ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಚಿರಾಗ್ ಪಾಸ್ವಾನ್, ಮಾಯಾವತಿ, ರಾಮದಾಸ ಅತವಾಲೆ ಅವರು ಆ.೧ರಂದು ಸುಪ್ರಿಂ ಕೋರ್ಟ್ ಒಳಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕೆ ಇದೆ ಎಂದು ನೀಡಿದ್ದ ತೀರ್ಪು ವಿರೋಧಿಸಿ ಇಂದು ಭಾರತ್ ಬಂದ್‌ಗೆ ಕರೆ ನೀಡಿದ್ದರು. ಈ ಬಂದ್‌ಗೆ ನಮ್ಮದು ಸಂಪೂರ್ಣ ಬೆಂಬಲವಿದೆ. ಒಳಮೀಸಲಾತಿ ಮಾಡುವುದನ್ನು ಕೈಬಿಡಬೇಕು. ಸಂವಿಧಾನದಲ್ಲಿ ಒಳಮೀಸಲಾತಿ ಎಂಬ ಪದವೇ ಇಲ್ಲ. ಆಂಧ್ರಪ್ರದೇಶದಲ್ಲಿ ಹಿಂದೆ ಒಳಮೀಸಲಾತಿ ನೀಡಿತ್ತು. ಆಗ ಕೆಲ ಸಮುದಾಯದವರು ಈ ಬಗ್ಗೆ ಸುಪ್ರಿಂಕೋರ್ಟ್‌ಗೆ ಹೋಗಿ ಪ್ರಶ್ನಿಸಿದಾಗ ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ನೀಡುವ ಅಧಿಕಾರ ಇಲ್ಲ ಎಂದು ಹೇಳಿತ್ತು. ಇದೀಗ ಸುಪ್ರೀಂಕೋರ್ಟ್ ಒಳಮೀಸಲಾತಿ ಕುರಿತು ಆದೇಶ ಹೊರಡಿಸಿದರ ಬಗ್ಗೆ ಮರುಪರಿಶೀಲನೆ ಮಾಡುವ ಅಗತ್ಯವಿದೆ ಎಂದರು.
ಸಂವಿಧಾನತ್ಮಕವಾಗಿ ನೀಡಿರುವ ಮೀಸಲಾತಿಯನ್ನು ಮಾತ್ರ ಮುಂದುವರಿಸಿಕೊಂಡು ಹೋಗಬೇಕಿದೆ. ಒಳಮೀಸಲಾತಿಯಿಂದ ನಮ್ಮ ಎರಡು ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ರಾಜ್ಯ ಸರ್ಕಾರ ತರಾತುರಿಯಾಗಿ ಒಳಮೀಸಲನ್ನು ಜಾರಿಗೆ ತರಬಾರದು. ನಮ್ಮ ಸಮುದಾಯಗಳಿಗೆ ಸರ್ಕಾರ ನ್ಯಾಯ ಒದಗಿಸಬೇಕಿದೆ. ಮೀಸಲಾತಿ ಕುರಿತು ಸಂವಿಧಾನದಲ್ಲಿ ತಿದ್ದುಪಡಿಯಾಗಬೇಕಾದರೆ ಕೇಂದ್ರ ಸರ್ಕಾರ ಮಾಡಬೇಕು. ಇದನ್ನು ರಾಜ್ಯ ಸರ್ಕಾರ ಮಾಡಲು ಸಾಧ್ಯವಿಲ್ಲ. ಒಳಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮರುಪರಿಶೀಲನೆ ಮಾಡುವುದು ತುಂಬಾ ಅಗತ್ಯವಿದೆ. ಒಳಮೀಸಲಾತಿ ನೀಡುವುದನ್ನು ಕೈಬಿಟ್ಟು ಸಂವಿಧಾನ ಆಶಯದಂತೆ ಮೊದಲಿನ ಮೀಸಲಾತಿ ಮುಂದುವರಿಸಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಡಾ.ಬಸವರಾಜ ಚವ್ಹಾಣ, ಶಿವಾಜಿ ಲಮಾಣಿ, ಬಾಬು ಚವ್ಹಾಣ, ಬಾಳು ರಾಠೋಡ, ಶಿವಾಜಿ ರಾಠೋಡ ಇದ್ದರು.