ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಅ. ೧೫ರಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಆಂತರಿಕ ಗುಣಮಟ್ಟ ಭರವಸಾ ಕೋಶ, ಶಿಕ್ಷಕ-ರಕ್ಷಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ನಾವು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳುವ ಕಾರ‍್ಯಕ್ರಮಗಳು ಸಂಸ್ಕೃತಿ, ಸಂಸ್ಕಾರ ಬೆಳೆಸುವಲ್ಲಿ ಪ್ರೇರಣಾದಾಯಕವಾಗಬೇಕು ಎಂದರು.ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರವಿರಾಜ್ ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವಾಗ ವಾಹನಗಳನ್ನು ಕೊಡುವಂತದ್ದು, ಅದರಲ್ಲೂ ಅವರಗಳಲ್ಲಿ ಲೈಸನ್ಸ್ ಹೊಂದಿರದೆ, ಹೆಲ್ಟೆಟ್ ಧರಿಸದೆ ವಾಹನ ಓಡಿಸುವಂತದ್ದು, ತಮ್ಮ ಮಕ್ಕಳ ಶಿಕ್ಷಣದ ದೃಷ್ಠಿಯಿಂದ ಮತ್ತು ಅಪಾಯದ ಕಾರಣದಿಂದಲೂ ಒಳಿತಲ್ಲ, ಈ ಬಗ್ಗೆ ಪೋಷಕರು ಜವಾಬ್ದಾರಿ ಹೊರಬೇಕು ಎಂದರು.ಕಾಲೇಜು ಅಭಿವೃದ್ಧಿ ಸಮಿತಿ ಕರ‍್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜಿ. ಕೃಷ್ಣ ರಾವ್ ಅರ್ತಿಲ , ಡಾ. ರಾಜಾರಾಮ್, ಮಹಾಲಿಂಗೇಶ್ವರ ಭಟ್ ಉಪಸ್ಥಿತರಿದ್ದರು. ಕಾರ‍್ಯಕ್ರಮ ಸಂಯೋಜನಾ ಸಮಿತಿಯ ಸುರೇಶ್ ಜಿ.ಕೆ., ತೇಜಸ್ವಿ ಕುಮಾರ್, ನೇಹಾ ಬಾನು, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.ಸಭೆಯಲ್ಲಿ ಪೋಷಕರಾದ ಹರಿರಾಮಚಂದ್ರ, ಚಂದ್ರಶೇಖರ ಮಡಿವಾಳ, ನಾರಾಯಣ ಗೌಡ, ಅಬ್ದುಲ್ ಮಜೀದ್, ಭಾರತಿ, ಗೀತಾ ಮತ್ತಿತರ ಪ್ರಮುಖರನ್ನು ಒಳಗೊಂಡಂತೆ ಸುಮಾರು ೩೦೦ಕ್ಕೂ ಮಿಕ್ಕಿ ಪೋಷಕರು ಭಾಗವಹಿಸಿದ್ದರು. ಕಾರ‍್ಯಕ್ರಮ ಸಂಯೋಜಕರಾದ ಹರಿಪ್ರಸಾದ್ ಸ್ವಾಗತಿಸಿ, ಉದಯಕುಮಾರ್ ಸಿ.ಆರ್. ವಂದಿಸಿದರು. ಮಂಜುನಾಥ ಬಿ.ಆರ್. ನಿರೂಪಿಸಿದರು.