ನೊಂದ ರೈತರಿಗೆ ನ್ಯಾಯ ದೊರಕಿಸುವುದು ನಮ್ಮ ಕರ್ತವ್ಯ: ಈ. ಪ್ರಕಾಶ್ ಸಲಹೆ

KannadaprabhaNewsNetwork |  
Published : Aug 03, 2025, 01:30 AM IST
38 | Kannada Prabha

ಸಾರಾಂಶ

ತಂತ್ರಜ್ಞಾನ ಮುಂದುವರೆದಂತೆ ಕಾಲ-ಕಾಲಕ್ಕೆ ಅಪ್‌ ಡೇಟ್ ಆಗಿ ಗುಣಮಟ್ಟದ ಕೆಲಸ ನಿರ್ವಹಿಸಬೇಕು ಎಂದು ಭೂಮಾಪಕರಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ಪೂರ್ವಜರು ಮಾಡಿರುವ ಧಾನ- ಧರ್ಮ ಒಳ್ಳೆ ಕೆಲಸಗಳಿಂದ ನಮಗೆ ಸರ್ಕಾರಿ ನೌಕರಿ ಸಿಕ್ಕಿದೆ. ನಮ್ಮ ಸೇವಾ ಅವಧಿಯಲ್ಲಿ ನೊಂದ ರೈತ ಬಾಂಧವರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವುದು ಪ್ರತಿಯೊಬ್ಬ ನೌಕರರ ಆದ್ಯ ಕರ್ತವ್ಯ ಆಗಬೇಕು ಎಂದು ಭೂ ದಾಖಲೆಗಳ ಪ್ರಾದೇಶಿಕ ಜಂಟಿ ನಿರ್ದೇಶಕ ಈ. ಪ್ರಕಾಶ್ ಸಲಹೆ ನೀಡಿದರು.

ನಗರದ ಸಂದೇಶ್ ಪ್ರಿನ್ಸ್ ಹೊಟೇಲ್‌ ನಲ್ಲಿ ವಯೋ ನಿವೃತ್ತಿ ಹೊಂದಿದ ಎಡಿಎಲ್ಆರ್ ಎಚ್. ಮಂಜುನಾಥ್, ಸಿಬ್ಬಂದಿ ಯಶೋಧಮ್ಮ, ಬೀರೇಗೌಡ ಅವರಿಗೆ ಬಿಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಚೇರಿ ವೇಳೆಯಲ್ಲಿ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಬದಿಗೊತ್ತಿ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕಾಗಿರುವುದು ಅನಿರ್ವಾಯ ಎಂದರು.

ಭೂಮಾಪನ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಪಿ. ಶ್ರೀನಿವಾಸ್ ಮಾತನಾಡಿ, ತಂತ್ರಜ್ಞಾನ ಮುಂದುವರೆದಂತೆ ಕಾಲ-ಕಾಲಕ್ಕೆ ಅಪ್‌ ಡೇಟ್ ಆಗಿ ಗುಣಮಟ್ಟದ ಕೆಲಸ ನಿರ್ವಹಿಸಬೇಕು ಎಂದು ಭೂಮಾಪಕರಿಗೆ ಸಲಹೆ ನೀಡಿದರು.

ಭೂದಾಖಲೆಗಳ ಉಪ ನಿರ್ದೇಶಕಿ ಕೆ. ರಮ್ಯಾ, ಯುಪಿಒಆರ್ ಯೋಜನಾಧಿಕಾರಿ ಜಿ. ಸೀಮಂತಿನಿ, ಎಡಿಎಲ್‌ಆರ್ ಎಸ್. ಶಿವಕುಮಾರ್, ಕೆ.ಪಿ. ಮೇಘಾ, ಚಿಕ್ಕಣ್ಣ, ಅಧೀಕ್ಷಕರಾದ ಎಂ.ವಿ. ನಾಗೇಶ್, ಎಚ್. ಕುಮಾರ್, ಕೆ.ಬಿ. ಸಿದ್ದಯ್ಯ, ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಪ್ಪ, ಪರ್ಯಾವೇಕ್ಷಕರಾದ ಬೀರೇಗೌಡ, ಜಿ. ಲೋಕೇಶ್, ಸ್ವಾಮಿ, ಅನಿಲ್ ಕೆ ಅಂಥೋನಿ, ನಾಗರಾಜು, ಕೀರ್ತಿಕುಮಾರ್, ರಾಜನಾಯಕ, ಆರ್. ನಾಗರಾಜು, ಚಂದ್ರು, ನಂಜುಂಡೇಗೌಡ, ವೆಂಕಟೇಗೌಡ, ವಿ. ಶ್ರೀಧರ್, ಭೂಮಾಪಕರಾದ ಎಂ.ಕೆ. ಪ್ರಕಾಶ್, ಶಂಕರಪ್ಪ, ನಾಗಭೂಷಣ, ಕೋಮಾರೇಗೌಡ, ಕಂಚಿನಕೆರೆ ದೇವರಾಜು, ಶಾಂತಮಲ್ಲಪ್ಪ, ಶಶಿಧರ್‌ ಮೂರ್ತಿ, ಫಣಿರಾಜ್, ಮಹದೇವಸ್ವಾಮಿ, ಬಿಂದು, ಲಕ್ಷ್ಮಿ, ರೂಪಾ, ನವ್ಯಶ್ರೀ, ಕಾವ್ಯಶ್ರೀ, ಶಾನ್‌ ವಾಜ್, ಕಂಚೀರಾಯ, ಜಯಪಾಲ್, ಮಹದೇವಸ್ವಾಮಿ, ವೆಂಕಟೇಶ್ ಮೊದಲಾದವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ