ಕನ್ನಡಪ್ರಭ ವಾರ್ತೆ ಇಳಕಲ್ಲ
ಹುನಗುಂದ ಐಪಿಎಲ್-೮ ಕ್ರಿಕೆಟ್ ಪಂದ್ಯಾವಳಿ ಡಿ.6ರಂದು ಸಂಜೆ ೬ ಗಂಟೆಗೆ ಉದ್ಘಾಟನೆ ನಡೆಯಲಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು. ಆರ್.ವೀರಮಣಿ ಕ್ರೀಡಾಂಗಣ ಮೈದಾನದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಚಲನಚಿತ್ರ ನಟಿ ರಚಿತಾ ರಾಮ್ ಪಂದ್ಯಾವಳಿ ಉದ್ಘಾಟಿಸುವರು. ಗುರುಮಹಾಂತ ಶ್ರೀಗಳು, ಇಳಕಲ್ ಮುರ್ತುಜಾ ಖಾದರಿ ದರ್ಗಾದ ಉಸ್ತುವಾರಿ ಸಾನ್ನಿಧ್ಯ, ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಸರಾಂತ ಚಿತ್ರನಟ ಡಾಲಿ ಧನಂಜಯ, ರಾಗೀಣಿ ತ್ರಿವೇದಿ ಹಾಗೂ ಸಪ್ತಮಿಗೌಡ ಟ್ರೊಫಿಗಳ ಅನಾವರಣಗೊಳಿಸುವರು. ಮುಖ್ಯ ಅತಿಥಗಳಾಗಿ ಉಸ್ಮಾನಗಣಿ ಹುಮನಾಬಾದ್, ಶಾಂತಣ್ಣ ಸುರಪುರ, ರಾಜು ಬೋರಾ, ಶರಣಪ್ಪ ಆಮದಿಹಾಳ, ದೇವಾನಂದ ಕಾಶಪ್ಪನವರ, ವೆಂಟೇಶ ಸಾಕಾ, ಬಸವರಾಜ ಗದ್ದಿ, ಮಹಾಂತೇಶ ಅವಾರಿ, ಅರುಣ ಬಿಜ್ಜಲ, ಅಬ್ದುಲ್‌ರಜಾಕ್ ತಟಗಾರ, ಗಂಗಾಧರ ದೊಡ್ಡಮನಿ, ಶಿವರುದ್ರಪ್ಪ ಗೊಂಗಡಶೆಟ್ಟಿ ಇತರರು ಆಗಮಿಸಲಿದ್ದಾರೆ.ಐಪಿಎಲ್ ಸೀಜನ್ ೮ರ ಪಂದ್ಯಾವಳಿಯಲ್ಲಿ ಬಂಜಾರ ಬೋಲ್ಡೋಜರ್, ನೀಲಗಿರಿ ಡೇವಲಪರ್, ದೇಶಪಾಂಡೆ ಟೈಗರ್ಸ್, ಎನ್.ಎಸ್.ವಿ, ಪವಾರ ಪೇಸರ್ಸ್, ಸುಲ್ತಾನ ಟೈಗರ್, ಕೋಡಿಹಾಳ ಡಿಪೇರ್ಸ್, ಜೈಭಿಮಾ ವಾರಿಯರ್, ಸಾಯಿರಾಮ, ಕೆ.ಎಮ್.ಯು ಟೈಗರ್ಸ್ ಡಿಡಿ ಲಯನ್ಸ್, ಕೆ.ಸಿ. ಬುಲ್ಸ್. ಜಾಲಿಹಾಳ ಟೈಗರ್ಸ್, ನಿಲಿಕಾ ಬಂಜಾರ ವಾರಿಯರ್ ಸೇರಿ ಒಟ್ಟು ೧೪ ತಂಡಗಳು ಭಾಗವಹಿಸಲಿವೆ. ಸುದ್ದಿಗೋಷ್ಠಿಯಲ್ಲಿ ಶೇಖಣ್ಣ ಮುಚಖಂಡಿ, ಶರಣಪ್ಪ ಆಮದಿಹಾಳ, ಅಬ್ದುಲ್‌ರಜಾರ್ ತಟಗಾರ, ಮಹಾಂತೇಶ ನರಗುಂದ, ಜಬ್ಬಾರ ಕಲಬುರ್ಗಿ, ರಾಘವೆಂದ್ರ ಚಿಂಚಮಿಮ ವಿಶ್ವನಾಥ ಪಾಟೀಲ, ಸುರೇಶ ಜಂಗ್ಲಿ ಅರುಣ ಬಿಜ್ಜಲ ಹಾಗೂ ಇತರರು ಉಪಸ್ಥಿತರಿದ್ದರು.
Subscribe to get breaking news alertsSubscribe Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.