ಸಕಲೇಶಪುರದಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ

KannadaprabhaNewsNetwork |  
Published : Oct 02, 2026, 01:45 AM IST
1ಎಚ್ಎಸ್ಎನ್3 : ಹಾಸನ ಜಿಲ್ಲಾ ಬೆಳೆಗಾರರ ಸಂಘದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಸಂಸದ ಶ್ರೇಯಸ್ ಪಟೇಲ್ ಉದ್ಘಾಟಿಸಿದರು. ಶಾಸಕ ಸೀಮೆಂಟ್ ಮಂಜು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಮಲೆನಾಡಿನಲ್ಲೂ ಬರದ ಛಾಯೆ ಕಾಣಿಸಿಕೊಂಡಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಸಕಲೇಪುರ ತಾಲೂಕನ್ನು ಬರಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ. ತಾಲೂಕಿಗೆ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಕರೆಸಿ ಬೆಳೆಗಾರರ ಸಮಸ್ಯೆ ನಿವೇದನೆ ಮಾಡುವ ಕೆಲಸ ಮಾಡಲಿದ್ದೇನೆ. ಕಾಫಿ ಕುಡಿಯುವುದರಿಂದ ಮನಃಶಾಂತಿ ದೊರೆಯಲಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕಾಫಿ ಕುಡಿಯುವುದರಿಂದ ಒತ್ತಡ ನಿವಾರಣೆಯಾಗಲಿದೆ. ಸಂಸತ್ತಿನಲ್ಲಿ ಎಲ್ಲ ಸಂಸದರಿಗೂ ಕಾಫಿ ಪೌಡರ್‌ ನೀಡುವ ಮೂಲಕ ಕಾಫಿ ಪರಿಚಯ ಮಾಡುವ ಯತ್ನ ನಡೆಸಲಿದ್ದೇನೆ. ಕಾಫಿ ಬೆಳೆಗಾರರು ಹೃದಯವಂತರು ಸದಾ ಹಸನ್ಮುಖಿಯಾಗಿರುವ ಬೆಳೆಗಾರರ ನಗು ಮಾಸದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕಾಫಿ ಬೆಳೆಗಾರರು ಶ್ರಮಜೀವಿಗಳು. ಹಲವು ಸಮಸ್ಯೆಗಳು ನಡುವೆ ನಲುಗುತ್ತಿರುವ ಕಾಫಿ ಬೆಳೆಗಾರರು ತಮ್ಮ ಸಮಸ್ಯೆಗಳನ್ನು ತೋರ್ಪಡಿಸಿಕೊಳ್ಳದೆ ಕೆಲಸ ಮಾಡುವ ವಿಶೇಷ ಜನರು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು. ಗುರುವಾರ ತಾಲೂಕಿನ ಒಸ್ಸೂರು ಗ್ರಾಮ ಸಮೀಪ ಹಾಸನ ಜಿಲ್ಲಾ ಬೆಳೆಗಾರರ ಸಂಘ ಹಮ್ಮಿಕೊಂಡಿದ್ದ ೧೨ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಕಾಫಿ ಬೆಳೆಗಾರರ ಸಮಸ್ಯೆಗೆ ಧ್ವನಿಯಾಗಿ ಸಂಸದನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಿದ್ದೇನೆ. ಸರ್ಫೈಸಿ ಕಾನೂನು, ಕಾಡಾನೆ ಸಮಸ್ಯೆಗಳು ಕುರಿತು ಸಂಸತ್ತಿನಲ್ಲಿ ಗಮನ ಸೆಳೆದಿದ್ದೇನೆ. ಕಾಫಿ ಬೆಳೆಗಾರರ ಒಗ್ಗಟ್ಟು ಎಲ್ಲ ಬೆಳೆಗಾರರಲ್ಲೂ ಅಗತ್ಯವಿದೆ. ಮಲೆನಾಡಿನಲ್ಲೂ ಬರದ ಛಾಯೆ ಕಾಣಿಸಿಕೊಂಡಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಸಕಲೇಪುರ ತಾಲೂಕನ್ನು ಬರಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ. ತಾಲೂಕಿಗೆ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಕರೆಸಿ ಬೆಳೆಗಾರರ ಸಮಸ್ಯೆ ನಿವೇದನೆ ಮಾಡುವ ಕೆಲಸ ಮಾಡಲಿದ್ದೇನೆ. ಕಾಫಿ ಕುಡಿಯುವುದರಿಂದ ಮನಃಶಾಂತಿ ದೊರೆಯಲಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕಾಫಿ ಕುಡಿಯುವುದರಿಂದ ಒತ್ತಡ ನಿವಾರಣೆಯಾಗಲಿದೆ. ಸಂಸತ್ತಿನಲ್ಲಿ ಎಲ್ಲ ಸಂಸದರಿಗೂ ಕಾಫಿ ಪೌಡರ್‌ ನೀಡುವ ಮೂಲಕ ಕಾಫಿ ಪರಿಚಯ ಮಾಡುವ ಯತ್ನ ನಡೆಸಲಿದ್ದೇನೆ. ಕಾಫಿ ಬೆಳೆಗಾರರು ಹೃದಯವಂತರು ಸದಾ ಹಸನ್ಮುಖಿಯಾಗಿರುವ ಬೆಳೆಗಾರರ ನಗು ಮಾಸದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದರು.ಶಾಸಕ ಸಿಮೆಂಟ್ ಮಂಜು ಮಾತನಾಡಿ, ಒತ್ತುವರಿ ಭೂಮಿ ಗುತ್ತಿಗೆ ನೀಡುವ ಯೋಜನೆ ಅರ್ಧಕ್ಕೆ ನಿಂತಿದ್ದು ಯೋಜನೆ ಕಾರ್ಯಗತಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಡೀಮ್ಡ್ ಅರಣ್ಯ ಸರ್ವೆಗೆ ಈಗಾಗಲೇ ಪುನರ್‌ ಸರ್ವೇ ನಡೆಸಲು ಸರ್ಕಾರ ಸೂಚಿಸಿದೆ. ಇದು ಕಾಫಿಬೆಳೆಗಾರರರಿಗೆ ದೊರೆತಿರುವ ಮೊದಲ ಜಯವಾಗಿದೆ. ಕಸ್ತೂರಿ ರಂಗನ್ ವರಧಿಯ ಬಗ್ಗೆ ಈಗಾಗಲೇ ನಮ್ಮ ಶಕ್ತಿ ಮೀರಿ ಹೋರಾಟ ನಡೆಸಿದ್ದೇವೆ. ವಿಧಾನಸೌಧದಲ್ಲಿ ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಅಂಕಿಸಂಖ್ಯೆ ಸಹಿತ ವಿವರಿಸಿದ್ದೇನೆ. ಕಾಫಿ ಬೆಳೆಗಾರರ ಯಾವುದೇ ರೀತಿಯ ಸಮಸ್ಯೆಗೆ ನಾನು ಧ್ವನಿಯಾಗಿರಲಿದ್ದೇನೆ. ಸಕಲೇಶಪುರ ತಾಲೂಕನ್ನು ಬರಪಟ್ಟಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇನೆ. ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಸಮಸ್ಯೆ ಪರಿಹರಿಸಬಹುದಾಗಿದೆ, ಪರಿಹಾರವಿಲ್ಲದ ಸಮಸ್ಯೆಯೇ ಇಲ್ಲ ಎಂದರು. ವೇದಿಕೆಯಲ್ಲಿ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಕರ್ನಾಟಕ ಬೆಳೆಗಾರರ ಒಕ್ಕೋಟದ ಮಾಜಿ ಅಧ್ಯಕ್ಷ ಜಯರಾಂ, ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಂದ್ರ, ಹಾಸನ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಗ್ಗೋವೆ ಪುಟ್ಟರಾಜು, ಬೆಕ್ಕನಹಳ್ಳಿ ನಾಗರಾಜ್‌, ಸುಬ್ರಮಣ್ಯ ಮುಂತಾದವರಿದ್ದರು. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಉಚಿತವಾಗಿ ಕಾಫಿ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯಗೊಳ್ಳಬೇಕು: ಕಾವೇರಿ
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಕ್ರೀಡಾಕೂಟ..!