ಕೃತಕವಾಗಿ ರಕ್ತ ತಯಾರಿಸಲು ಸಾಧ್ಯವಿಲ್ಲ: ಡಾ. ಗಡಾದ

KannadaprabhaNewsNetwork |  
Published : Sep 23, 2026, 02:45 AM IST
ಗದಗ ಸಾರಿಗೆ ನಗರದ ಈಶ್ವರ ದೇವಸ್ಥಾನದಲ್ಲಿ ರಕ್ತದಾನ ಶಿಬಿರ ಹಾಗೂ ಎನ್.ಸಿ.ಡಿ ತಪಾಸಣಾ ಶಿಬಿರ ನಡೆಯಿತು. | Kannada Prabha

ಸಾರಾಂಶ

ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಇದನ್ನು ಕೇವಲ ಮಾನವರಿಂದ ಮಾತ್ರ ಪಡೆಯಲು ಸಾಧ್ಯ.

ಕನ್ನಡಪ್ರಭ ವಾರ್ತೆ ಗದಗ

ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಇದನ್ನು ಕೇವಲ ಮಾನವರಿಂದ ಮಾತ್ರ ಪಡೆಯಲು ಸಾಧ್ಯ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್. ಗಡಾದ ಹೇಳಿದರು.

ಇಲ್ಲಿಯ ಕಳಸಾಪುರ ರಸ್ತೆಯಲ್ಲಿಯ ಸಾರಿಗೆ ನಗರದ ಈಶ್ವರ ದೇವಸ್ಥಾನದಲ್ಲಿ ಸಾರಿಗೆ ನಗರ ಯುಥ್ ಅಸೋಸಿಯೇಷನ್, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ನಾಗಾವಿ, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬಾಸೆಲ್ ಮಿಷನ್ ಆಸ್ಪತ್ರೆ ಹಾಗೂ ಸುರಕ್ಷಾ ಸ್ಕಿನ್ ಕೇರ್ ಕ್ಲಿನಿಕ್ ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರ ಹಾಗೂ ಎನ್.ಸಿ.ಡಿ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಜಾತಿ ಮತ ಭೇದವಿಲ್ಲದೆ ಒಬ್ಬರ ರಕ್ತ ಇನ್ನೊಬ್ಬರ ಜೀವ ಉಳಿಸುವುದರಿಂದ ಇದು ಸಮಾಜದಲ್ಲಿ ಮಾನವೀಯತೆ ಮತ್ತು ಒಗ್ಗಟ್ಟನ್ನು ಬೆಳೆಸುತ್ತದೆ. 18ರಿಂದ 65 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸುರಕ್ಷಿತವಾಗಿ ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡಿದ ನಂತರ ದೇಹವು ವೇಗವಾಗಿ ಹೊಸ ರಕ್ತದ ಕಣಗಳನ್ನು ಉತ್ಪಾದಿಸುತ್ತದೆ ಇದು ದೇಹವನ್ನು ಹೆಚ್ಚು ಸುಸ್ತು ರಹಿತವಾಗಿ ಮತ್ತು ಚುರುಕಾಗಿರಲು ಸಹಾಯಮಾಡುತ್ತದೆ ಎಂದರು.

ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ. ಎನ್.ಅಕ್ಷತಾ, ಬಾಸೆಲ್ ಮಿಷನ್ ಆಸ್ಪತ್ರೆಯ ಡಾ. ಅರುಣಿ, ಚರ್ಮರೋಗ ತಜ್ಞೆ ಡಾ. ಸರೋಜಾ ಪಾಟೀಲ, ವೈದ್ಯ ಡಾ. ರಾಘು, ಡಾ. ಚಂದ್ರಹಾಸ್ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದರು.

ಬಸವರಾಜ ಲಾಲಗಟ್ಟಿ, ದೇಹದಲ್ಲಿರುವ ಎಚ್.ಐ.ವಿ ಸ್ಥಿತಿಯನ್ನು ತಿಳಿದುಕೊಳ್ಳುವ ಕ್ಯೂಆರ್ ಕೋಡ್ ಸ್ವಯಂ ಪರೀಕ್ಷೆಯನ್ನು ಪ್ರಾತ್ಯಕ್ಷಿಕೆಯಾಗಿ ತಿಳಿಸಿಕೊಟ್ಟರು.

ಶ್ರೀನಿವಾಸ್ ಸಚಿನ್, ರವಿ ಸಾಲಿಮಠ, ವಿನಯ್ ಕಾಡದೇವರಮಠ, ಗುರುನಾಥ ಬಸವರೆಡ್ಡಿ, ಪ್ರತಕ್ ಅಮರಶೆಟ್ಟಿ, ಎಂ.ಕೆ. ಮಂಜುನಾಥ, ಎಸ್.ಬಿ. ಪಾಟೀಲ, ಅನ್ನಪೂರ್ಣೇಶ್ವರಿ, ರೇಣುಕಾ ಪಾಟೀಲ, ರತ್ನಾ ಲಮಾಣಿ, ದೇವಕ್ಕ ಚವಾಣ, ರೇಷ್ಮಾ ರಿತ್ತಿ ಸೇರಿದಂತೆ ಇತರರು ಇದ್ದರು. ನಾಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷತಾ ಅಧಿಕಾರಿ ಶಾಮುವೆಲ್ಲ ಕರಡಿಗುಡ್ಡ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಳುವರ ಬಹುದಿನಗಳ ಕನಸು ನನಸು: ಶುಭದ ರಾವ್
ಮೂರ್ನಾಡು ಪದವಿ ಕಾಲೇಜಿನಲ್ಲಿ ದತ್ತಿ ಉಪನ್ಯಾಸ, ಪ್ರಬಂಧ ಸ್ಪರ್ಧೆ