ಒತ್ತಡದಲ್ಲಿರುವ ಮನಸ್ಸುಗಳಿಗೆ ಒತ್ತಾಸೆಯಾಗಿ ನಿಲ್ಲುವುದು ಅವಶ್ಯ-ಡಾ. ಸಂಕನಗೌಡ್ರ

KannadaprabhaNewsNetwork | Published : Apr 9, 2025 12:30 AM

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ತಮ್ಮ ತಮ್ಮ ವೃತ್ತಿ ಜೀವನಗಳಲ್ಲಿ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಒತ್ತಡದಲ್ಲಿರುವ ಮನಸ್ಸುಗಳಿಗೆ ಒತ್ತಾಸೆಯಾಗಿ ನಿಂತರೆ ಉತ್ತಮ ಸಮಾಜ ಕಟ್ಟುವುದು ಸುಲಭವಾಗುತ್ತದೆ ಎಂದು ಖ್ಯಾತ ವೈದ್ಯ, ಸಾಹಿತಿ ಡಾ.ವಿ.ಕೆ. ಸಂಕನಗೌಡ್ರ ಹೇಳಿದರು.

ಮುಂಡರಗಿ:ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ತಮ್ಮ ತಮ್ಮ ವೃತ್ತಿ ಜೀವನಗಳಲ್ಲಿ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಒತ್ತಡದಲ್ಲಿರುವ ಮನಸ್ಸುಗಳಿಗೆ ಒತ್ತಾಸೆಯಾಗಿ ನಿಂತರೆ ಉತ್ತಮ ಸಮಾಜ ಕಟ್ಟುವುದು ಸುಲಭವಾಗುತ್ತದೆ ಎಂದು ಖ್ಯಾತ ವೈದ್ಯ, ಸಾಹಿತಿ ಡಾ.ವಿ.ಕೆ. ಸಂಕನಗೌಡ್ರ ಹೇಳಿದರು.

ಅವರು ಭಾನುವಾರ ಸಂಜೆ ಪಟ್ಟಣದ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ನಿವಾಸದಲ್ಲಿ ಶಹರ ಪಂಚಮಸಾಲಿ ಮಹಿಳಾ ಘಟಕ ಆಶ್ರಯಲ್ಲಿ ಮನೆ ಮನದಲ್ಲಿ ಚನ್ನಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಚಮಸಾಲಿ ಸಮಾಜ ಮನೆ ಮನದಲ್ಲಿ ಚೆನ್ನಮ್ಮ ಕಾರ್ಯಕ್ರಮ ಮಾಡುವ ಮೂಲಕ ಪರಸ್ಪರ ಬಾಂಧವ್ಯ ಬೆಸೆಯುವ ಕಾರ್ಯಕ್ಕೆ ಮುಂದಾಗಿರುವುದು ಒಳ್ಳೆಯ ಕಾರ್ಯವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಗದಗ ಜಿಲ್ಲಾ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಹೆಣ್ಣು ಸಂಸಾರದ ಕಣ್ಣು ವಿಷಯವಾಗಿ ಮಾತನಾಡಿ, ಹಲವು ಹಂತದ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಮತ್ತು ಎರಡನೇ ದರ್ಜೆ ಸ್ಥಾನ ಕೊಟ್ಟು ಬಹಳಷ್ಟು ನಿರ್ಲಕ್ಷಿಸಿದರೂ ಜ್ಞಾನ, ತಾರ್ಕಿಕ ಆಲೋಚನೆ, ಊಹೆ ಮತ್ತು ಸಹನಾ ದೃಷ್ಟಿಯಿಂದ ಹೆಣ್ಣು ಶಕ್ತಿವಂತಳಾಗಿ ನಿಲ್ಲಬಲ್ಲಳು. ಮನೆ ಒಳಗೆ ಮಕ್ಕಳು, ಪತಿ, ಅತ್ತೆ ಮಾವ, ತಂದೆ ತಾಯಿ, ಬಳಗವನ್ನು ಹೊಂದಾಣಿಕೆ ಮಾಡಿಕೊಂಡು ಕೇವಲ ಸಂಸಾರದ ಕಣ್ಣಲ್ಲ, ಸಮುದಾಯದ ಕಣ್ಣಾಗಿ ನಿಲ್ಲಬಲ್ಲಳು ಎಂದರು.

ಎಲ್ಲ ಕ್ಷೇತ್ರಗಳಲ್ಲಿ ಹಲವು ದಶಕಗಳ ಹಿಂದೆ ಮಹಿಳೆಯರಿಗ ನಿರಾಕರಿಸಲಾಗುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಮಹಿಳೆ ಅಬಲೆ ಅಲ್ಲ ಶಕ್ತಿವಂತೆ, ಏನೆಲ್ಲ ಸಾಧಿಸಬಲ್ಲಳು. ಒಟ್ಟಾರೆ ಮಹಿಳೆಯರನ್ನು ತಾರತಮ್ಯ ಮಾಡದೆ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದರೆ ಸಮಾಜದಲ್ಲಿ ಅನೇಕ ಕೆಲಸಗಳಾಗುತ್ತವೆ. ಮನೆ ಮನದಲ್ಲಿ ಚೆನ್ನಮ್ಮ ಕಾರ್ಯಕ್ರಮ ನೆಪ ಮಾತ್ರ ಈ ಮೂಲಕ ಅನೇಕ ಸಾಧಕ ಮಹಿಳೆಯರನ್ನು ಗುರ್ತಿಸಿ ಗೌರವಿಸುವ ಮತ್ತು ಅನೇಕ ಚಿಂತನ ಮಂಥನ ನಡೆಯುವಂತಾಗಬೇಕು ಎಂದರು. ಕಾರ್ಯಕ್ರಮ ಪ್ರಾಯೋಜತ್ವ ವಹಿಸಿಕೊಂಡಿದ್ದ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಸಮಾಜದ ಸೇವೆಗೆ ತಾವು ಸದಾ ಸಿದ್ದವಿದ್ದು ಸಮುದಾಯ ಭವನ ನಿರ್ಮಾಣಕ್ಕೆ ಒಟ್ಟಾಗಿ ಸಹಾಯ ಸಹಕಾರ ನೀಡೋಣ ತಾವು ಕೂಡಾ ತನುಮನಧನದಿಂದ ಬೆಂಬಲಕ್ಕೆ ನಿಲ್ಲುವದಾಗಿ ತಿಳಿಸಿದರು. ತಾಲೂಕು ಪಂಚಮಸಾಲಿ ಸಮಾಜ ಅಧ್ಯಕ್ಷ ಎಸ್.ವಿ. ಪಾಟೀಲ ನಿರ್ಮಾಣವಾಗುತ್ತಿರುವ ಸಮಾಜದ ಸಮುದಾಯಕ್ಕೆ ಎಲ್ಲರೂ ಸಹಕಾರ ನೀಡುತ್ತಿದ್ದು, ಇದು ಸಮಾಜದ ಕಾರ್ಯಗಳಿಗೆ ಉಪಯೋಗವಾಗುತ್ತಿದೆ. ಹೀಗಾಗಿ ಕಟ್ಟಡ ಬೇಗನೆ ಪೂರ್ಣಗೊಳ್ಳಲು ಸಮಾಜದವರು ದೇಣಿಗೆ ನೀಡಲು ಹೆಚ್ಚಿನ ಪ್ರಮಾಣದಲ್ಲಿ ಮುಂದೆ ಬರಬೇಕು ಎಂದರು. ಶಹರ ಪಂಚಮಸಾಲಿ ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಹೊಟ್ಟಿನ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪಡೆದ ರಮೇಶ ತುರುಕಾಣಿ ಹಾಗೂ ನಾಗಪ್ಪ ಮಜ್ಜಿಗಿ ಅವರನ್ನು ಸನ್ಮಾನಿಸಲಾಯಿತು. ಪಂಚಮಸಾಲಿ ನೌಕರರ ಸಂಘ ಅಧ್ಯಕ್ಷ ಎನ್.ಎಂ. ಕುಕನೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ರಮೇಶಗೌಡ ಪಾಟೀಲ, ಪ್ರಮೋದ ಇನಾಮತಿ, ಡಾ. ಅನ್ನದಾನಿ ಮೇಟಿ, ಪ್ರಮೋದ ಇನಾಮತಿ, ಆರ್.ಎಲ್. ಪೋಲಿಸಪಾಟೀಲ, ಎ.ವೈ. ನವಲಗುಂದ, ಎಂ.ಎಸ್. ಹೊಟ್ಟಿನ, ಎ.ವಿ. ಹಳ್ಳಿಕೇರಿ, ಡಾ.ನಿಂಗು ಸೊಲಗಿ, ರಜನೀಕಾಂತ ದೇಸಾಯಿ, ಅಶೋಕ ಹಂದ್ರಾಳ, ಮಂಜುನಾಥ ಇಟಗಿ, ಪ್ರಶಾಂತ ಗುಡದಪ್ಪನವರ, ರವೀಂದ್ರಗೌಡ ಪಾಟೀಲ, ಮಲ್ಲಣ್ಣ ದೇಸಾಯಿ, ಗಂಗಾಧರ ಬಳಿಗೇರ, ಶಿವಾನಂದ ಕಮತರ, ಸೋಮಣ್ಣ ಹಂಚಿನಾಳ, ‍ವಿರೇಶ ಹಡಗಲಿ, ಸೋಮು ಹಕ್ಕಂಡಿ, ಮಂಜು ಮುಧೋಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಸಿ.ಎಸ್.ಅರಸನಾಳ ಪ್ರಾಸ್ತಾವಿಕ ಮಾತನಾಡಿದರು. ಮಧು ಹುಬ್ಬಳ್ಳಿ ಸ್ವಾಗತಿಸಿದರು. ನೇತ್ರಾ ಬಾವಿಹಳ್ಳಿ ನಿರೂಪಿಸಿದರು. ಶ್ರೀದೇವಿ ಬಳಿಗಾರ ವಂದಿಸಿದರು.

Share this article