21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ

KannadaprabhaNewsNetwork |  
Published : Jun 10, 2025, 08:51 AM IST
ದಿನಾಚರಣೆ | Kannada Prabha

ಸಾರಾಂಶ

ಜೂ. 21ರಂದು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರದ ಕೆಳಗಿನ ಗೌಡ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಡಿಕೇರಿ - ಕೊಡಗು ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿ.ಪಂಚಾಯತ್, ನೀಮಾ ಕೊಡಗು ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಜೂ.21 ರಂದು 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು’ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಘೋಷವಾಕ್ಯದಡಿ ನಗರದ ಕೆಳಗಿನ ಗೌಡ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಶೈಲಜಾ ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 6.45 ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಬೆಳಗ್ಗೆ 7ರಿಂದ 8 ಗಂಟೆಯವರೆಗೆ ಯೋಗ ಪ್ರಾತ್ಯಕ್ಷಿಕೆ ನಡೆಯಲಿದೆ. ಜೂ. 20 ರಂದು ಯೋಗಾಸನಗಳ ಪೂರ್ವಭ್ಯಾಸವನ್ನು ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಸಲಾಗುವುದು. ಜೂ.10 ರಂದು ’ಹಸಿರು ಯೋಗ ಹರಿತ್ ಯೋಗ’ ಘೋಷವಾಕ್ಯದಡಿ ಬೆಳಗ್ಗೆ 8.30 ಗಂಟೆಗೆ ಗಾಂಧಿಮೈದಾನದಿಂದ ನಗರದ ಸುದರ್ಶನ ವೃತ್ತದ ಗಾಂಧಿ ಭವನದವರೆಗೆ ಯೋಗಭ್ಯಾಸದೊಂದಿಗೆ ಶ್ರಮದಾನ ಮತ್ತು ಸ್ವಚ್ಛತಾ ಅಭಿಯಾನ ಹಾಗೂ ಪ್ರಮುಖವಾಗಿ ಸಸ್ಯಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ. 21ರ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿದಿಗಳನ್ನು ಅಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ವೈದ್ಯಾಧಿಕಾರಿ ಶುಭಾ ಮಾತನಾಡಿ, ಇಲಾಖೆ ವತಿಯಿಂದ ಪ್ರತಿಯೊಬ್ಬರಿಗೂ ಯೋಗ ತಲುಪಿಸುವ ನಿಟ್ಟಿನಲ್ಲಿ ಗ್ರಾಮಸಭೆ, ನ್ಯಾಯಾಲಯ, ಸರ್ಕಾರಿ ಕಚೇರಿ, ಸರ್ಕಾರೇತರ ಸಂಸ್ಥೆಗಳಲ್ಲಿ 10-15 ನಿಮಿಷ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರೊಂದಿಗೆ ಯೋಗ ಕುರಿತು ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಯೋಗ ರಿಲ್ಸ್, ಯೋಗ ಜಿಂಗಲ್ಸ್ ರಚನೆ ಹಾಗೂ ಇನ್ನಿತರೆ ಸ್ಪರ್ಧೆಗಳು ನಡೆಯಲಿದೆ. ಆಸಕ್ತರು https://yoga.ayush.gov.in/yoga-sangam ಲಿಂಕ್ ಬಳಸಿ ಕಳುಹಿಸಬಹುದು ಎಂದು ಮಾಹಿತಿ ನೀಡಿದರು.ಯೋಗ ಶಿಕ್ಷಕ ಕೆ.ಕೆ.ಮಹೇಶ್ ಕುಮಾರ್ ಮಾತನಾಡಿ, ಯೋಗವು ಶರೀರ ಮತ್ತು ಮನಸ್ಸನ್ನು ಸದೃಢಗೊಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ಯೋಗ ಮಾಡುವುದು ಅಗತ್ಯವಾಗಿದೆ ಎಂದ ಅವರು, ಇಂದು ಪ್ರಕೃತಿ ನಾಶವಾಗುತ್ತಿದೆ. ಅದನ್ನು ಉಳಿಸುವ ನಿಟ್ಟಿನಲ್ಲಿ ಈ ಬಾರಿ ’ಹಸಿರು ಯೋಗ ಹರಿತ್ ಯೋಗ’ ಘೋಷವಾಕ್ಯದಡಿ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಆಸಕ್ತ ಯೋಗಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ಸಿಗೊಳಿಸಬೇಕು ಎಂದು ಮನವಿ ಮಾಡಿದರು.ನೀಮಾ ಕೊಡಗು ಜಿಲ್ಲಾಧ್ಯಕ್ಷ ರಾಜರಾಮ್ ಮಾತನಾಡಿ, ಜಿಲ್ಲೆಗೆ ಕನಿಷ್ಠ ಯೋಗೋಧ್ಯಾನ ನಿರ್ಮಾಣಕ್ಕೆ ನೀಮಾ ಕೊಡಗು ಮತ್ತು ಆಯೂಷ್ ಇಲಾಖೆಗೆ ಸ್ಥಳ ನಿಗದಿಗೊಳಿಸಲು ಮನವಿ ಮಾಡಲಾಗಿದೆ. 2026 ರ ಯೋಗ ದಿನಾಚರಣೆಯನ್ನು ಯೋಗೋಧ್ಯಾನದಲ್ಲೇ ಮಾಡುವ ಗುರಿಯಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆಯುಷ್ ಇಲಾಖೆ ಪ್ರಥಮ ದರ್ಜೆ ಸಹಾಯಕರಾದ ಕರುಣಾಕರ್ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ