ಅಂತರ ರಾಜ್ಯ ಕಳ್ಳನ ಬಂಧನ

KannadaprabhaNewsNetwork | Published : Jul 25, 2024 1:30 AM

ಸಾರಾಂಶ

ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ ರಾಜ್ಯ ಕಳ್ಳನನ್ನು ಬಂಧಿಸಿರುವ ಪೊಲೀಸರು ಆತನಿಂದ ನಗದು, ಆಭರಣ, ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಿರಿಯೂರು ನಗರಠಾಣೆ ಪೋಲೀಸರ ಕಾರ್ಯಾಚರಣೆಯಿಂದ ಅಂತರರಾಜ್ಯ ಕಳ್ಳರನ್ನು ಬಂಧಿಸಿ 69,01,000 ಲಕ್ಷ ಮೌಲ್ಯದ 1 ಕೆಜಿ 30 ಗ್ರಾo ತೂಕದ ಬಂಗಾರದ ಆಭರಣಗಳು, 68,000 ನಗದು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಮೋಟಾರ್‌ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಚಳ್ಳಕೆರೆ ರಸ್ತೆಯ ಸುಜಾತಾ ಎನ್ನುವವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಹಿರಿಯೂರು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಎಸ್.ಚೈತ್ರಾ ರವರ ನೇತೃತ್ವದಲ್ಲಿ ನಗರಠಾಣೆ ಸಿಪಿಐ ರಾಘವೇಂದ್ರ ಕಾಂಡಿಕೆ, ಹೊಸದುರ್ಗ ಠಾಣೆ ಪಿಎಸ್‌ಐ ಭೀಮನಗೌಡ ಪಾಟೀಲ ಮತ್ತು ಸಿಬ್ಬಂದಿಗಳ ತಂಡ ಬಾತ್ಮಿದಾರರ ಸಹಾಯ ಮತ್ತು ತಾಂತ್ರಿಕ ಸಾಕ್ಷಿಗಳನ್ನು ಆಧರಿಸಿ ಆರೋಪಿ ಬಳ್ಳಾರಿ ಹನುಮಂತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದರಿ ಆರೋಪಿಯು ಹಿರಿಯೂರು ನಗರಠಾಣೆಯ 8 ಪ್ರಕರಣ, ಗ್ರಾಮಾoತರ ಠಾಣೆಯ 5 ಪ್ರಕರಣ, ಹೊಸದುರ್ಗ ಠಾಣೆಯ 2 ಪ್ರಕರಣ, ಅಬ್ಬಿನಹೊಳೆ ಠಾಣೆಯ1ಪ್ರಕರಣ, ಚಿತ್ರದುರ್ಗ ಬಡಾವಣೆ ಠಾಣೆಯ 1 ಪ್ರಕರಣ ಹಾಗೂ ಬಳ್ಳಾರಿಯ 1ಪ್ರಕರಣ ಸೇರಿದಂತೆ 15 ಮನೆ ಕಳ್ಳತನ ಪ್ರಕರಣ ಮತ್ತು 3 ಮೋಟಾರ್ ಸೈಕಲ್ ಕಳ್ಳತನದಲ್ಲಿ ಭಾಗಿಯಾಗಿರುವುದು ಪತ್ತೆಯಾಗುತ್ತದೆ.|

ಆರೋಪಿಯಿಂದ 69,01,000 ಲಕ್ಷ ರು. ಮೌಲ್ಯದ ಒಂದು ಕೆಜಿ 30 ಗ್ರಾo ಬಂಗಾರದ ಒಡವೆ, 68 ಸಾವಿರ ರು.ನಗದು 1ಲಕ್ಷದ10 ಸಾವಿರ ಮೌಲ್ಯದ 2 ಮೋಟಾರ್ ಸೈಕಲ್ ಒಳಗೊಂಡಂತೆ ಒಟ್ಟು 70 ಲಕ್ಷ 70 ಸಾವಿರ ಮೌಲ್ಯದ ಆಭರಣ, ನಗದು ಹಾಗೂ ಮೋಟಾರ್ ಸೈಕಲ್ ವಶಪಡಿಕೊಂಡು ಆರೋಪಿಯನ್ನು ನ್ಯಾಯಾoಗ ಬಂಧನಕ್ಕೆ ನೀಡಲಾಗಿದೆ.

ಪ್ರಕರಣ ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯೂರು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಎಸ್. ಚೈತ್ರಾ ರವರ ನೇತೃತ್ವದಲ್ಲಿ ನಗರಠಾಣೆ ಸಿಪಿಐ ರಾಘವೇಂದ್ರ ಕಾಂಡಿಕೆ, ಹೊಸದುರ್ಗ ಠಾಣೆ ಪಿಎಸ್‌ಐ ಭೀಮನಗೌಡ ಪಾಟೀಲ ಹಾಗೂ ಸಿಬ್ಬಂದಿಗಳಾದ ದೇವೇಂದ್ರಪ್ಪ, ರುದ್ರಮುನಿಸ್ವಾಮಿ, ಸಿದ್ದಲಿಂಗೇಶ್ವರ, ತಿಪ್ಪೇಸ್ವಾಮಿ, ರಾಜಣ್ಣ, ಜಾಫರ್ ಸಾಧಿಕ್, ಸುರೇಶ್ ನಾಯ್ಕ, ನಾಗಣ್ಣ, ಸುದರ್ಶನ್ ಗೌಡ, ಬೆರಳಚ್ಚು ಘಟಕದ ಪಿಎಸ್‌ಐ ವಿಶ್ವನಾಥ್, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ರಾಘವೇಂದ್ರ ಹಾಗೂ ತಂಡವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Share this article