ಬೇಡಿಕೆ ಈಡೇರಿಕೆಗೆ ರೈತರ ಅನಿರ್ಧಿಷ್ಟ ಧರಣಿ

KannadaprabhaNewsNetwork |  
Published : Mar 19, 2025, 12:34 AM IST
ಉತ್ತರ ಪ್ರಾಂತದ ಜಿಲ್ಲಾ ಘಟಕ ಪದಾಧಿಕಾರಿಗಳು ನಗರದ ಜಿಲ್ಲಾ ಅಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹವು ೨ನೇ ದಿನಕ್ಕೆ ಮುಂದುವರಿದೆ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರೈತರ ನೀರಾವರಿ ಯೋಜನೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತದ ಜಿಲ್ಲಾ ಘಟಕ ಪದಾಧಿಕಾರಿಗಳು ನಗರದ ಜಿಲ್ಲಾ ಅಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಧರಣಿ ೨ನೇ ದಿನಕ್ಕೆ ಮುಂದುವರಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ರೈತರ ನೀರಾವರಿ ಯೋಜನೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತದ ಜಿಲ್ಲಾ ಘಟಕ ಪದಾಧಿಕಾರಿಗಳು ನಗರದ ಜಿಲ್ಲಾ ಅಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಧರಣಿ ೨ನೇ ದಿನಕ್ಕೆ ಮುಂದುವರಿದೆ.

ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ್ ಕೊಕರೆ ಮಾತನಾಡಿ, ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ೧ನೇ ಹಂತದಲ್ಲಿ ೨೮೦೦೦ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಒದಗಿಸುತ್ತಿದ್ದು, ಕಾರ್ಯ ಕುಂಠಿತವಾಗುತ್ತಿದೆ. ಇನ್ನುಳಿದ ಚಡಚಣ, ಬಬಲೇಶ್ವರ ಹಾಗೂ ವಿಜಯಪುರ ತಾಲೂಕಿನ ೨೧೦೦೦ ಹೆಕ್ಟೇರ್‌ ಗೆ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿಗೆ ಟೆಂಡರ್ ಕರೆಯಬೇಕು. ನೀರಾವರಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಹೊರ್ತಿ ಭಾಗದ ೧೯ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣ ಪ್ರಗತಿಯಾಗಿದ್ದರೂ ಕೆರೆಗಳಿಗೆ ನೀರು ಹರಿಸುತ್ತಿಲ್ಲ. ಕೂಡಲೇ ನೀರು ಹರಿಸಬೇಕು. ಚಡಚಣ ಏತ ನೀರಾವರಿ ಯೋಜನೆ ಶೀಘ್ರ ಪ್ರಾರಂಭಿಸಬೇಕು. ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ಹಳಿ ಕೆರೆಗೆ ನೀರು ಶೀಘ್ರದಲ್ಲಿ ಹರಿಸಬೇಕು ಡೋಣಿ ನದಿಯ ಹೂಳೆತ್ತಿ ಜಲಾನಯನ ಕಾರ್ಯಕ್ರಮಗಳನ್ನು ಕೈಗೊಂಡು ಇದ್ದ ೫ ಚೆಕ್ ಡ್ಯಾಂ ನಾಲಾ ಬಂಡಿಂಗ್ ಹಾಕಿ ನದಿ ಪಾತ್ರದ ಎರಡೂ ಬದಿ ಒಡ್ಡು ಹಾಕಿ ಗಿಡಗಳನ್ನು ನೆಡಬೇಕು. ಡೋಣಿ ನದಿಗೆ ಕೃಷ್ಣೆಯ ನೀರನ್ನು ಹೂಳೆತ್ತುವುದು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಗಮನಕ್ಕೂ ಕೂಡ ತರಲಾಗಿದ್ದು. ಇದೂವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರವಿಂದ್ರ ಮೇಡೆಗಾರ, ಉತ್ತರ ಪ್ರಾಂತ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ, ಯೋಗಾನಂದ ಸ್ವಾಮೀಜಿ ಅಷ್ಠಮಠ, ರಾಜ್ಯ ಕಾರ್ಯಕಾರಿಣಿ ಗುರುನಾಥ ಬಗಲಿ, ಬಸವರಾಜ ರೂಡಗಿ, ಹನಮಂತಗೌಡ ಪಾಟೀಲ, ಸಾವಿತ್ರಿ ಬರಡೋಲ, ಶ್ರೀಶೈಲ ಆಳೂರ, ಲಕ್ಷ್ಮಣ ಬೂದಿಹಾಳ, ದಿನೇಶ ದೇವರಮನಿ, ಅಶೋಕ ಅಲ್ಲಾಪುರ, ಚಂದ್ರಗೌಡ ಬಿರಾದಾರ,ಮಲ್ಲಿಕಾರ್ಜುನ ತೇಲಿ, ಚಂದ್ರಶೇಖರ ಖಾನಾಪೂರ, ರಾಮಚಂದ್ರ ಜಾಧವ, ದಿನೇಶ ಸಾತಲಗಾಂವ, ಪ್ರಕಾಶ ಬಿರಾದಾರ, ಸೋಮನಿಂಗ ಬಿರಾದಾರ, ಮಲ್ಲನಗೌಡ ಪಾಟೀಲ ಜಿಗಜಿಣಗಿ, ಸುನೀಲ ಸಾತಲಗಾಂವ, ಬಾಬುಲಾಲ ಹೊನವಾಡ, ರುದ್ರಪ್ಪ ಪೂಜಾರಿ, ವಿಠಲ ಕೈರಾವಕರ, ಮಹಾಂತೇಶ ಬಿರಾದಾರ, ಹಣಮಂತ ಕಂಬಾರ, ಗುರಪ್ಪ ಚಳಗಿ, ಶಿವರಾಯ ಕಂಬಾರ ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...