ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನೀವು ದಲಿತ ಸಂಘಟನೆಯ ಸರ್ವೋಚ್ಛ ನಾಯಕರಾಗಿದ್ದೀರಿ. ಸಮಾಜ, ಸಮುದಾಯಕ್ಕಾಗಿ ಹೋರಾಟ ಮಾಡಲಿ. ಅದನ್ನು ಬಿಟ್ಟು ಕ್ಷೇತ್ರದ ಶಾಸಕರಾದ ಕೆ.ಎಂ.ಉದಯ್ ಬಗ್ಗೆ ಲಘುವಾಗಿ ಟೀಕಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಅನ್ಯ ಸಮುದಾಯ ಮತ್ತು ನಮ್ಮ ಸಮುದಾಯಗಳ ನಡುವೆ ಗಲಾಟೆಯಾದರೆ ದಲಿತರ ಮೇಲಿನ ದೌರ್ಜನ್ಯ ಹೆಸರಿನಲ್ಲಿ ಆ ವ್ಯಕ್ತಿಗೆ ಬೆದರಿಕೆ ಅವರ ಬಳಿಯೇ ರೋಲ್ ಕಾಲ್ ಕೇಳುತ್ತೀರಿ. ಶಾಸಕರನ್ನು ಜೂಜುಕೋರರು, ಗೂಂಡಾಗಳು, ಅಕ್ರಮ ಚಟುವಟಿಕೆಗಳಿಗೆ ಅಧಿಕಾರ ಬಳಕೆ ಎಂದು ಟೀಕಿಸುವ ನಿಮಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.ಪದೇ ಪದೇ ಶಾಸಕರ ವಿರುದ್ಧ ವೈಯಕ್ತಿಕ, ಇಲ್ಲಸಲ್ಲದ ಟೀಕೆ ಬಾರದು. ಕ್ಷೇತ್ರದ ಶಾಸಕರಾದ ನಂತರ ಕೆ.ಎಂ.ಉದಯ್ ಅವರು 1200 ಕೋಟಿ ರು. ತಂದು ಅಭಿವೃದ್ಧಿ ಪಡಿಸಿದ್ದಾರೆ. ಮದ್ದೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೇಗೇರಿಸಿ ಜಾಗಕ್ಕೆ ಮೌಲ್ಯ ಒದಗಿಸುತ್ತಿದ್ದಾರೆ. ಅಲ್ಲದೇ ಗ್ರಾಪಂಗಳು ನಗರಸಭೆಗೆ ಸೇರುವುದರಿಂದ ಹಲವು ಸೌಕರ್ಯಗಳು ಸಿಗುತ್ತವೆ ಎಂದರು.
ಕ್ಷೇತ್ರದ 2 ಲಕ್ಷ ಜನ ಮತದಾರರು ಕೆ.ಎಂ.ಉದಯ್ ಅವರನ್ನು ಆಯ್ಕೆ ಮಾಡಿದ್ದಾರೆ. ಶಾಸಕರ ಬಗ್ಗೆ ವೈಯಕ್ತಿಕ ಟೀಕೆ ಮಾಡುವ ಮೊದಲು ದಾಖಲೆ ಸಮೇತ ನೀಡಿ. ಅನ್ಯಾಯ ಮಾಡಿದ್ದರೆ ತಿಳಿಸಿ ಅದು ಬಿಟ್ಟು ಕೆಲ ಕಿಡಿಗೇಡಿಗಳ ಮಾತು ಕೇಳಿ ಲಘು ಟೀಕೆ, ಸುಳ್ಳು ಹೇಳಿಕೆ ನೀಡಬಾರದು. ಇದೇ ರೀತಿ ವೈಯಕ್ತಿಕ ಟೀಕೆ ಮುಂದುವರೆದರೆ ಕಾನೂನು ವ್ಯಾಪ್ತಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಯಾವುದೇ ವೃತ್ತಿ ಬದುಕನ್ನು ಪ್ರಾರಂಭಿಸಿದ ನಂತರ ತಮ್ಮ ಸಮಾಜ ಸೇವೆ ಮೂಲಕ ಉದಯ್ ಅವರು ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶ ಮಾಡಿದರು. ಶಾಸಕರಾದ 2 ವರ್ಷದ ಅವಧಿಯಲ್ಲಿ ಯಾವುದೇ ಸಂಘಟನೆ, ಸಮುದಾಯವನ್ನು ಟೀಕೆ ಮಾಡದೇ ಸರ್ವ, ಧರ್ಮವನ್ನು ಪ್ರೀತಿಸುತ್ತಾ ಎಲ್ಲಾ ಸಮುದಾಯ, ಶೋಷಿತ, ರೈತಾಪಿ ವರ್ಗಕ್ಕೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.