ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಜೂ.26ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮವನ್ನು ರಾಜೀವಗಾಂಧಿ ಆರೋಗ್ಯ ವಿವಿ ಕುಲಪತಿ ಡಾ.ಬಿ.ಸಿ.ಭಗವಾನ ಅವರು ಉದ್ಘಾಟಿಸಲಿದ್ದು, ಮಾಜಿ ಸಚಿವ ಮುರುಗೇಶ ನಿರಾಣಿ, ವಿವಿಯ ಅಧ್ಯಯನ ಮಂಡಳಿ ಸದಸ್ಯರಾದ ಸಿದ್ದನಗೌಡ ಪಾಟೀಲ, ಡಾ.ಡಿ.ವಿ.ಲೀಲಾಧರ, ಸಂಸ್ಥೆಯ ಅಧ್ಯಕ್ಷೆ ಮಾಧುರಿ ಮುಧೋಳ ಉಪಸ್ಥಿತರಿರುವರು ಎಂದರು.
2 ದಿನದ ಕಾರ್ಯಾಗಾರದಲ್ಲಿ ವಿವಿಧ ಗೋಷ್ಠಿಗಳು ಜರುಗಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಎಸ್.ಗೋಪಕುಮಾರ, ಡಾ.ಚಂದ್ರಕುಮಾರ ದೇಶಮುಖ, ಡಾ.ಪ್ರತಿಮಾ ನಾಗೇಶ, ಡಾ.ಸೈಫುದ್ಧಿನ್ ಗುರುಕಲ್ಲ, ಡಾ.ಸುಜಾತಾ ಕದಂ, ಡಾ.ಮಾಧವ ಡಿಗ್ಗಾವಿ, ಡಾ.ಸಿ.ಸುರೇಶಕುಮಾರ, ಡಾ.ಮೃದುಲ್ ಚಿತ್ರಕಾರ ಪಾಲ್ಗೊಳ್ಳುವರು. ಜೂ.27ರ ಸಂಜೆ ಕಾರ್ಯಕ್ರಮಕ್ಕೆ ತೆರೆಬೀಳಲಿದೆ ಎಂದರು.ಆಯುರ್ವೇದ ಕ್ಷೇತ್ರದಲ್ಲಿ ಆಳವಾದ ಜ್ಞಾನ, ಅವಿಷ್ಕಾರಗಳು, ಚಿಕಿತ್ಸಾ ವಿಧಾನ, ಅಡ್ಡಪರಿಣಾಮವಿಲ್ಲದ ಚಿಕಿತ್ಸೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ. 1100ಕ್ಕೂ ಅಧಿಕ ವಿದ್ಯಾರ್ಥಿಗಳು, ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.