ಕನ್ನಡಪ್ರಭ ವಾರ್ತೆ ಮೈಸೂರು
ಎನ್.ಐ.ಪಿ.ಎಂ ಮೈಸೂರು ಅಧ್ಯಾಯ, ಮೈಸೂರು ಸಿಎಚ್‌ಆರ್‌ಒ ಫೋರಂ ಹಾಗೂ ಎಡಿನ್‌ಎಚ್.ಆರ್‌ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮವು ಮಂಗಳೂರಿನಲ್ಲಿ ಜರುಗಿತು.
ದಿ ಫ್ಯೂಚರ್ ಆಫ್‌ಎಚ್.ಆರ್ ಮತ್ತು ಬ್ಯುಸಿನೆಸ್‌ಲೀಡರ್ಶಿಪ್‌ಇನ್ ಇಂಡಿಯಾ 2025- 35 ಕ್ರಿಯೇಟ್ ಫಾಸ್ಟರ್‌ಎಂಪವರ್‌ವಿಷಯವನ್ನಾಧಿರಿಸಿದ ಈ ಸಭೆಯಲ್ಲಿ ದೇಶದ ಭವಿಷ್ಯದ ಮಾನವ ಸಂಪನ್ಮೂಲ ಮತ್ತು ವ್ಯವಹಾರ ನಾಯಕರ ಪಾತ್ರದ ಬಗ್ಗೆ ಚರ್ಚೆ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಳು, ಪ್ಯಾನೆಲ್ ಚರ್ಚೆಗಳು, ಯಶಸ್ವಿ ಸ್ಟಾರ್ಟ್- ಅಪ್ ಕಥೆಗಳೊಂದಿಗೆ ಫೈರ್ ಸೈಡ್ ಚಾಟ್ ಮೈಸೂರು ಮೀರಿದ ಕಾರ್ಪೊರೇಟ್‌ನೆಟರ್ವಕಿಂಗ್‌ಮತ್ತು ಎಚ್.ಆರ್. ಕನೆಕ್ಟ್‌ಸೆಷನ್‌ಗಳು ಮತ್ತು ಇಂಡಸ್ಟ್ರಿ ಅಕಾಡೆಮಿ ಇಂಟರ್ಯಾಕ್ಷನ್‌ನಡೆಯಿತು.
ಪ್ಯಾನೆಲ್ ಸ್ಪೀಕರ್ ಆಗಿ ಮಾತನಾಡಿದ ವಿನಯ್ ಶಂಕರ್ ಅವರು, ನಕ್ಷಾ ಬಿಲ್ಡರ್ಸ್ ಅನ್ನು ಮುನ್ನಡೆಸುವ ಸಂದರ್ಭದಲ್ಲಿ ಪಡೆದ ಅನುಭವಗಳನ್ನು ಹಂಚಿಕೊಂಡು, ಜನಕೇಂದ್ರಿತ ಕಾರ್ಯಪದ್ದತಿ, ನಿರಂತರ ಕಲಿಕೆ ಸಂಸ್ಕೃತಿ ಮತ್ತು ದೃಢವಾದ ಸಂಘಟನಾ ಮೌಲ್ಯಗಳು ಮುಂದಿನ ದಶಕದಲ್ಲಿ ವ್ಯವಹಾರಗಳಿಗೆ ಮಹತ್ವದ ವಿಭೇದಕರ ಅಂಶಗಳಾಗಲಿವೆ ಎಂದು ಅಭಿಪ್ರಾಯಪಟ್ಟರು.ಉದ್ಯಮಿಗಳು, ವ್ಯವಹಾರ ಮುಖ್ಯಸ್ಥರು, ಸಿಇಒಗಳು, ಸಿಒಒ, ಸಿಎಫ್‌ಒ, ಯುನಿಟ್ ಹೆಡ್ಸ್, ಆಪರೇಷನ್ಸ್ ಹೆಡ್ಸ್, ಸಿಎಚ್.ಆರ್‌ಒ, ಎಚ್‌ಆರ್‌ವ್ಯವಸ್ಥಾಪಕರು, ಶೈಕ್ಷಣಿಕ ಸಿಬ್ಬಂದಿ ಹಾಗೂ ಬೋಧಕ ವರ್ಗ ಮುಂತಾದವರು ಪಾಲ್ಗೊಂಡಿದ್ದರು.