ರಾಷ್ಟ್ರಗೀತೆ ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ

KannadaprabhaNewsNetwork |  
Published : Jul 25, 2026, 02:00 AM IST
೨೩ಕೆಎಲ್‌ಆರ್-೨ಕೋಲಾರ ತಾಲ್ಲೂಕು ನರಸಾಪುರ ಕೆಪಿಎಸ್ ಶಾಲೆಯಲ್ಲಿ ಭಾರತ ಸೇವಾದಳದಿಂದ ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ ಆಚರಿಸಿ, ಧ್ವಜ ಕಟ್ಟುವುದನ್ನು ಮಕ್ಕಳಿಗೆ ಕಲಿಸಿಕೊಡಲಾಯಿತು. | Kannada Prabha

ಸಾರಾಂಶ

ಲಕ್ಷಾಂತರ ಮಂದಿಯ ತ್ಯಾಗ ಮತ್ತು ಬಲಿದಾನಗಳಿಂದ ಪಡೆದುಕೊಂಡ ಸ್ವಾತಂತ್ರ್ಯ ಉಳಿಸಿ ಸಂರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ದೇಶವಾಸಿಗಳದಾಗಿದೆ.

ಕೋಲಾರ:

ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಹಾಗೂ ಧ್ವಜದ ನಿರ್ವಹಣೆ ಕುರಿತು ಅರಿವು ಇರಬೇಕು ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.

ತಾಲೂಕಿನ ನರಸಾಪುರ ಕೆಪಿಎಸ್ ಶಾಲೆ ಆವರಣದಲ್ಲಿ ಭಾರತ ಸೇವಾದಳದಿಂದ ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಲಕ್ಷಾಂತರ ಮಂದಿಯ ತ್ಯಾಗ ಮತ್ತು ಬಲಿದಾನಗಳಿಂದ ಪಡೆದುಕೊಂಡ ಸ್ವಾತಂತ್ರ್ಯ ಉಳಿಸಿ ಸಂರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ದೇಶವಾಸಿಗಳದಾಗಿದ್ದು, ಅದರಲೂ ಯುವ ಪೀಳಿಗೆ ದೇಶಾಭಿಮಾನವನ್ನು ಬೆಳೆಸಿಕೊಂಡು ದೇಶದ ಸಂರಕ್ಷಕರಾಗಬೇಕೆಂದು ಸಲಹೆ ನೀಡಿದರು.

ಅಖಂಡ ಭಾರತವು ಜಾತಿ ಧರ್ಮ ಗಡಿ ಭಾಷೆ ಬೇಧಭಾವ ಮೀರಿ ರಾಷ್ಟ್ರಧ್ವಜಕ್ಕೆ ಗೌರವ ನೀಡುತ್ತೇವೆ, ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಅಖಂಡ ಭಾರತ ಗೌರವಿಸುವ ರಾಷ್ಟ್ರ ಧ್ವಜ ರೂಪಿಸಿ ಅಂಗೀಕರಿಸಿದ ದಿನವನ್ನು ಆಚರಿಸುತ್ತಿದ್ದೇವೆ ಎಂದರು.

ವೇದಿಕೆಯಲ್ಲಿ ಕೆಪಿಎಸ್ ಶಾಲೆ ಮುಖ್ಯ ಶಿಕ್ಷಕ ಜಗನ್ನಾಥ್, ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್, ಪತ್ರಕರ್ತ ಚಾಂದ್ ಪಾಷಾ, ಶಿಕ್ಷಕರಾದ ಅಮೃತ ಬಿ.ಪಿ.ಭಾರತಿ, ಹನುಮಾನ್ ಸಿಂಗ್, ಅರ್.ಹೇಮಾವತಿ, ವಿಜಯಮ್ಮ, ಶ್ರೀರಾಮಯ್ಯ, ಪರ್ವೀನ್‌ತಾಜ್, ಡಿ.ಭಾರತಿ, ನಾರಾಯಣಮ್ಮ, ಚಂದ್ರಕಲಾ, ಹಂಸವೇಣಿ, ಕುಸುಮ, ವೆಂಕಟರಮಣ, ಮುಜಾಹಿದ್‌ ಉಲ್ಲಾ ಷರೀಫ್, ಸೌಮ್ಯ, ಮನುಜ, ಲತಾ, ಕೋಮಲ, ಶೈಲಜ, ಕವಿತಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್‌ ವಂಚಿತ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಸಮಾಜಘಾತುಕ ಶಕ್ತಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು-ಮಾಜಿ ಸಚಿವ ಪಾಟೀಲ