ಉಡುಪಿ: ಇಂಡೋನೇಷಿಯನ್ ಫಿಲಾಟಲಿಸ್ಟ್ ಅಸೋಸಿಯೇಷನ್ ಆಯೋಜಿಸಿದ್ದ 17ನೇ ನ್ಯಾಷನಲ್ ಬಾಲಿ ಪೆಕ್ಸ್ 2025ನ ಇಂಟರ್ ನ್ಯಾಷನಲ್ ಫ್ರೆಂಡ್ ಶಿಪ್ ಫಿಲಾಟಲಿ ಸ್ಪರ್ಧೆ ಹಾಗೂ ಪ್ರದರ್ಶನದಲ್ಲಿ ಅಂಚೆಚೀಟಿ ಸಂಗ್ರಾಹಕಿ, ಉಡುಪಿ ಅಂಚೆ ಇಲಾಖಾ ಉದ್ಯೋಗಿ ಪೂರ್ಣಿಮಾ ಜನಾರ್ದನ್ ಅವರ ಸಂಗ್ರಹದ ಅಂಚೆ ಚೀಟಿ ಪ್ರದರ್ಶನ ವರ್ಮೈಲ್ ಪುರಸ್ಕಾರ ಪಡೆದಿದೆ. ಪೂರ್ಣಿಮಾರ ಡಿಸ್ಕವರಿಂಗ್ ದಿ ಡಿವೈನ್, ಆನ್ ಎಕ್ಸ್‌ಪ್ಲೋರೇಶನ್ ಆಫ್ ಹಿಂದೂ ಡಯಾಟಿಸ್ ಫಿಲಾಟಲಿ ಪ್ರದರ್ಶನವು 81 ಅಂಕ ಪಡೆದು ಈ ಪುರಸ್ಕಾರ ಪಡೆದಿದೆ. ಪೂರ್ಣಿಮಾ ಜನಾರ್ದನ ಅವರು ಫಿಲಾಟೆಲಿ ಹಾಗೂ ಸಂಸ್ಕೃತಿ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸ ಮತ್ತು ಸಂಸ್ಕೃತಿಯ ಸಮ್ಮಿಲನದ ಔಚಿತ್ಯದ ಬಗ್ಗೆ ವಿಚಾರ ಮಂಡಿಸಿದರು.ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಇಂಡೋನೆಷ್ಯಾ ಫಿಲಾಟೆಲಿಸ್ಟ್ ಅಸೋಸಿಯೇಷನ್ ಪ್ರತಿನಿಧಿ ನಸುರುಲ್ ಜಿಹಾದಾನ್, ಬಾಲಿ ಜನರಲ್ ಫೋಸ್ಟ್ ಆಫೀಸ್ ನ ಕಾರ್ಪೊರೇಟ್ ಮ್ಯಾನೇಜರ್ ಹಬೀಬಿ ಹಾಗೂ ಬಾಲಿ ಪೆಕ್ಸ್ -2025ರ ಮುಖ್ಯ ಆಯೋಜಕ ಸೂರ್ಯ ಹದಿನಾಥ ಹಾಗೂ ಇತರ ಪ್ರಶಸ್ತಿ ವಿಜೇತರು ಉಪಸ್ಥಿತರಿದ್ದರು.ಹಿಂದೂ ದೇವರು ಹಾಗೂ ದೇವತೆಗಳ ಬಗ್ಗೆ ಪೂರ್ಣಿಮಾ ಅವರು ಸಂಗ್ರಹಿಸಿದ ಅಂಚೆ ಚೀಟಿ ಪ್ರದರ್ಶನ ಮೆಚ್ಚುಗೆ ಪಡೆಯಿತು. ಪ್ರದರ್ಶನವು ಇಂಡೋನೇಷ್ಯಾ ಬಾಲಿಯ ದೆನ್ ಪಸಾರ್ ನಲ್ಲಿರುವ ಸ್ಟೇಟ್ ಮ್ಯೂಸಿಯಂನಲ್ಲಿ ಡಿ. 11ರಿಂದ 14ರ ವರೆಗೆ ನಡೆದಿದ್ದು ವಿಶ್ವದ ಸುಮಾರು 27 ಫಿಲಾಟೆಲಿಸ್ಟ್ ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.