ಧಾರವಾಡ: ಅಮೆರಿಕ ಹಾಗೂ ಇಸ್ರೇಲ್ ಸಾಮ್ರಾಜ್ಯ ಶಾಹಿಗಳಿಂದ ಇರಾನ್ ಹಾಗೂ ಪ್ಯಾಲೆಸ್ಟೈನ್ ಮೇಲಿನ ಮಿಲಿಟರಿ ದಾಳಿ ಖಂಡಿಸಿ ಎಸ್.ಯು.ಸಿ.ಐ(ಸಿ), ಸಿಪಿಐ(ಎಂ) ಹಾಗೂ ಸಿಪಿಐ ಪಕ್ಷಗಳಿಂದ ಮಂಗಳವಾರ ಇಲ್ಲಿಯ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ಈಗ ಇರಾನ್ ತಮ್ಮ ಆದೇಶಗಳಿಗೆ ಬಗ್ಗುವಂತೆ ಮಾಡಲು, ತಮ್ಮ ಪ್ರಾಬಲ್ಯವನ್ನು ವಿಸ್ತರಿಸಲು ಮತ್ತು ಮಧ್ಯಪ್ರಾಚ್ಯದಲ್ಲಿ ತಮ್ಮ ಹಿಡಿತ ಕಾಪಾಡಿಕೊಳ್ಳುವ ಯೋಜನೆಗೆ ಯಾವುದೇ ಸವಾಲು ಎದುರಾಗದಂತೆ ಖಾತ್ರಿಪಡಿಸಿಕೊಳ್ಳಲು, ಇರಾನ್ ಮೇಲೆ ಅಪ್ರಚೋದಿತವಾದ ಮಾರಕ ಮಿಲಿಟರಿ ದಾಳಿಯನ್ನು ಅಮೆರಿಕ ಆರಂಭಿಸಿದೆ. ಆದರೆ, ಇರಾನ್ ಜನರ ದಿಟ್ಟ ಪ್ರತಿರೋಧವು ಈ ಘೋರ ಷಡ್ಯಂತ್ರವನ್ನು ವಿಫಲಗೊಳಿಸುತ್ತಿದೆ ಎಂದು ಸಂಘಟನೆಗಳ ಮುಖ್ಯಸ್ಥರಾದ ಲಕ್ಷ್ಮಣ ಜಡಗಣ್ಣವರ, ಬಿ.ಎನ್. ಪೂಜಾರ ಮಾತನಾಡಿದರು.
ಮಹೇಶ್ ಪತ್ತಾರ, ಬಿ.ಐ. ಈಳಗೇರ್, ಎ.ಎಂ. ಖಆನ, ಬಸಿರ್ ಮುಧೋಳ್, ಪೀರಸಾಬ್ ನದಾಫ್, ದೀಪಾ ಧಾರವಾಡ, ಶರಣು ಗೊನವರ, ಗಂಗಾಧರ ಬಡಿಗೇರ್ ಸೇರಿದಂತೆ ಹಲವರಿದ್ದರು.