ಜಾತಿ ಜನಾಂಗ ಪ್ರತ್ಯೇಕಿಸಲು ಹೊರಟಿರುವುದು ನೀಚಕೃತ್ಯ

KannadaprabhaNewsNetwork |  
Published : Sep 19, 2025, 01:01 AM IST
18ಎಂಡಿಜಿ1, ಮುಂಡರಗಿಯಲ್ಲಿ ಸಾಮರಸ್ಯ ವೇದಿಕೆ ಹಾಗೂ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಗಳ ಆಶ್ರಯದಲ್ಲಿ ತಹಸೀಲ್ದಾರ ಮೂಲಕ ಹಿಂದುಳಿದ ಆಯೋಗಗಳ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ನಮ್ಮ ಭಾರತದ ಸಂವಿಧಾನದ ಅಡಿಯಲ್ಲಿ ಭಾರತ ಸರ್ಕಾರ ರೂಪಿಸಿರುವ ಕಾನೂನಿನ ನಿಯಮದ ಅಡಿಯಲ್ಲಿ ಇಲ್ಲದೇ ಇರುವಂತಹ ಜಾತಿಗಳ ಪಟ್ಟಿ ಮಾಡಿ ಆ ಮುಖಾಂತರ ಹಿಂದುಗಳು ಅಲ್ಲದೇ ಇರುವಂತಹ ಅನೇಕ ಜಾತಿ ಜನಾಂಗಗಳನ್ನು ಪ್ರತ್ಯೇಕಿಸುವಂತಹ ಹುನ್ನಾರವನ್ನು ರಾಜ್ಯ ಸರ್ಕಾರ ಹಿಂದುಳಿದ ಆಯೋಗ ಮೂಲಕ ಮಾಡಲು ಹೊರಟಿರುವುದು ಅತ್ಯಂತ ನೀಚ‌ ಕೃತ್ಯವಾಗಿದ್ದು, ಅದನ್ನು ನಾವು ಖಂಡಿಸುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಡರಗಿ:ನಮ್ಮ ಭಾರತದ ಸಂವಿಧಾನದ ಅಡಿಯಲ್ಲಿ ಭಾರತ ಸರ್ಕಾರ ರೂಪಿಸಿರುವ ಕಾನೂನಿನ ನಿಯಮದ ಅಡಿಯಲ್ಲಿ ಇಲ್ಲದೇ ಇರುವಂತಹ ಜಾತಿಗಳ ಪಟ್ಟಿ ಮಾಡಿ ಆ ಮುಖಾಂತರ ಹಿಂದುಗಳು ಅಲ್ಲದೇ ಇರುವಂತಹ ಅನೇಕ ಜಾತಿ ಜನಾಂಗಗಳನ್ನು ಪ್ರತ್ಯೇಕಿಸುವಂತಹ ಹುನ್ನಾರವನ್ನು ರಾಜ್ಯ ಸರ್ಕಾರ ಹಿಂದುಳಿದ ಆಯೋಗ ಮೂಲಕ ಮಾಡಲು ಹೊರಟಿರುವುದು ಅತ್ಯಂತ ನೀಚ‌ ಕೃತ್ಯವಾಗಿದ್ದು, ಅದನ್ನು ನಾವು ಖಂಡಿಸುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಗುರುವಾರ ಮುಂಡರಗಿಯಲ್ಲಿ ಸಾಮರಸ್ಯ ವೇದಿಕೆ ಹಾಗೂ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ನೇತೃತ್ವದಲ್ಲಿ ತಹಸೀಲ್ದಾರ್ ಮುಖಾಂತರ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು. ಸಂವಿಧಾನದ ಪ್ರಕಾರ ನಮ್ಮ ದೇಶದಲ್ಲಿ ಏಳು ಧರ್ಮಗಳಿಗೆ ಮಾನ್ಯತೆ ನೀಡಲಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ ಹಿಂದು ಸಮಾಜದ ಬಹುತೇಕ ಜಾತಿಗಳ ವರ್ಗದಲ್ಲಿ ಕ್ರೈಸ್ತ + ಜಾತಿ ಎಂಬುದು ಉಲ್ಲೇಖವಾಗಿರುವುದು ನಿಜಕ್ಕೂ ಆಘಾತಕಾರಿ ಅಂಶವಾಗಿದೆ.ಉದಾಹರಣೆಗೆ ಕುರುಬ ಕ್ರಿಶ್ಚಿಯನ್, ಬಿಲ್ಲವ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಇತ್ಯಾದಿ ಮಾಡಿ ಮೂಲ ಕ್ರೈಸ್ತ ಪಂಗಡಗಳಾದ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್ ಇತ್ಯಾದಿಗಳ ವಿಂಗಡಣೆ ಮಾಡದೇ ಅವುಗಳನ್ನು ಏಕಸ್ವರೂಪದಲ್ಲಿ ನೋಡಲಾಗಿದೆ.

ಆಯೋಗದ ಈ ಪಟ್ಟಿ ಜನರಲ್ಲಿ, ಅದರಲ್ಲೂ ವಿಶೇಷವಾಗಿ ಹಿಂದುಳಿದ ವರ್ಗಗಳಲ್ಲಿ ಸಂಶಯಕ್ಕೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ಇದನ್ನು ಹಿಂದು ಸಮಾಜದ ಜಾತಿಗಳೊಂದಿಗೆ ಅಂಟಿಸಲಾದ ಕ್ರೈಸ್ತ ಹಣೆಪಟ್ಟಿಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಹಿರಿಯರಾದ ಎಸ್.ಆರ್. ರಿತ್ತಿ ಮಾತನಾಡಿ, ಸರ್ಕಾರ ಎಲ್ಲ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂಬುದನ್ನು ಬಳಕೆ ಮಾಡಿರುವುದು ಮತಾಂತರಕ್ಕೆ ಪ್ರಚೋದನೆ ನೀಡುವಂತದ್ದಾಗಿದೆ ಎಂದು ಆರೋಪಿಸಿ, ಸರ್ಕಾರ ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುವಂತಹ ಕೆಲಸವನ್ನು ಮಾಡಬೇಕೇ ಹೊರತು ವಿಘಟನೆ ಮಾಡುವ ಕಾರ್ಯಕ್ಕೆ ಮುಂದಾಗಬಾರದು. ನಿಜವಾಗಿ ಆರ್ಥಿಕವಾಗಿ ಹಿಂದುಳಿದವರ ಗಣತಿ ಮಾತ್ರ ಆಗಬೇಕು ಎಂದರು.

ದೇವು ಹಡಪದ ಮನವಿ ಓದಿದರು. ಗ್ರೇಡ್ 2 ತಹಸೀಲ್ದಾರ್ ಕೆ. ರಾಧಾ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀನಿವಾಸ ಕಟ್ಟಿಮನಿ ಯಲ್ಲಪ್ಪ ಗಣಾಚಾರಿ, ಮಂಜುನಾಥ ಮುಧೋಳ, ಕುಮಾರಸ್ವಾಮಿ ಹಿರೇಮಠ, ನಾಗರಾಜ ಹೊಸಮನಿ, ರಮೇಶ ಹುಳಕಣ್ಣವರ, ಮುತ್ತು ಹಳ್ಳಿಕೇರಿ, ಜಿ.ಜ. ಕೊಳ್ಳಿಮಠ, ದೇವಪ್ಪ ಇಟಗಿ, ಅಶೋಕ ಹೀಗೆನಹಳ್ಳಿ, ಗುರುರಾಜ ಜೋಶಿ, ಮಹೇಶ ಜಂತ್ಲಿ, ಮಾರುತಿ ಭಜಂತ್ರಿ, ಪ್ರಶಾಂತ ಗೌಡ ಗುಡದಪ್ಪನವರ, ಅಶೋಕ ಚೂರಿ, ರವೀಂದ್ರಗೌಡ ಪಾಟೀಲ, ಸುಭಾಸ ಗುಡಿಮನಿ, ಭೀಮರಡ್ಡಿ ರಾಜೂರ, ಶ್ರೀನಿವಾಸ ಅಬ್ಬೀಗೇರಿ, ಸುರೇಶ ಬಂಡಿವಡ್ಡರ, ಗುಡದೀರಪ್ಪ ಲಿಂಬಿಕಾಯಿ, ವಿ.ಜೆ.ಹಿರೇಮಠ, ಪ್ರಶಾಂತ ಹಿರೇಮಠ, ಆರ್.ವೈ.ಪಾಟೀಲ, ಮಹೇಶ ದೇಸಾಯಿ, ಶಿವಕುಮಾರ ಕುರಿ, ಪವನ್ ಲೇಂಡ್ವೆ ಸೇರಿ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ