ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ದಿನನಿತ್ಯ ಕಾಮಗಾರಿಯ ಮೇಲ್ವಿಚಾರಣೆ ನಡೆಸಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಸದರಿ ಚೆಕ್ ಡ್ಯಾಂ ಹಲವು ವರ್ಷಗಳ ಹಿಂದೆ ಶಿಥಿಲಗೊಂಡಿದ್ದರಿಂದ ಈ ಭಾಗದ ಅಚ್ಚುಕಟ್ಟು ರೈತರಿಗೆ ನೀರಾವರಿ ಬೆಳೆ ಬೆಳೆಯಲು ಅನಾನುಕೂಲವಾಗಿತ್ತು. ಈಗ ಪುನರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ತಾಲೂಕಿನ ನಾರ್ಗೋನಹಳ್ಳಿ, ಮತ್ತಿಘಟ್ಟ, ಯಡಹಳ್ಳಿ, ಕಾಳೇಗೌಡನಕೊಪ್ಪಲು ಗ್ರಾಮಗಳ ರೈತರು ವಾರ್ಷಿಕ ಎರಡು ಬೆಳೆ ಬೆಳೆಯಬಹುದಾಗಿದೆ. ಹಾಗಾಗಿ ರೈತರು ನೀರನ್ನು ಮಿತವಾಗಿ ಬಳಕೆ ಮಾಡಿ ಉತ್ತಮ ಬೆಳೆ ಬೆಳೆಯಬೇಕು ಎಂದರು.ಈ ವೇಳೆ ಕೆಯುಐಡಿಎಫ್‌ಸಿ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷೆ ರಾಣಿಪರಮೇಶ್, ಉಪಾಧ್ಯಕ್ಷ ಮಂಜುನಾಥ್, ಪಿಡಿಒ ಪ್ರವೀಣ್‌ಕುಮಾರ್, ಸಣ್ಣನೀರಾವರಿ ಇಲಾಖೆ ಎಇಇ ನಿರ್ಮಲೇಶ್, ಗ್ರಾಪಂ ಸದಸ್ಯ ತಿಮ್ಮೇಗೌಡ, ತಾಲೂಕು ಜೆಡಿಎಸ್ ಮುಖಂಡ ನಾಟನಹಳ್ಳಿ ಬೋರ್‌ವೆಲ್ ಮಹೇಶ್, ನಾರ್ಗೋನಹಳ್ಳಿ ನಾಗರಾಜು, ಗೋಪಾಲಯ್ಯ, ಸುಧಾಕರ್, ಎನ್.ಎಸ್.ಸ್ವಾಮಿ, ನಿವೃತ್ತ ಶಿಕ್ಷಕ ನಿಂಗೇಗೌಡ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಟಿ.ಎನ್.ದಿವಾಕರ್, ವಕೀಲ ಜಗದೀಶ್, ರಘು, ಮುಖಂಡರಾದ ಕುಮಾರ್, ಬಾಣೇಗೌಡ, ಕಾಮನಹಳ್ಳಿ ಜವರೇಗೌಡ, ಹೆಮ್ಮಡಹಳ್ಳಿ ರಾಮೇಗೌಡ, ದೊಡ್ಡೇಗೌಡ, ಚೌಡೇನಹಳ್ಳಿ ಮಂಜು, ಪಟೇಲ್ ವೆಂಕಟೇಶ್, ಗುತ್ತಿಗೆದಾರ ಕಿರಣ್, ರಾಜಘಟ್ಟ ಕುಮಾರ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಧ್ರುವಕುಮಾರ್ ಸೇರಿದಂತೆ ನೂರಾರು ಅಚ್ಚುಕಟ್ಟುದಾರ ರೈತರು ಭಾಗವಹಿಸಿದ್ದರು.