ಕನ್ನಡಪ್ರಭ ವಾರ್ತೆ ಬೆಂಗಳೂರು
ಏಕೆಂದರೆ, ಡಿಸಿಎಂ ಹುದ್ದೆಯ ಪ್ರಸ್ತಾಪವನ್ನು ಖುದ್ದು ಹೈಕಮಾಂಡ್ ಇಟ್ಟಿದ್ದರೂ ಇದಕ್ಕೆ ಸಿದ್ದರಾಮಯ್ಯ ಅವರು ಯತೀಂದ್ರಗೆ ಡಿಸಿಎಂ ಪಟ್ಟ ಬೇಡ ಎಂದಿದ್ದಾರೆ ಎನ್ನಲಾಗಿದೆ. ಆದರೆ, ಕುರುಬ ಸಮುದಾಯದ ಅತ್ಯುನ್ನತ ನಾಯಕ ಸಿದ್ದರಾಮಯ್ಯ ಅವರು ಸಿಎಂ ಪಟ್ಟದಿಂದ ಕೆಳಗಿಳಿದ ನಂತರ ಅವರ ಪುತ್ರನಿಗೆ ಡಿಸಿಎಂ ಹುದ್ದೆ ನೀಡಬೇಕು. ತನ್ಮೂಲಕ ಕುರುಬ ಸಮುದಾಯದಲ್ಲಿ ಮೂಡಬಹುದಾದ ಬೇಸರವನ್ನು ನೀಗಿಸಬೇಕು ಎಂಬ ಇರಾದೆ ಹೈಕಮಾಂಡ್‌ನದ್ದು ಎನ್ನಲಾಗಿದೆ.
ಆದರೆ, ಸಿದ್ದರಾಮಯ್ಯ ಅವರು ಡಿಸಿಎಂ ಹುದ್ದೆ ಬೇಡ. ಬದಲಾಗಿ, ಯತೀಂದ್ರ ಪ್ರಮುಖ ಖಾತೆಯೊಂದಿಗೆ ಹೊಸ ಸಂಪುಟ ಸೇರ್ಪಡೆಯಾಗಿ ಮೈಸೂರು ಜಿಲ್ಲಾ ಉಸ್ತುವಾರಿ ನಿರ್ವಹಿಸಲಿ ಸಾಕು ಎಂಬ ಮನಸ್ಥಿತಿ ಹೊಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದೆಹಲಿಯಲ್ಲಿರುವ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲಿದ್ದು, ಆನಂತರವೇ ಯತೀಂದ್ರ ಡಿಸಿಎಂ ಆಗುವರೇ ಅಥವಾ ಸಂಪುಟದಲ್ಲಿ ಪ್ರಮುಖ ಖಾತೆಯೊಂದಿಗೆ ಸಚಿವರಾಗುವುದೇ ಎಂಬುದು ನಿರ್ಧಾರವಾಗಲಿದೆ ಎನ್ನುತ್ತವೆ ಮೂಲಗಳು.ಎಷ್ಟು ಡಿಸಿಎಂ ಹುದ್ದೆ?