ಕನ್ನಡಪ್ರಭ ವಾರ್ತೆ ಔರಾದ್
ಪಟ್ಟಣದ ಬಸವ ಗುರುಕುಲ ಪ್ರಾಥಮಿಕ ಪ್ರೌಢಶಾಲಾ ಆವರಣದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳು ಕಸ ಗುಡಿಸುವಿಕೆ, ಶೌಚಾಲಯ ಸ್ವಚ್ಛತೆ ಸೇರಿದಂತೆ ಇನ್ನಿತರ ಬದುಕಿನ ಅವಶ್ಯಕತೆಗಳನ್ನು ಶಾಲಾ ಹಂತದಿಂದ ಕಲಿಸುವುದೆ ಶಿಕ್ಷಣದ ಮೂಲ ಉದ್ದೇಶ, ವೈಯಕ್ತಿಕ ಹಾಗೂ ಪರಿಸರ ಸ್ವಚ್ಛತೆ ಬಗ್ಗೆ ಶಿಕ್ಷಣ ಪಾಠಗಳನ್ನು ಹೊಂದಿದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ದೊರೆಯುವಂತೆ ಶಿಕ್ಷಕರು, ಸಂಸ್ಥೆಗಳು ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಭಾಲ್ಕಿ ಹಿರೇಮಠ ಸಂಸ್ಥಾನದಿಂದ ಶೈಕ್ಷಣಿಕ ಕಾರ್ಯಗಳು ಉತ್ತಮವಾಗಿ ನಡೆಯುತ್ತಿವೆ ಎಂದರು.
ಈ ಸಂದರ್ಭದಲ್ಲಿ ಗುರುನಾಥ ಬುಟ್ಟೆ, ಮನ್ಮತಪ್ಪ ಬಿರಾದಾರ್, ಸತೀಶ ಗಂದಿಗುಡೆ, ಡಾ. ಸಂಜೀವಕುಮಾರ ಜುಮ್ಮಾ, ಶರಣಪ್ಪ ನೌಬಾದೆ, ಶಿವಾನಂದ ಮುಕ್ತೆದಾರ್, ನಿರ್ಮಲಾ ಶೇರಿ, ಇಂದುಮತಿ ಎಡವೆ, ನಾಗನಾಥ ಶಂಕು, ಸಂಜೀವ ವಲಾಂಡೆ, ಬಾಲಾಜಿ ಸೇರಿದಂತೆ ಇನ್ನಿತರರಿದ್ದರು.