-ನನ್ನಿವಾಳ, ಕಾಲುವೇಹಳ್ಳಿ, ಹಿರೇಹಳ್ಳಿ ವ್ಯಾಪ್ತಿಯಲ್ಲಿ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿ, ಲಕ್ಷಾಂತರ ನಷ್ಟ.
ಕನ್ನಡಪ್ರಭವಾರ್ತೆ ಚಳ್ಳಕೆರೆತಾಲೂಕಿನಾದ್ಯಂತ ಶನಿವಾರ ರಾತ್ರಿ ಸುರಿದ ಮಳೆಗೆ ಕೆಲವು ಜಮೀನುಗಳಲ್ಲಿ ನೀರು ನುಗ್ಗಿ ಲಕ್ಷಾಂತರ ರುಪಾಯಿ ಬೆಳೆ ನಷ್ಟವಾಗಿದೆ. ಮಳೆಯಿಂದ ಗ್ರಾಮೀಣ ಭಾಗದ ಬಹುತೇಕ ಜಮೀನುಗಳಲ್ಲಿ ನೀರು ನುಗ್ಗಿ ಅಪಾರಹಾನಿ ಹಾಗೂ ನಷ್ಟವನ್ನು ಉಂಟುಮಾಡಿದೆ.
ತಾಲೂಕಿನ ತಳಕು ಕಾಲುವೇಹಳ್ಳಿಯಲ್ಲಿ ಬಾಲಣ್ಣ ಎಂಬವರಿಗೆ ಸೇರಿದ ರಿ ಸರ್ವೆ ನಂ. ೧೧/೨ರಲ್ಲಿ ಮೂರು ಎಕರೆ ಪ್ರದೇಶದಲ್ಲಿದ್ದ ಮೆಕ್ಕೆಜೋಳ ಬೆಳೆ ನೀರಿನಿಂದ ಆವೃತ್ತವಾಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ತಾಲೂಕಿನಲ್ಲಿ ಕಸಬಾ ಹೋಬಳಿಯ ನನ್ನಿವಾಳ ಗ್ರಾಮದ ಓಬಮ್ಮ ಎಂಬುವವರಿಗೆ ಸೇರಿದ ರಿ ಸರ್ವೆ, ನಂ. ೧೪೧/೪ರಲ್ಲಿದ್ದ ಎರಡು ಎಕರೆ ಈರುಳ್ಳಿ ಬೆಳೆ ನೀರಿನಿಂದ ಕೊಚ್ಚಿಹೋಗಿದೆ.ಓಬಯ್ಯನಹಟ್ಟಿಯ ರಿ.ಸರ್ವೆ, ನಂ. ೨೬ ಮತ್ತು ೨೭ರಲ್ಲಿ ನಾಗಭೂಷಣ್ ಎಂಬುವವರಿಗೆ ಸೇರಿದ ಎರಡು ಎಕರೆ ಈರುಳ್ಳಿಬೆಳೆ ನೀರಿನಿಂದ ಆವೃತ್ತವಾಗಿ ೫೦ ಸಾವಿರ ನಷ್ಟ ಸಂಭವಿಸಿದೆ. ಇದೇ ಗ್ರಾಮದ ರಿ.ಸರ್ವೆ, ನಂ ೨೩/೩ರ ತಿಪ್ಪಮ್ಮ ಎಂಬವರಿಗೆ ಸೇರಿದ ಎರಡು ಎಕರೆ ಪ್ರದೇಶದ ಶೇಂಗಾ ಸಂಪೂರ್ಣ ಮಳೆಯ ನೀರಿಗೆ ಕೊಚ್ಚಿಹೋಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.
--
ಚಳ್ಳಕೆರೆ ತಾಲೂಕಿನ ಓಬಯ್ಯನಹಟ್ಟಿಯಲ್ಲಿ ಹಿರೇಕಾಯಿ ಬೆಳೆ ಗಾಳಿ, ಮಳೆಗೆ ಸಂಪೂರ್ಣ ನೆಲಕಚ್ಚಿರುವುದು.
ಪೋಟೋ:೧೮ಸಿಎಲ್‌ಕೆ೦೩