ಕನ್ನಡಪ್ರಭ ವಾರ್ತೆ ಮಣಿಪಾಲ
ಈ ಚಿತ್ರೋತ್ಸವದಲ್ಲಿ ಪ್ರಪಂಚದಾದ್ಯಂತದ 800 ಸಾಕ್ಷ್ಯಚಿತ್ರಗಳು ಭಾಗವಹಿಸಿದ್ದವು. ಒಟ್ಟು 15 ವಿಭಾಗಗಳಲ್ಲಿ ಟಾಪ್ 10 ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ‘ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು - ಭೂತ’ ತನ್ನ ವಿಭಾಗದಲ್ಲಿ ವಿಜೇತವಾಗಿ ಹೊರಹೊಮ್ಮಿದೆ.
ವಿಶ್ವಸಂಸ್ಥೆಯು 2024 ರ ಮೇ 21 ರಂದು ‘ಸಂವಾದ ಮತ್ತು ಅಭಿವೃದ್ಧಿಗಾಗಿ ಸಾಂಸ್ಕೃತಿಕ ವೈವಿಧ್ಯತೆಗಾಗಿ ವಿಶ್ವ ದಿನ’ ಎಂದು ಘೋಷಿಸಿದ ಸ್ಮರಣಾರ್ಥವಾಗಿ ಕಲ್ಚರ್ ಸಿನಿಮಾ ಫಿಲ್ಮ್ ಫೆಸ್ಟಿವಲ್ ನ್ನು ಪ್ರತಿವರ್ಷ ಮೇ 21ರಂದು ಆಯೋಜಿಸಲಾಗುತ್ತಿದೆ. ಆ. 25ರಂದು ಪ್ರಶಸ್ತಿ ಪ್ರದಾನ ನಡೆಸಲಾಯಿತು.ಈ ಸಾಧನೆಗೆ ಮಾಹೆಯ ಸಹಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್ ಮತ್ತು ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಸಾಕ್ಷ್ಯಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.