ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಥಮ ಸಮ್ಮೇಳನವು ಮೈಸೂರಿನಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು. ಎರಡನೇ ಸಮ್ಮೇಳವವನ್ನು ಚಾಮರಾಜನಗರದಲ್ಲಿ ಮಾಡುವಂತೆ ಅಂದು ನಾನು ಸೇರಿದಂತೆ ಸಚಿವ ಸಿ.ಪುಟ್ಟರಂಗಶೆಟ್ಟಿ, ಮುಖಂಡರಾದ ವೆಂಕಟರಮಣಸ್ವಾಮಿ ಅವರಿಗೆ ಬುದ್ದ ಧ್ವಜವನ್ನು ಹಸ್ತಾಂತರ ಮಾಡಲಾಯಿತು. ಅಂದಿನಿಂದ ಸಮ್ಮೇಳನ ಪೂರ್ವ ಸಿದ್ದತೆಗಾಗಿ ಸಭೆಗಳನ್ನು ಆಯೋಜನೆ ಮಾಡಿ, ಸಮಿತಿ, ಉಪ ಸಮಿತಿ ಹಾಗೂ ತಾಲೂಕು ಸಮಿತಿಗಳನ್ನು ರಚನೆ ಮಾಡಿಕೊಂಡು ಕಾರ್ಯಕ್ರಮದ ಯಶಸ್ವಿಗಾಗಿ ಪಕ್ಷಾತೀತವಾಗಿ ಎಲ್ಲ ಮುಖಂಡರು ಶ್ರಮಿಸುತ್ತಿದ್ದೇವೆ ಎಂದರು.
ಸಮ್ಮೇಳನವು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಂತರರಾಷ್ಟ್ರೀಯ ಭೌದ್ದ ಬಿಕ್ಕು, ರಾಷ್ಟ್ರೀಯ ಬೌದ್ದ ಧರ್ಮ ಪ್ರಚಾರಕರು, ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗ ಯಶವಂತ್‌ರಾವ್ ಅಂಬೇಡ್ಕರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಬುದ್ದ ನವಮಿ, ಧಮ್ಮ ನವಮಿ, ಸಂಘಂ ನವಮಿ ಎಂದು ವಿಂಗಡಣೆ ಮಾಡಿಕೊಳ್ಳಲಾಗುತ್ತದೆ. ಸಂಪೂರ್ಣವಾಗಿ ಬುದ್ದನ ವಿಚಾರಧಾರೆಗಳು ಹಾಗೂ ಬುದ್ದ ಪಂಚ ಶೀಲ ತತ್ವಗಳ ಪಾಲನೆ ಅಂಬೇಡ್ಕರ್ ಅವರು ಬುದ್ದನಡೆಗೆ ಕುರಿತು ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯಲಿದೆ ಎಂದರು.ಜಿಲ್ಲೆಯ ಐದು ತಾಲೂಕು ಕೇಂದ್ರಗಳಲ್ಲಿ ಬುದ್ದ ರಥ ಚಾಲನೆಗೊಳ್ಳಲಿದೆ ಜಿಲ್ಲೆಯ ವ್ಯಾಪ್ತಿಯ ೪೦೩ ಗ್ರಾಮಗಳನ್ನು ಸಂಪರ್ಕ ಮಾಡಲಿದ್ದು, ನಾಲ್ಕು ರಥಗಳಲ್ಲಿ ಭೌದ್ದ ಭಿಕ್ಕು, ಉಪಾಸಕರು, ಸಂಚಾಲಕರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಆಯಾ ಗ್ರಾಮಗಳಿಗೆ ರಥಗಳು ಆಗಮಿಸುತ್ತಿದ್ದಂತೆ, ಸ್ವಾಗತಿಸಿ, ಕಾರ್ಯಕ್ರಮದ ಬಗ್ಗೆ ಮಾಹಿತಿ ಹಾಗೂ ಬುದ್ದ ಧಮ್ಮ ದೀಕ್ಷೆ ಪಡೆದು ಗೌರವಯುತವಾಗಿ ಅಯಾ ಗ್ರಾಮಗಳ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು ಬೀಳ್ಕೊಡಲಿದ್ದಾರೆ ಎಂದರು.
ಸಮಿತಿಯ ಸಂಚಾಲಕರಾದ ವೆಂಕಟರಮಣಸ್ವಾಮಿ (ಪಾಪು) ಮುಳ್ಳೂರು ಶಿವಮಲ್ಲು, ಕೋಡಿಉಗನೆ ಮಂಜುನಾಥ್, ಸಿದ್ದರಾಜು, ಯಳಂದೂರು ಸಿದ್ದರಾಜು, ಎನ್. ನಾಗಯ್ಯ, ಸುಭಾಶ್ ಮಾಡ್ರಹಳ್ಳಿ ಇದ್ದರು.