ಕೊಪ್ಪಳ: ನಗರದ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಎದುರು ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆಯ ಅವ್ಯವಹಾರ ತನಿಖೆ ಆಗಲಿ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ಜರುಗಿತು.
ಪ್ರತಿಭಟನೆಯಲ್ಲಿ ಪ್ರಾಧಿಕಾರದ ಹೆಸರಿನಲ್ಲಿ ಜನರಿಗೆ ನಿವೇಶನ ಕೊಡಿಸುತ್ತೇವೆ ಎಂದು ನಂಬಿಸಿ ತಮ್ಮ ಕಾರ್ಯಾಲಯದ ಕೆಲವು ಸಿಬಂದಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಕೊಟ್ಯಂತ ರೂಪಾಯಿ ವಂಚಿಸಿದ್ದಾರೆ.ಇದರ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ ಮೇಲೆ ಕ್ರಮ ಕೈಗೊಳ್ಳಬೇಕು. 2024-25 ರಲ್ಲಿ ಕೊಪ್ಪಳ ನಗರ ಮತ್ತು ಸುತ್ತಲಿನ ಜನಗಳಿಗೆ ನಿವೇಶನ ಕೋರಿ ಅರ್ಜಿ ಹಾಕಿದ್ದಾರೆ. ₹1000 ರಿಂದ ₹2000 ವರೆಗೆ ಪ್ರಾಧಿಕಾರಕ್ಕೆ ಹಣ ಸಂದಾಯ ಮಾಡಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರಗತಿ ಹೊಂದ್ದಿದ ಬಗ್ಗೆ ಅರ್ಜಿದಾರರಿಗೆ ಯಾವುದೇ ಮಾಹಿತಿ ಒದಗಿಸಿಲ್ಲ ಹಾಗೂ ತಕ್ಷಣ ಎಷ್ಟೊ ಅರ್ಜಿ ಹಾಕಲಾಗಿದೆ ಮತ್ತು ಪ್ರಾದಿಕಾರಕ್ಕೆ ಎಲ್ಲ ಹಣ ಜಮಾಯಾಗಿದೆ. ಪ್ರಾಧಿಕಾರದ ಹೆಸರಿನಲ್ಲಿ ಕೊಟ್ಯಂತರ ಭ್ರಷ್ಟಾಚಾರದ ಬಗ್ಗೆ ಎಸ್.ಐ.ಟಿಗೆ ವಹಿಸಬೇಕು. ಆರೋಪಿಗಳನ್ನು ಬಂಧಿಸಬೇಕು. ಅರ್ಜಿ ಸಲ್ಲಿಸಿದ ಎಲ್ಲರಿಗೂ ನಿವೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾಧ್ಯಕ್ಷ ಕಾಸಿಂ ಸರದಾರ, ಜಿ.ನಾಗರಾಜ, ಮೀರಾಸಾಬ್ ಬನ್ನಿಗೋಳ, ಶೇಕ್ಷಾವಲ್ಲಿ, ಮಹಮದ್, ರಂಜಾನಸಾಬ್ ಕಂಬಳಿ, ಮೆಹಬೂಬ ದಫೇದಾರ, ರಜಾಕ್ ನದಾಫ , ಗೌಸುಸಾಬ್ ಇತರರಿದ್ದರು.