ತುಮಕೂರು: ಎಂ. ಎಂ. ಕಲ್ಬುರ್ಗಿ ಕನ್ನಡ ಶಾಸನ ಹಾಗೂ ವಚನ ಸಾಹಿತ್ಯದ ಸಂಶೋಧನೆಗೆ ಶ್ರಮಿಸಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶರಣ ಸೇನಾ ಸಂಚಾಲಕ ಎಚ್. ಎಲ್. ಕುಮಾರಸ್ವಾಮಿ ಹೇಳಿದರು.
ಕಲ್ಬುರ್ಗಿ ಅವರು ವಚನ ಸಾಹಿತ್ಯದ ನೈಜ ಅಂಶಗಳನ್ನು ಜಗತ್ತಿಗೆ ಪರಿಚಯಿಸಿದರು. ಸಂಶೋಧನೆ ಹಾಗೂ ಐತಿಹಾಸಿಕ ದಾಖಲೆಯ ಸಮೇತ ನೀಡಿದ ವಿಚಾರಧಾರೆಗಳನ್ನು ಕನ್ನಡ ನೆಲದಲ್ಲಿ ಕಾಯಕ ಜೀವಿಗಳಿಂದ ಲಿಂಗಾಯತ ಧರ್ಮ ಹುಟ್ಟಿದೆ. ಈ ಧರ್ಮದ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರಬೇಕು ಎಂದರು.ಜಾಗತಿಕ ಲಿಂಗಾಯತ ಮಹಾಸಭಾ ಯುವ ಘಟಕದ ರಾಜ್ಯ ಸಂಚಾಲಕರು ರಾಯಸಂದ್ರ ರವಿಕುಮಾರ್ ಮಾತನಾಡಿ, ಡಾ. ಎಂ. ಎಂ. ಕಲ್ಬುರ್ಗಿ 12ನೇ ಶತಮಾನದ ಬಸವಣ್ಣರ ವಚನ ಸಾಹಿತ್ಯವನ್ನು ಹುಡುಕಿ ಸತ್ಯಾಂಶವನ್ನು ಜಗತ್ತಿಗೆ ತಿಳಿಸಿದ್ದಕ್ಕೆ ಇದನ್ನು ಸಹಿಸದ ಮೂಲಭೂತವಾದಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಆದರೆ ಇಂದು ವ್ಯಕ್ತಿಯನ್ನ ಕೊಂದಿರಬಹುದೇ ಹೊರೆತು ವಿಚಾರಗಳನ್ನಲ್ಲ. ಬಸವಣ್ಣ ಹಾಕಿಕೊಟ್ಟ ಹಾದಿಯಲ್ಲಿ ಕಲ್ಬುರ್ಗಿಯವರು ಸಾಗುತ್ತಿದ್ದರು. ಲಿಂಗಾಯತ ಎಂಬುದು ಜಾತಿಯಲ್ಲ ಅದೊಂದು ಧರ್ಮ. ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, ಸಮಾನತೆಯ ಧರ್ಮ ಎಂದು ನುಡಿದರು.ಕೈಗರಿಕೊದ್ಯಮಿ ಡಿ.ಬಿ. ಶಿವಾನಂದ ಮಾತನಾಡಿ, ಎಂ. ಎಂ. ಕಲ್ಬುರ್ಗಿ ತಮ್ಮ ರಕ್ತದ ಕಣ ಕಣದಲ್ಲೂ ಬಸವತತ್ವ ಮೈಗೂಡಿಸಿಕೊಂಡಿದ್ದರು. ಅವರನ್ನು ಕೊಂದಾಗ ಚಿಮ್ಮಿದ್ದು ರಕ್ತವಲ್ಲ ಬಸವಾದಿ ಶರಣರ ವಿಚಾರಧಾರೆಗಳು ಎಂದು ಹೇಳಿದರು.
ರಾಜೇಶ್ವರಿ ಶಿವಾನಂದ, ಸಿದ್ದು ಬಿ.ಎಸ್. ಸೂರನಹಳ್ಳಿ, ಬಸವರಾಜು, ದೇವರಾಜು ಕೆ, ಅಭಿಷೇಕ್ ಹಿರೇಮಠ್, ಗೋಪಾಲಕೃಷ್ಣ, ಮತ್ತಿತರ ಭಾರತೀಯ ಶರಣಸೇನಾ ಸದಸ್ಯರು ಇದ್ದರು.ಬಸವಕಲ್ಯಾಣದ ಫೈಲ್ ಬರಲಿ