪ್ಪ ಇವರನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಅನುಭವಮಂಟಪದ ಉತ್ಸವ ನಿಮಿತ್ಯ ಮಹಾರಾಷ್ಟ್ರದ ಕಾವಳಗಾಂವದಿಂದ ಬರುವ ಪಾದಯಾತ್ರಿಕರಿಗೆ ಪ್ರಸಾದ ವ್ಯವಸ್ಥೆ ಮಾಡುವ ಅನೀಲಕುಮಾರ ಹೊಳಸಂಬ್ರೆ, ನೀಲಕಂಠ ಬಿರಾದಾರ, ನಾಗಶೆಟ್ಟಿ ಚೋಳಾ, ಶಿವಯೋಗಿ ಸ್ವಾಮಿ, ಸಿದ್ಧಲಿಂಗ ಸ್ವಾಮಿ, ಸಿದ್ರಾಮಪ್ಪ ಗುಂದಗೆ, ಸೋಮನಾಥ ಗೋರ್ಟಾ, ಮುಂತಾದವರು ಉಪಸ್ಥಿತರಿದ್ದರು. ಪೌರ ಕಾರ್ಮಿಕರ ಸಂಘದ ಅಧ್ಯಕ್ಷರಾದ ಅವಿನಾಶ ಗಾಯಕವಾಡ, ಸುಭಾಷ ಪಾಟೀಲ ಇವರು ನಶಾ ಮುಕ್ತಿಯ ಕುರಿತು ಉಪನ್ಯಾಸ ನೀಡಿದರು. ಸಂತೋಷ ಬಿ.ಜಿ.ಪಾಟೀಲ ಧರ್ಮಗ್ರಂಥ ಪಠಣ ಮಾಡಿದರು. ವೀರಣ್ಣ ಕುಂಬಾರ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರೆ. ನವಲಿಂಗ ಪಾಟೀಲ ವಂದಿಸಿದರು.

Share this article