ಚಿನಕುರಳಿ ಡೇರಿ 22 ಲಕ್ಷ ರು. ನಿವ್ವಳ ಲಾಭ ಪಡೆದಿರುವುದು ಖುಷಿಯ ವಿಚಾರ: ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Sep 21, 2026, 01:45 AM IST
20ಕೆಎಂಎನ್ ಡಿ30 | Kannada Prabha

ಸಾರಾಂಶ

ಡೇರಿಗಳು ರೈತರ ಬೆನ್ನೆಲುಬಾಗಿ ಕೆಲಸ ಮಾಡುತ್ತಿವೆ. ಹೈನುಗಾರಿಕೆಯಿಂದ ಲಕ್ಷಾಂತರ ಕುಟುಂಬಗಳ ಬದುಕು ಆರ್ಥಿಕವಾಗಿ ಸುಧಾರಣೆಗೊಂಡು ಯುವಕರಿಗೆ ಉದ್ಯೋಗ ದೊರಕಿಸಿಕೊಟ್ಟಿವೆ. ಹಾಗಾಗಿ ಡೇರಿಗಳನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಕಡೆಗೆ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿ ಹಾಲು ಉತ್ಪಾದಕರ ಸಹಕಾರ ಸಂಘವು ಮಾದರಿಯಾಗಿ ಕೆಲಸ ಮಾಡುವ ಮೂಲಕ ಈ ವರ್ಷದ 22 ಲಕ್ಷ ರು. ನಿವ್ವಳ ಲಾಭ ಪಡೆದಿರುವುದು ಖುಷಿಯ ವಿಚಾರ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಗ್ರಾಮದಲ್ಲಿ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಡೇರಿಗಳು ರೈತರ ಬೆನ್ನೆಲುಬಾಗಿ ಕೆಲಸ ಮಾಡುತ್ತಿವೆ. ಹೈನುಗಾರಿಕೆಯಿಂದ ಲಕ್ಷಾಂತರ ಕುಟುಂಬಗಳ ಬದುಕು ಆರ್ಥಿಕವಾಗಿ ಸುಧಾರಣೆಗೊಂಡು ಯುವಕರಿಗೆ ಉದ್ಯೋಗ ದೊರಕಿಸಿಕೊಟ್ಟಿವೆ. ಹಾಗಾಗಿ ಡೇರಿಗಳನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಕಡೆಗೆ ಮುಂದಾಗಬೇಕು ಎಂದರು.

ಸಂಘವು 22 ಲಕ್ಷ ರು. ನಿವ್ವಳ ಲಾಭ ಪಡೆಯಲು ಅಧ್ಯಕ್ಷರು, ಆಡಳಿತ ಮಂಡಳಿ, ಅಧಿಕಾರಿ ಸಿಬ್ಬಂದಿ ಮಾದರಿ ಕೆಲಸವೇ ಸಾಕ್ಷಿ. ಮನ್ಮುಲ್ ಅಧ್ಯಕ್ಷರು ಹಾಗೂ ನಿರ್ದೇಶಕ ಸಿ.ಶಿವಕುಮಾರ್ ಅವರು ಸಂಘದ ಕಟ್ಟಡವನ್ನು ಮಾದರಿಯಾಗಿ ನಿರ್ಮಾಣ ಮಾಡಲು ಮುಂದಾಗಿರುವುದು ಖುಷಿಯ ವಿಚಾರ ಎಂದರು.

ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಷೇರುದಾರರ ಸಹಕಾರದಿಂದ ಡೇರಿ ನಿರ್ದೇಶಕರಾಗಿ ಆಯ್ಕೆಯಾಗಿ, ಅಧ್ಯಕ್ಷರಾಗಿ ಪ್ರಸ್ತುತ ಮನ್ಮುಲ್ ಒಕ್ಕೂಟದಲ್ಲಿ ನಿಮ್ಮೆಲ್ಲರ ಪ್ರತಿನಿಧಿಯಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 60 ಸಾವಿರ ಇದ್ದಂತಹ ವಿಮೆ ಹಣವನ್ನು 1 ಲಕ್ಷದವರೆಗೂ ಏರಿಕೆ ಮಾಡಿದ್ದೇವೆ, ಜತೆಗೆ ಹಲವಾರು ಯೋಜನೆ ಸವಲತ್ತುಗಳನ್ನು ನೀಡಲಾಗುತ್ತಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಇದೇ ವೇಳೆ ಅಧಿಕ ಹಾಲು ಉತ್ಪಾದನೆ ಮಾಡಿದ ರೈತರು ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಸಹ ವಿಶೇಷವಾಗಿ ಅಭಿನಂದಿಸಲಾಯಿತು.

ಈ ವೇಳೆ ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಜಿಲ್ಲಾ ಯೂನಿಯನ್ ನಿರ್ದೇಶಕ ರಾಮಕೃಷ್ಣೇಗೌಡ, ಡೇರಿ ಉಪಾಧ್ಯಕ್ಷ ಸಿ.ಆರ್.ರಮೇಶ್, ನಿರ್ದೇಶಕರಾದ ಆರ್.ವರದರಾಜು, ಸಿ.ಎಂ.ರಮೇಶ್, ಸಿ.ಎಸ್.ಲೋಕೇಶ್, ಸಿ.ಎ.ಮಂಜುನಾಥ್, ಸಿ.ಎಸ್.ಕೆಂಪೇಗೌಡ, ಸಿ.ಟಿ.ನಾರಾಯಣಚಾರಿ, ಯೋಗೇಂದ್ರ, ವರಲಕ್ಷ್ಮೀ,ಯಶೋಧಮ್ಮ, ಹೇಮಾ, ಕಾರ್ಯದರ್ಶಿ ಸಿ.ಕೆ.ಲೋಕೇಶ್, ಪರೀಕ್ಷಕ ಸಿ.ಆರ್.ಯೋಗೇಶ್, ಸಿಬ್ಬಂದಿ ಸಿ.ಪಿ.ಜಗದೀಶ್, ಆದರ್ಶ, ಸಂಜು ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಸರ್ಕಾರ ರೈತರಿಗೆ ಪರಿಹಾರ ಬಿಡುಗಡೆ ಮಾಡಲಿ’
10000 ಎಂಎಎಚ್‌ ಬ್ಯಾಟರಿಯ ರೆಡ್‌ಮಿ 17 ಬಿಡುಗಡೆ