ಮಧುಗಿರಿ ಮುಂದಿನ ದಿನಗಳಲ್ಲಿ ಜಿಲ್ಲೆಯಾಗುವುದು ಗ್ಯಾರಂಟಿ

KannadaprabhaNewsNetwork |  
Published : Jul 22, 2026, 01:15 AM IST
ಮಧುಗಿರಿಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಎಂಎಲ್‌ಸಿ ಆರ್.ರಾಜೇಂದ್ರ ವೀಕ್ಷಿಸಿದರು.  | Kannada Prabha

ಸಾರಾಂಶ

ಮಧುಗಿರಿ ಮುಂದೆ ಕಂದಾಯ ಜಿಲ್ಲೆಯಾಗುವ ಎಲ್ಲ ಲಕ್ಷಣಗಳಿದ್ದು ಅದಕ್ಕೆ ತಕ್ಕಂತೆ ಶಾಸಕರಾದ ರಾಜಣ್ಣನವರು ಈಗಿನಿಂದಲೇ ಕ್ರಮ ವಹಿಸಿದ್ದಾರೆ ಎಂದು ಎಂಎಲ್ಸಿ ಆರ್‌.ರಾಜೇಂದ್ರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಮಧುಗಿರಿ ಮುಂದೆ ಕಂದಾಯ ಜಿಲ್ಲೆಯಾಗುವ ಎಲ್ಲ ಲಕ್ಷಣಗಳಿದ್ದು ಅದಕ್ಕೆ ತಕ್ಕಂತೆ ಶಾಸಕರಾದ ರಾಜಣ್ಣನವರು ಈಗಿನಿಂದಲೇ ಕ್ರಮ ವಹಿಸಿದ್ದಾರೆ ಎಂದು ಎಂಎಲ್ಸಿ ಆರ್‌.ರಾಜೇಂದ್ರ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅ‍ವರು, ಮಧುಗಿರಿ ಬ್ರಿಟಿಷರ ಕಾಲದಲ್ಲಿಯೇ ಉಪವಿಭಾಗ ಕೇಂದ್ರವಾಗಿತ್ತು. ಪ್ರಸ್ತುತ ಮಧುಗಿರಿ, ಪಾವಗಡ, ಶಿರಾ ಹಾಗೂ ಕೊರಟಗೆರೆ ತಾಲೂಕುಗಳನ್ನು ಒಂದು ಗೂಡಿಸಿ ಆಡಳಿತಾತ್ಮಕ ದೃಷ್ಠಿಯಿಂದ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಮಧುಗಿರಿಯಲ್ಲಿ ಎಸ್ಪಿ,ಡಿಸಿ ,ಕಚೇರಿ ಹೊರತು ಪಡಿಸಿ ಇನ್ನೂಳಿದ ಎಲ್ಲ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸಲಾಗಿದ್ದು, ಅಧಿಕಾರಿಗಳು ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಹಾಗಾಗಿ ಮುಂಬರುವ ದಿನಗಳಲ್ಲಿ ಮಧುಗಿರಿ ಜಿಲ್ಲಾ ಕೇಂದ್ರವಾಗುವುದು ಗ್ಯಾರಂಟಿ ಎಂದರು.

ಇಲ್ಲಿ ದ್ವಿಪಥ ರಸ್ತೆ, ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನವನದ ಬಳಿ 60 ಅಡಿ ಎತ್ತರದ ಧ್ವಜಸ್ಥಂಭ ಹಾಗೂ ಪಾರ್ಕ್ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಈ ವೇಳೆ ಎಸಿ ಗೋಟೂರು ಶಿವಪ್ಪ,ಪಿಡಬ್ಲಯೂಡಿ ಇಇ ಹನುಮಂತರಾವ್,ಎಇಇ ಸಂಪತ್ ಕುಮಾರ್, ಪುರಸಭೆ ಚೀಫ್ ಆಫೀಸರ್ ಎಸ್. ಸುರೇಶ್, ವಲಯ ಅರಣ್ಯಾಧಿಕಾರಿ ಎಚ್.ಎಂ.ಸುರೇಶ್,ಪುರಸಭೆ ಮಾಜಿ ಅಧ್ಯಕ್ಷ ಎನ್‌.ಗಂಗಣ್ಣ,ಲಾಲಪೇಟೆ ಮಂಜುನಾಥ್,ಎಂ.ಕೆ.ನಂಜುಂಡರಾಜು,,ಮುಖಂಡರಾದ ಕುರುಬರಹಳ್ಳಿ ಹರ್ಷ ,ಬಾಬ ಫಕೃದ್ಧೀನ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ಜಿಡಿಪಿಗೆ ಹೈನುಗಾರಿಕೆಯಿಂದ ಶೇ. ೨೫ ರಷ್ಟು ಕೊಡುಗೆ
ನೀರನ್ನು ಮಿತವಾಗಿ ಬಳಸಲು ಮನವಿ